Asianet Suvarna News Asianet Suvarna News

ನಾಯಿ ಮಾಂಸಕ್ಕೆ ನಿಷೇಧ, ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ವಿಧೇಯಕ ಪಾಸ್‌!

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಮಾರಾಟ ಉದ್ಯಮ ಬಹಳ ದೊಡ್ಡದಾಗಿ ಬೆಳೆದಿದೆ. ಆದರೆ, ದೇಶದ ಸಂಸತ್ತಿನಲ್ಲಿ ನಾಯಿ ಮಾಂಸಕ್ಕೆ ನಿಷೇಧ ಹೇರಿದ್ದು ಮಾತ್ರವಲ್ಲದೆ, ಈ ಉದ್ಯಮದಲ್ಲಿರುವ ವ್ಯಕ್ತಿಗಳು ಬೇರೆ ಕೆಲಸವನ್ನು ಪಡಡೆಯುವವರೆಗೂ ಅವರಿಗೆ ಸರ್ಕಾರದಿಂದಲೇ ಸಹಾಯ ಮಾಡುವ ನಿರ್ಧಾರವನ್ನೂ ಮಾಡಲಾಗಿದೆ.

South Korea passes bill banning dog meat consumption san
Author
First Published Jan 9, 2024, 4:16 PM IST

ಸಿಯೋಲ್‌ (ಜ.9): ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತು ದೇಶದಲ್ಲಿ ನಾಯಿ ಮಾಂಸ ಸೇವೆನಯನ್ನು ನಿಷೇಧಿಸುವ ವಿಶೇಷ ಮಸೂದೆಯನ್ನು ಮಂಗಳವಾರ ಅಂಗೀಕರಿಸಿದೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸೇವನೆ ಮಾಡುವವರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆಯಾಗಿತ್ತು. ಇದರ ಬೆನ್ನಲ್ಲಿಯೇ ಈ ಅಭ್ಯಾಸವನ್ನು ಕೊನೆ ಮಾಡಲು ಸರ್ಕಾರವೇ ಹೊಸ ಮಸೂದೆಯೊಂದಿಗೆ ನಿರ್ಧಾರ ಮಾಡಿದೆ. ನಾಯಿಗಳ ಸಂತಾನೋತ್ಪತ್ತಿ, ಮಾಂಸಕ್ಕಾಗಿ ನಾಯಿಗಳನ್ನು ಕತ್ತರಿಸುವುದು ಮತ್ತು ಮಾರಾಟ ಮಾಡುವದನ್ನು ಈ ಮಸೂದೆಯು ನಿಷೇಧಿಸುತ್ತದೆ. ಮಸೂದೆಯ ಪರವಾಗಿ ಸಂಸತ್ತಿನಲ್ಲಿ 208 ಮತಗಳು ಬಂದಿದ್ದು, ಇಬ್ಬರು ಗೈರಾಗಿರುವುದರೊಂದಿಗೆ ಈ ಮಸೂದೆ ಅಂಗೀಕಾರವಾಗಿದೆ ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ದೇಶದಲ್ಲಿ ಪ್ರಾಣಿಗಳ ಹಕ್ಕುಗಳ ಜಾಗೃತಿ ಮತ್ತು ಸಾಕುಪ್ರಾಣಿಗಳ ಮಾಲೀಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಪೀಪಲ್ ಪವರ್ ಪಾರ್ಟಿ (ಪಿಪಿಪಿ) ಮತ್ತು ಪ್ರಮುಖ ವಿರೋಧ ಪಕ್ಷ ಡೆಮಾಕ್ರಟಿಕ್ ಪಾರ್ಟಿ (ಡಿಪಿ) ಜಂಟಿಯಾಗಿ ನಿಷೇಧಕ್ಕೆ ಒತ್ತಾಯ ಮಾಡಿದ್ದವು.

ನಾಯಿ ಮಾಂಸ ಉದ್ಯಮದಲ್ಲಿಯೇ ಈವರೆಗೂ ಬದುಕು ಕಂಡುಕೊಂಡಿದ್ದ ಜನರಿಗೆ ಉದ್ಯೋಗಗಳನ್ನು ಬದಲಾಯಿಸಲು ಸಹಾಯ ಮಾಡಲು ಕೇಂದ್ರದಿಂದ ಸಬ್ಸಿಡಿಗಳನ್ನು ನೀಡಲಾಗುತ್ತದೆ ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ. ದೇಶದ ಪ್ರಥಮ ಮಹಿಳೆ ಕಿಮ್ ಕಿಯೋನ್ ಹೀ ಕೂಡ ನಿಷೇಧಕ್ಕೆ  ಬೆಂಬಲವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ, ಅಭ್ಯಾಸವನ್ನು ಕಾನೂನುಬಾಹಿರಗೊಳಿಸುವುದು ಅಧ್ಯಕ್ಷ ಯೂನ್ ಸುಕ್ ಯೆಲ್ ಅವರ ಅಧ್ಯಕ್ಷೀಯ ಪ್ರಚಾರದ ಭರವಸೆಗಳಲ್ಲಿ ಒಂದಾಗಿತ್ತು ಎಂದು ಅವರು ಹೇಳಿದ್ದಾರೆ. ಯೂನ್‌ ಹಾಗೂ ಕಿಮ್‌ ಇಬ್ಬರೂ
ಸಾಕು ಪ್ರಾಣಿಗಳ ಪ್ರೇಮಿಗಳು. ಇವರು ಈಗಾಗಲೇ ನಾಲ್ಕು ಶ್ವಾನಗಳು ಹಾಗೂ ಮೂರು ಬೆಕ್ಕುಗಳನ್ನು ಸಾಕುತ್ತಿದ್ದಾರೆ.

ಮೂರು ವರ್ಷಗಳ ಗ್ರೇಸ್ ಅವಧಿಯ ನಂತರ ಕಾನೂನು 2027 ರಲ್ಲಿ ಜಾರಿಯಾಗಲು ಪ್ರಾರಂಭವಾಗಲಿದೆ. ಈ ಕಾನೂನು ಉಲ್ಲಂಘಿಸುವವರು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ 30 ಮಿಲಿಯನ್ ವರೆಗೆ ದಂಡವನ್ನು ($22,768 ಅಂದಾಜು 19 ಲಕ್ಷ ರೂಪಾಯಿ) ಎದುರಿಸಬೇಕಾಗುತ್ತದೆ.  ಸರ್ಕಾರದ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕೊರಿಯಾದಲ್ಲಿ ಸುಮಾರು 1,150 ನಾಯಿ ಸಾಕಣೆ ಕೇಂದ್ರಗಳು, 34 ನಾಯಿ ಮಾಂಸದ ಕೇಂದ್ರಗಳು, 219 ವಿತರಕರು ಮತ್ತು ಸುಮಾರು 1,600 ರೆಸ್ಟೋರೆಂಟ್‌ಗಳು ನಾಯಿ ಮಾಂಸದಿಂದ ತಯಾರಿಸಿದ ಆಹಾರವನ್ನು ಮಾರಾಟ ಮಾಡುತ್ತವೆ. ದಕ್ಷಿಣ ಕೊರಿಯಾದ ಪ್ರಾಣಿ ದಯಾ ಸಂಘಗಳು ತಕ್ಷಣವೇ ನಿಷೇಧವನ್ನು ಸ್ವಾಗತಿಸಿದವು.

ದಕ್ಷಿಣ ಕೊರಿಯಾ ಜನ ನಾಯಿ ಮಾಂಸ ತಿನ್ನೋದೇಕೆ?

"ಈ ನಿಷೇಧವು ಪ್ರಾಣಿಗಳ ರಕ್ಷಣೆಗೆ ದಕ್ಷಿಣ ಕೊರಿಯಾದ ಅಭ್ಯಾಸದಲ್ಲಿ ಮಹತ್ವದ ತಿರುವು ನೀಡುತ್ತದೆ ಎಂದು ನಾವು ನಂಬುತ್ತೇವೆ' ಎಂದು ಪ್ರಾಣಿ ದಯಾ ಗುಂಪುಗಳಲ್ಲಿ ಒಂದಾದ ಹ್ಯೂಮನ್ ಸೊಸೈಟಿ ಇಂಟರ್ನ್ಯಾಷನಲ್‌ನ ಲೀ ಸಾಂಗ್-ಕ್ಯುಂಗ್ ತಿಳಿಸಿದ್ದಾರೆ. "(ಇದು) ನಮ್ಮ ಪ್ರಾಣಿ-ಪ್ರೀತಿಯ ಸಾರ್ವಜನಿಕ ಮತ್ತು ರಾಜಕಾರಣಿಗಳ ಉತ್ಸಾಹ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. ನಮ್ಮ ದೇಶದ ಮಾಂಸಾಹಾರ ಪದ್ಧತಿಯ ಸಂಸ್ಜೃತಿಯಾಗಿದ್ದ ನಾಯಿ ಮಾಂಸ ಸೇವನೆಯನ್ನು ಇವರೆಲ್ಲರೂ ಇತಿಹಾಸದ ಪುಟಕ್ಕೆ ಸೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾರಾಟ: ಈ ಹೋಟೆಲ್‌ಗೆ ಹೋಗೋ ಮುನ್ನ ಎಚ್ಚರ!

Follow Us:
Download App:
  • android
  • ios