Nobel Prize in Literature 2024: ದಕ್ಷಿಣ ಕೊರಿಯಾದ ಹಾನ್ ಕಾಂಗ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ
ಮಾನವ ಜೀವನದ ಅಂತರಾಳಗಳು ಹಾಗೂ ಚಿಂತೆಗಳ ಕುರಿತಾಗಿ ಕಥೆಗಳನ್ನು ಹಣೆದಿದ್ದಕ್ಕಾಗಿ ದಕ್ಷಿಣ ಕೊರಿಯಾದ ಹಾನ್ ಕಾಂಗ್‌ಗೆ 2024ರ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದ್ದು, ಡಿಸೆಂಬರ್ 10 ರಂದು ಅವರು 8.9 ಕೋಟಿ ರೂಪಾಯಿ ಬಹುಮಾನ ಪಡೆದುಕೊಳ್ಳಲಿದ್ದಾರೆ.
ಬೆಂಗಳೂರು (ಅ.10): ಸಾಹಿತ್ಯ ವಿಭಾಗದ 2024ರ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ವರ್ಷ ದಕ್ಷಿಣ ಕೊರಿಯಾದ ಹಾನ್ ಕಾಂಗ್ ಈ ಬಹುಮಾನ ಪಡೆದಿದ್ದಾರೆ. ಜೀವನಸ್ಪರ್ಶಿ ಕಥೆಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದ್ದಕ್ಕಾಗಿ ಆಕೆಗೆ ಈ ಗೌರವ ನೀಡಲಾಗಿದೆ. ಹಾನ್ ಕಾಂಗ್ 1993 ರಲ್ಲಿ ಕವನಗಳನ್ನು ಬರೆಯುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 1995 ರಲ್ಲಿ, ಅವರು ಕಥೆಗಳನ್ನು ಬರೆಯಲು ಆರಂಭ ಮಾಡಿದ್ದರು. ಹಾನ್ ಕಾಂಗ್ ನೊಬೆಲ್ ಪ್ರಶಸ್ತಿಯನ್ನು ಗೆದ್ದ 18 ನೇ ಮತ್ತು ಮೊದಲ ಕೊರಿಯಾದ ಮಹಿಳೆ. ಇದಕ್ಕೂ ಮೊದಲು, ಅವರು 2016 ರಲ್ಲಿ 'ದಿ ವೆಜಿಟೇರಿಯನ್' ಕಾದಂಬರಿಗಾಗಿ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಕಾದಂಬರಿಯು ಅವರಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
ನೊಬೆಲ್ ಸಮಿತಿಯು ವಿಶೇಷವಾಗಿ ಹಾನ್ ಕಾಂಗ್ ಅವರ 'ಗ್ರೀಕ್ ಲೆಸನ್' ಕಾದಂಬರಿಯನ್ನು ಪ್ರಶಸ್ತಿಗಾಗಿ. ದನಿ ಕಳೆದುಕೊಂಡು ಜೀವನದಲ್ಲಿ ಕಷ್ಟಪಡುವ ಹುಡುಗಿಯೊಬ್ಬಳ ಕಥೆ ಇದು. ಅವಳು ದೃಷ್ಟಿ ಕಳೆದುಕೊಳ್ಳುತ್ತಿರುವ ಗ್ರೀಕ್ ಶಿಕ್ಷಕನನ್ನು ಭೇಟಿಯಾಗುತ್ತಾಳೆ. ಸಂವಹನದ ಅಡೆತಡೆಗಳ ನಡುವೆಯೂ ಇಬ್ಬರ ನಡುವೆ ಬೆಳೆಯುವ ಸಂಬಂಧವನ್ನು ಈ ಕಾದಂಬರಿ ಸುಂದರವಾಗಿ ಚಿತ್ರಿಸುತ್ತದೆ.
ಇದಕ್ಕೂ ಮೊದಲು ವೈದ್ಯಕೀಯ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ, ಭೌತಶಾಸ್ತ್ರಕ್ಕಾಗಿ ಜೆಫ್ರಿ ಇ. ಹಿಂಟನ್ ಮತ್ತು ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ರಸಾಯನಶಾಸ್ತ್ರಕ್ಕಾಗಿ ಡೇವಿಡ್ ಬೇಕರ್, ಜಾನ್ ಜಂಪರ್ ಮತ್ತು ಡೆಮಿಸ್ ಹಸ್ಸಾಬಿಸ್ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ನೊಬೆಲ್ ಸಮಿತಿಯು ಆಯ್ದ ದೇಶಗಳ ನಾಗರಿಕರಿಗೆ ಬಹುಮಾನಗಳನ್ನು ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ ಈ ಬಾರಿ ಸಮಿತಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ದಕ್ಷಿಣ ಕೊರಿಯಾದ ಬರಹಗಾರರಿಗೆ ಪ್ರಶಸ್ತಿ ನೀಡಿದೆ. ಈ ನೊಬೆಲ್ ಪ್ರಶಸ್ತಿ ವಿತರಣೆಯು ಅಕ್ಟೋಬರ್ 14 ರವರೆಗೆ ಮುಂದುವರಿಯುತ್ತದೆ. ವಿಜೇತರಿಗೆ 8.90 ಕೋಟಿ ರೂಪಾಯಿ ಬಹುಮಾನವನ್ನು ನೀಡಲಾಗುತ್ತಿದೆ. 2023 ರ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ನಾರ್ವೆಯ ಬರಹಗಾರ ಜಾನ್ ಫಾಸ್ಸೆ ಅವರಿಗೆ ನೀಡಲಾಗಿತ್ತು. ಅವರ ನಾಟಕಗಳು ಮತ್ತು ಕಥೆಗಳಿಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದ್ದರು.
ವಿಕ್ಟರ್ ಅಂಬ್ರೋಸ್, ಗ್ಯಾರಿ ರುವ್ಕುನ್‌ಗೆ 2024ರ ಮೆಡಿಸಿನ್ ನೊಬೆಲ್ ಪುರಸ್ಕಾರ