ಫ್ಲೈಟ್‌ನಲ್ಲಿ ಸೇರಿಕೊಂಡ ಹಾವು ಟ್ವಿಟ್ಟರ್‌ನಲ್ಲಿ ವಿಡಿಯೋ ವೈರಲ್ ಕೌಲಾಲಂಪುರದಿಂದ ಮಲೇಷ್ಯಾಕ್ಕೆ ತೆರಳುತ್ತಿದ್ದ ಹಾವು
ಸರೀಸೃಪಗಳಾದ ಹಾವುಗಳು ವಾಹನಗಳಾದ ಬೈಕ್, ಕಾರು ಲಾರಿ ಮುಂತಾದವುಗಳ ಒಳಗೆ ನುಗ್ಗಿ ಮುದುಡಿ ಮಲಗುವುದು ಹೆಚ್ಚಾಗಿ ಮಳೆಗಾಲದಲ್ಲಿ ಸಾಮಾನ್ಯವಗಿರುತ್ತದೆ. ಆದರೆ ಇಲ್ಲೊಂದು ಹಾವು ಕಾರು ಬೈಕ್ ಅಲ್ಲ ವಿಮಾನವನ್ನೇರಿ ಕುಳಿತಿದೆ. ಹೌದು ಏರ್ ಏಷ್ಯಾ ಎ320-200 ಸಂಖ್ಯೆಯ ವಿಮಾನದೊಳಗೆ ಹಾವು ಪತ್ತೆಯಾಗಿದ್ದು, ಪ್ರಯಾಣಿಕರು ಹೌಹಾರಿದ್ದಾರೆ. ಈ ವಿಮಾನವು ಕೌಲಾಲಂಪುರದಿಂದ ಮಲೇಷ್ಯಾದ ತವೌಗೆ ತೆರಳುತ್ತಿತ್ತು.
'ಸ್ನೇಕ್ ಆನ್ ಎ ಪ್ಲೇನ್' ಚಲನಚಿತ್ರದಂತೆ ನಿಜ ಜೀವನದಲ್ಲಿ ನಿಮ್ಮ ವಿಮಾನದಲ್ಲಿ ಹಾವಿದ್ದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ಅದೇ ಯೋಚನೆಯಿಂದ ಬೆಚ್ಚಿ ಬಿದ್ದಿದ್ದಾರೆ. ವಿಮಾನದ ಪೈಲಟ್ ಹನಾ ಮೊಹ್ಸಿನ್ ಖಾನ್ ಅವರು ಈ ಹಾವಿದ್ದ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಆ ವಿಡಿಯೋದಲ್ಲಿ ಹಾವು ವಿಮಾನದಲ್ಲಿ ಹರಿದಾಡುತ್ತಿರುವ ವಿಡಿಯೋ ಇದೆ.
ವೀಡಿಯೊದಲ್ಲಿ, ವಿಮಾನದ ಮೇಲ್ಭಾಗದ ಲೈಟ್ ಇರುವಂತಹ ಪ್ರದೇಶದಲ್ಲಿ ಹಾವು ಸಿಲುಕಿಕೊಂಡಿರುವುದನ್ನು ಕಾಣಬಹುದು. ಏರ್ ಏಷ್ಯಾ ಏರ್‌ಬಸ್ ಎ320-200 ವಿಮಾನವು ಕೌಲಾಲಂಪುರದಿಂದ ಮಲೇಷ್ಯಾದ ತವೌಗೆ ತೆರಳುತ್ತಿತ್ತು. ಹಾವು ಪ್ರಯಾಣಿಕರ ಸಾಮಾನು ಸರಂಜಾಮುಗಳೊಂದಿಗೆ ಒಳ ಪ್ರವೇಶಿಸಿರಬೇಕು ಅಥವಾ ನೆಲದಿಂದಲೇ ವಿಮಾನದೊಳಗೆ ಬಂದಿರಬೇಕು. ವಿಮಾನ ಆಕಾಶದಲ್ಲಿ ಹಾರುತ್ತಿರುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
Olivia Culpo Dress: ದೇಹ ಮುಚ್ಚಿಕೋ, ಇಲ್ಲ ಹೊರಗೆ ನಡಿ: ಮಾಜಿ ವಿಶ್ವಸುಂದರಿಗೆ ಏರ್‌ಲೈನ್ಸ್ ವಾರ್ನಿಂಗ್
ಅಯ್ಯೋ! ವಿಮಾನದಲ್ಲಿ ಹಾವು! ಇದು ಪ್ರಯಾಣಿಕನ ಲಗೇಜ್‌ನಿಂದ ತಪ್ಪಿಸಿಕೊಂಡ ಸಾಕುಪ್ರಾಣಿಯಾಗಿರಬಹುದು ಅಥವಾ ನೆಲದಿಂದಲೇ ವಿಮಾನದೊಳಗೆ ಪ್ರವೇಶಿಸಿರಬಹುದು. ಕೌಲಾಲಂಪುರದಿಂದ ತವೌಗೆ ಚಲಿಸುತ್ತಿದ್ದಏರ್ ಏಷ್ಯಾ ಏರ್‌ಬಸ್ A320-200 ವಿಮಾನವನ್ನು ಬೇರೆಡೆಗೆ ತಿರುಗಿಸುವವರೆಗೂ ಈ ಹಾವು ಬೆಳಕಿರುವ ಪ್ರದೇಶದಲ್ಲಿ ಸಂತೋಷದಿಂದ ಇತ್ತು ಎಂದು ಬರೆದು ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ವೀಡಿಯೋವನ್ನು ನೋಡಿದ ನಂತರ ಟ್ವಿಟ್ಟರ್ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ. ನಾನು ಹಾವನ್ನು ನೋಡಿದ್ದರೆ ವಿಮಾನದಿಂದ ಓಡಿ ಹೋಗುತ್ತಿದೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಮತ್ತು ನಂಬಲಾಗಿದೆ. ಕೆಲವೊಮ್ಮೆ ನಾಯಿ ಮಾಲೀಕರು ಅವುಗಳನ್ನು ಮುದ್ದಿಸುವ ಸಲುವಾಗಿ ವಿಪರೀತವಾದುದನ್ನು ಮಾಡುತ್ತಾರೆ. ಈ ಹಿಂದೆ ಆಸ್ಟ್ರೇಲಿಯನ್ ದಂಪತಿಗಳು (Australian couple) ಕ್ರಿಸ್ಮಸ್ ಸಮಯದಲ್ಲಿ ನ್ಯೂಜಿಲೆಂಡ್‌ನಿಂದ ತಮ್ಮ ನಾಯಿಯನ್ನು ಮನೆಗೆ ತರಿಸಲು ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆಯಲು ಹತ್ತಾರು ಸಾವಿರ ಡಾಲರ್‌ಗಳನ್ನು ಖರ್ಚು ಮಾಡಿದ್ದರು. ಈ ಇಡೀ ಪ್ರಕ್ರಿಯೆಗೆ ತುಂಬಾ ಹಣ ಖರ್ಚಾಗಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ನಾಯಿಗೆ 'ಮಿಲಿಯನ್ ಡಾಲರ್ ಮಂಚ್ಕಿನ್ ಎಂದು ನಾಮಕರಣ ಮಾಡಿದ್ದರು.