ವಾಷಿಂಗ್ಟನ್(ಅ.15): ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಹೀಗಿರುವಾಗಲೇ ಜೋ ಬೈಡನ್‌ ಹಾಗೂ ಅವರ ಮಗನಿಗೆ ಸಂಬಂಧಿಸಿದ ಕೆಲ ಇಮೇಲ್‌ ಸಂದೇಶದಳು ಭಾರೀ ಸದ್ದು ಮಾಡಿವೆ. ಹಂಟರ್ ಬಿಡೆನ್ ತನ್ನ ತಂದೆ, ಆಗಿನ ಉಪಾಧ್ಯಕ್ಷ ಜೋ ಬಿಡೆನ್ ಅವರನ್ನು ಉಕ್ರೇನಿಯನ್ ಇಂಧನ ಸಂಸ್ಥೆಯೊಂದರ ಉನ್ನತ ಕಾರ್ಯನಿರ್ವಾಹಕರಿಗೆ ಪರಿಚಯಿಸಿದ್ದದ್ದು, ಈ ಘಟನೆ ಜೋ ಬಿಡೆನ್ ಈ ಕಂಪನಿಯ ತನಿಖೆ ನಡೆಸುತ್ತಿದ್ದ ಪ್ರಾಸಿಕ್ಯೂಟರ್‌ನನ್ನು ವಜಾ ಮಾಡುವಂತೆ ಉಕ್ರೇನ್‌ನ ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ಹೇರಿದ್ದ ಒಂದು ವರ್ಷದೊಳಗೇ ಈ ಬೆಳವಣಿಗೆ ನಡೆದಿದೆ ಎಂದು ಇಮೇಲ್‌ಗಳು ಬಹಿರಂಗಪಡಿಸಿವೆ.

ಬೋರ್ಡ್‌ ಆಫ್ ಬರಿಸ್ಮಾದ ಸಲಹೆಗಾರ ವಾಡಿಮ್ 2015ರ ಏಪ್ರಿಲ್ 17ರಂದು ಹಂಟರ್‌ ಬೈಡನ್‌ಗೆ ಕಳುಹಿಸಿದ್ದಾರೆನ್ನಲಾದ ಮೆಚ್ಚುಗೆ ಸೂಚಿಸುವ ಸಂದೇಶದಲ್ಲಿ, ಈ ಹಿಂದೆ ಯಾವತ್ತೂ ಉಲ್ಲೇಖವಾಗದ ಸಭೆಯೊಂದರ ಕುರಿತು ತಿಳಿಸಲಾಗಿದೆ. ಈ ಸಂದೇಶ ಹಂಟರ್, ಬರಿಸ್ಮಾ ಬೋರ್ಡ್‌ಗೆ ತಿಂಗಳೊಂದಕ್ಕೆ ಸುಮಾರು 36 ಲಕ್ಷ ರೂ. ವೇತನ ಪಡೆಯುವ ಒಪ್ಪಂದದೊಂದಿಗೆ ಸೇರ್ಪಡೆಯಾದ ಒಂದು ವರ್ಷದ ಬಳಿಕ ಕಳುಹಿಸಲಾಗಿದೆ ಎನ್ನಲಾಗಿದೆ. 

ಡಿಯರ್ ಹಂಟರ್, ಡಿಸಿಗೆ ಆಹ್ವಾನಿಸಿ ನಿಮ್ಮ ತಂದೆಯನ್ನು ಭೇಟಿಯಾಗಿ ಕೆಲ ಕ್ಷಣ ಕಳೆಯುವ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಇದೊಂದು ಹೆಮ್ಮೆ ಹಾಗೂ ಗೌರವದ ವಿಚಾರ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ.

ಅಲ್ಲದೇ 2014ರ ಮೇ ತಿಂಗಳಲ್ಲಿ ಕಳುಹಿಸಲಾದ ಇಮೇಲ್‌ನಲ್ಲೂ ಈ ಕಂಪನಿಯ ನಂ. 3 ಕಾರ್ಯ ನಿರ್ವಾಹಕ ಹಂಟರ್ ಬಳಿ ಕಂಪನಿಗಾಗಿ ನಿಮ್ಮ ಪಗ್ರಭಾವವನ್ನು ಹೇಗೆ ಬಳಸುತ್ತೀರೆಂಬ ಸಲಹೆ ನೀಡುವಂತೆ ಉಲ್ಲೇಖಿಸಿದ್ದಾರೆ.

ಸದ್ಯ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣಾ ಅಖಾಡ ರಂಗೇರಿದ್ದು, ಇಂತಹ ಸಂದರ್ಭದಲ್ಲಿ ಇಂತಹ ಹಳೆ ಸಂದೇಶಗಳು ಹರಿದಾಡುತ್ತಿರುವುದು, ಟ್ರಂಪ್ ವಿರುದ್ಧ ಕಣಕ್ಕಿಳಿದಿರುವ ಬೈಡನ್‌ಗೆ ಕೊಂಚ ಹಿನ್ನಡೆಯುಂಟು ಮಾಡುವ ಸಾಧ್ಯತೆಗಳಿವೆ,. ಅಲ್ಲದೇ ತಾನು ಯಾವತ್ತೂ ತನ್ನ ಮಗನೊಂದಿಗೆ ಆತನ ಉದ್ಯಮಕ್ಕೆ ಸಂಬಂಧಿಸಿದ ವಿಇಚಾರಗಳ ಬಗ್ಗೆ ಮಾತನಾಡಿಲ್ಲ ಎಂದು ಬೈಡನ್ ಈ ಹಿಂದೆಯೇ ತಿಳಿಸಿದ್ದು, ಈ ನಿಟ್ಟಿನಲ್ಲಿ ಸದ್ಯ ಹರಿದಾಡುತ್ತಿರುವ ಸಂದೇಶಗಳು ಭಾರೀ ಮಹತ್ವ ಪಡೆದಿವೆ. ಈ ಇಮೇಲ್ ಸಂದೇಶಗಳನ್ನು ಹಳೆಯ ಲ್ಯಾಪ್‌ಟಾಪ್‌ನಿಂದ ರಿಕವರ್ ಮಾಡಲಾದ ಡೇಟಾ ಮೂಲಕ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಅಲ್ಲದೇ ಈ ಲ್ಯಾಪ್‌ಟಾಪ್‌ನಲ್ಲಿ ಹಂಟರ್‌ ಬೈಡನ್‌ನ ಹನ್ನೆರಡು ನಿಮಿಷದ ವಿಡಿಯೋ ಕೂಡಾ ರಿಕವರ್ ಮಾಡಲಾಗಿದೆ.