Asianet Suvarna News Asianet Suvarna News

ವಿಮಾನ ನೀಡಿದ ಆಹಾರದಲ್ಲಿ ಸಿಕ್ತು ಹಲ್ಲಿ ಅಲ್ಲ ಹಲ್ಲು..

ವಿಮಾನದಲ್ಲಿ ನೀಡಿದ ಆಹಾರದಲ್ಲಿ ಮಹಿಳೆಯೊಬ್ಬರಿಗೆ ಹಲ್ಲು ಸಿಕ್ಕಿದೆ ಎಂದು ಮಹಿಳೆಯೊಬ್ಬರು ಫೋಟೋ ಸಮೇತ ಆರೋಪ ಮಾಡಿದ್ದಾರೆ. 

Shocking air passenger found tooth in meals which provides in  British Airways at flight akb
Author
First Published Dec 9, 2022, 12:50 PM IST

ವಿಮಾನ ಪ್ರಯಾಣದಲ್ಲಿ ನಡೆಯುವ ಹಲವು ಅಭಾಸಗಳನ್ನು ಹಲವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೈಲು ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಬಯಸಿದ್ದಲ್ಲಿ ಆಹಾರವನ್ನು ಅದರಲ್ಲಿರುವ ಸಿಬ್ಬಂದಿ ಆಹಾರವನ್ನು ನೀಡುತ್ತಾರೆ. ಹೀಗೆ ವಿಮಾನದಲ್ಲಿ ನೀಡಿದ ಆಹಾರದಲ್ಲಿ ಮಹಿಳೆಯೊಬ್ಬರಿಗೆ ಹಲ್ಲು ಸಿಕ್ಕಿದೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. 

ಟ್ವಿಟ್ಟರ್‌ನಲ್ಲಿ ಘಡಾ ಎಂಬುವವರು ಈ ವಿಚಾರವನ್ನು ಹಂಚಿಕೊಂಡು ಬ್ರಿಟಿಷ್ ಏರ್‌ಲೈನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನಯಾನದ ಅಥವಾ ರೈಲು ಪ್ರಯಾಣದ ವೇಳೆಯೂ ಆಗಿರಬಹುದು ಸಾರಿಗೆ ಸಂಸ್ಥೆಯೂ ಪ್ರಯಾಣಿಕರಿಗೆ ನೀಡಿದ ಆಹಾರದಲ್ಲಿ ಈ ಹಿಂದೆ ಕೂದಲು(hair), ಜಿರಳೆ(cockroaches), ಅಥವಾ ಇತರ ಹುಳು ಹುಪ್ಪಟೆಗಳು ಪತ್ತೆಯಾದ ಘಟನೆ ಈ ಹಿಂದೆಯೂ ಹಲವು ಬಾರಿ ನಡೆದಿವೆ. ಅಲ್ಲದೇ ಆನ್‌ಲೈನ್‌ನಲ್ಲಿ ಗ್ರಾಹಕರು ಆರ್ಡರ್ ಮಾಡಿದ ಆಹಾರದಲ್ಲಿಯೂ ಏನೇನೋ ಸಿಕ್ಕಿದಂತಹ ಸಸ್ಯಾಹಾರ ಆರ್ಡರ್ ಮಾಡಿದವರಿಗೆ ಮಾಂಸಹಾರ(Nonveg) ಸಿಕ್ಕಿದಂತಹ ಹಲವು ಘಟನೆಗಳು ನಡೆದಿದ್ದವು. ಆದರೆ ಇಲ್ಲಿ ಹುಳು ಕೀಟಗಳ ಬದಲು ಮನುಷ್ಯನ ಹಲ್ಲೊಂದು ಸಿಕ್ಕಿದ್ದು ಅಚ್ಚರಿಗೆ ಕಾರಣವಾಗಿದೆ. 

ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಕಾಣಿಸುವಂತೆ ಯಾವುದು ರೈಸ್ ಬಾತ್ ಅಥವಾ ಪಲವಿನಂತೆ ಕಾಣಿಸುವ ಆಹಾರ ಪೊಟ್ಟಣದ ಪಕ್ಕದಲ್ಲಿ ಮಹಿಳೆ ಹಲ್ಲಿನ ಭಾಗದಂತೆ ಕಾಣುವ ವಸ್ತುವೊಂದನ್ನು ಎತ್ತಿಟ್ಟಿದ್ದಾಳೆ. ದಂತ ಚಿಕಿತ್ಸೆಗೆ ಒಳಪಟ್ಟಂತಹ ಹಲ್ಲಿನಂತೆ ಇದು ಕಾಣುತ್ತಿದೆ. ಈ ಫೋಟೋದೊಂದಿಗೆ ಮಹಿಳೆ ಬ್ರಿಟಿಷ್ ಏರ್‌ವೇಸ್‌ನಿಂದ ಸ್ಪಷ್ಟನೆ ಕೇಳಿದ್ದಾರೆ. 

 

ಲಂಡನ್‌ನಿಂದ (London) ದುಬೈಗೆ (Dubai) ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ಗೆ(British Airways) ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ. ನಾನು ನಿಮ್ಮಿಂದ ಈ ಹಲ್ಲಿನ ಇಂಪ್ಲಾಂಟ್ ಹೇಗೆ ಆಹಾರದಲ್ಲಿ ಬಂತು ಎಂದು ತಿಳಿಯುವುದಕ್ಕೆ ಕಾಯುತ್ತಿದ್ದೇನೆ. ನಾವು ಲಂಡನ್‌ನಿಂದ ದುಬೈಗೆ ತೆರಳುತ್ತಿದ್ದ BA107 ವಿಮಾನದಲ್ಲಿ ನೀಡಿದ ಆಹಾರದಲ್ಲಿ ಈ ಹಲ್ಲಿನ ತುಣುಕು ಕಾಣಿಸಿಕೊಂಡಿದೆ. ಇದಂತೂ ಭಯಾನಕವಾಗಿದ್ದು, ಈ ವಿಚಾರದ ಕುರಿತಂತೆ ಇಲ್ಲಿಯವರೆಗೂ ವಿಮಾನಯಾನ ಸಂಸ್ಥೆಯ ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ ಅವರು ನಾವೆಲ್ಲರೂ ಹಲ್ಲು ಹೊಂದಿದ್ದೇವೆ, ಇದು ನಮ್ಮ ಹಲ್ಲಂತೂ ಅಲ್ಲ ಎಂದು ಬರೆದಿದ್ದಾರೆ. 

ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ, ಅದು ಈರುಳ್ಳಿಯಲ್ವಾ ತಿನ್ನಿ ಎಂದ ಸಿಬ್ಬಂದಿ !

ಆದರೆ ನಂತರದಲ್ಲಿ ವಿಮಾನಯಾನ ಸಂಸ್ಥೆ ಈ ದೂರಿಗೆ ಪ್ರತಿಕ್ರಿಯಿಸಿದ್ದು, ಈ ಘಟನೆಗೆ ದಯವಿಟ್ಟು ನಮ್ಮನ್ನು ಕ್ಷಮಿಸಿ, ದಯವಿಟ್ಟು ನಿಮ್ಮ ವಿವರಗಳನ್ನು ನಮ್ಮ ಕ್ಯಾಬಿನ್ ಸಿಬ್ಬಂದಿಗೆ ನೀಡಿ, ನಮ್ಮ ಗ್ರಾಹಕ ಪ್ರತಿನಿಧಿಳು ನಿಮ್ಮನ್ನು ಸಂಪರ್ಕಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಈ ದೃಶ್ಯ ನೋಡಿದ ನೆಟ್ಟಿಗರು ಮಾತ್ರ ದಂಗಾಗಿದ್ದು, ಬ್ರಿಟಿಷ್ ಏರ್‌ವೇಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಾಗ ವಿಮಾನದಲ್ಲಿ ಪ್ರಯಾಣಿಸುವವರು ಈ ಬಗ್ಗೆ ದಯವಿಟ್ಟು ಗಮನಿಸುವುದು ಒಳಿತು. ತಿನ್ನುವ ಮೊದಲು ಆಹಾರವನ್ನು ದಯವಿಟ್ಟು ಪರಿಶೀಲಿಸಿ, ಈ ವಿಚಾರದ ಬಗ್ಗೆ ಗಂಭೀರವಾಗಿ ತನಿಖೆ ಆಗಬೇಕಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

Weird News: ಮನೆಯೊಳಗೆ ಜಿರಳೆ ಬಿಟ್ಟುಕೊಂಡರೆ 1.5 ಲಕ್ಷ ಕೊಡತ್ತೆ ಈ ಸಂಸ್ಥೆ!

Follow Us:
Download App:
  • android
  • ios