ವಿದೇಶಿ ವಿನಿಮಯದ ತೀವ್ರ ಕೊರತೆಯಿಂದಾಗಿ, ಶ್ರೀಲಂಕಾ ತನ್ನ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ವಿತರಣೆ ಮಾಡುವ ಸಲುವಾಗು ಸರ್ಕಾರವೇ ಸೇನೆಯನ್ನು ಇಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಲಂಬೊ (ಜೂನ್ 27): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ (economic crisis hit Sri Lanka) ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಿದೇಶಿ ವಿನಿಮಯದ (foreign exchange) ತೀವ್ರ ಕೊರತೆಯಿಂದಾಗಿ, ಶ್ರೀಲಂಕಾ ತನ್ನ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀಲಂಕಾದಲ್ಲಿ ಪೆಟ್ರೋಲ್-ಡೀಸೆಲ್ ಬಗ್ಗೆ ಇಂತಹ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ ಸೇನೆಯನ್ನು (Army) ಬಳಸಿಕೊಂಡು ಪೆಟ್ರೋಲ್ (Petrol), ಡೀಸೆಲ್ (Diesel) ವಿತರಣೆ ಮಾಡುತ್ತಿದೆ.
ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆಯ ನಡುವೆ ಸೋಮವಾರ ಸೈನಿಕರು ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಟೋಕನ್‌ಗಳನ್ನು ವಿತರಿಸಿದರು. ಅದೇ ಸಮಯದಲ್ಲಿ, ಇಂಧನವನ್ನು ಉಳಿಸಲು, ಸರ್ಕಾರವು ಶಾಲೆಗಳನ್ನು (School) ಮುಚ್ಚುವಂತೆ ತಿಳಿಸಿದ್ದು, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ (Work From Home) ಮಾಡುವಂತೆ ಕೇಳಲಾಗಿದೆ.
ವಿದೇಶಿ ವಿನಿಮಯ ಇರಿಸಿಕೊಳ್ಳಲು ಮಿತಿ: ಶ್ರೀಲಂಕಾವು ವಿದೇಶಿ ವಿನಿಮಯದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಆಹಾರ, ಇಂಧನ, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ತನ್ನ ನಾಗರಿಕರಿಗೆ ವಿದೇಶಿ ವಿನಿಮಯವನ್ನು ಇರಿಸಿಕೊಳ್ಳಲು ಮಿತಿಯನ್ನು ನಿಗದಿಪಡಿಸಿದೆ. ಈಗ ಶ್ರೀಲಂಕಾದಲ್ಲಿ ಜನರು ತಮ್ಮ ಬಳಿ ಕೇವಲ 10,000 ಅಮೆರಿಕನ್ ಡಾಲರ್ ವಿದೇಶಿ ಕರೆನ್ಸಿಯನ್ನು ಇಟ್ಟುಕೊಳ್ಳಬಹುದು, ಆದರೆ ಮೊದಲು ಈ ಮಿತಿಯು 15,000 ಅಮೆರಿಕನ್ ಡಾಲರ್ ವರೆಗೆ ಇತ್ತು.
ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಸರತಿ ಸಾಲು: ರಾಯಿಟರ್ಸ್ ವರದಿಯ ಪ್ರಕಾರ, ಜನರು ಹಲವಾರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಸರದಿಯಲ್ಲಿ ಕಾಯುತ್ತಿದ್ದಾರೆ. 67 ವರ್ಷದ ಆಟೋರಿಕ್ಷಾ ಚಾಲಕ ಡಬ್ಲ್ಯೂ.ಡಿ.ಶೆಲ್ಟನ್ ಈ ಕುರಿತಾಗಿ ಮಾತನಾಡಿದ್ದು, ನಾನು ನಾಲ್ಕು ದಿನಗಳಿಂದ ಸರದಿಯಲ್ಲಿ ಇದ್ದೇನೆ. ಈ ಸಮಯದಲ್ಲಿ, ನಾನು ಸರಿಯಾಗಿ ಮಲಗಲು ಸಾಧ್ಯವಾಗಲಿಲ್ಲ ಮತ್ತು ನಾನು ಏನನ್ನೂ ತಿಂದಿಲ್ಲ. ನಾವು ಸಂಪಾದಿಸದಿದ್ದರೆ, ನಾವು ನಮ್ಮ ಕುಟುಂಬವನ್ನು ಹೇಗೆ ಸಾಕಲು ಸಾಧ್ಯ? ಅವರು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿನ ಇಂಧನ ಕೇಂದ್ರದಲ್ಲಿ ಇದ್ದ ಉದ್ದನೆಯ ಸಾಲಿನಲ್ಲಿ 24ನೇ ವ್ಯಕ್ತಿ ಎನಿಸಿದ್ದರು.
ಕಳೆದ ವಾರದಿಂದ ಇಂಧನ ಕೇಂದ್ರಗಳ ಬಳಿ ಸರತಿ ಸಾಲುಗಳು ಇನ್ನಷ್ಟು ದೊಡ್ಡದಾಗಿವೆ. "ಇದೊಂದು ದುರಂತ, ಇದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ" ಎಂದು ಶೆಲ್ಟನ್ ಹೇಳಿದರು. ಇಂಧನ ವಿತರಣೆಯಲ್ಲಿ ಸಾರ್ವಜನಿಕ ಸಾರಿಗೆ, ವಿದ್ಯುತ್ ಉತ್ಪಾದನೆ ಮತ್ತು ವೈದ್ಯಕೀಯ ಸೇವೆಗಳು ಆದ್ಯತೆಯನ್ನು ಪಡೆದುಕೊಂಡಿವೆ. ಉಳಿದಂತೆ ಕೆಲವು ಬಂದರುಗಳು ಮತ್ತು ವಿಮಾನ ನಿಲ್ದಾಣಗಳಿಗೆ ನೀಡಲಾಗುತ್ತಿದೆ.
Economic Crisis ಲಂಕಾ ಹಾದಿಯಲ್ಲಿ ಪಾಕಿಸ್ತಾನ, ಆರ್ಥಿಕ ಬಿಕ್ಕಟ್ಟಿನಿಂದ ತುಪ್ಪ, ಖಾದ್ಯ ತೈಲ ಬೆಲೆ ದಾಖಲೆಯ ಗರಿಷ್ಠ ಮಟ್ಟ!
ಶಾಲೆಗಳು ಕ್ಲೋಸ್: ಶ್ರೀಲಂಕಾ ಸುಮಾರು 9,000 ಟನ್ ಡೀಸೆಲ್ ಮತ್ತು 6,000 ಟನ್ ಪೆಟ್ರೋಲ್ ಮೀಸಲು ಹೊಂದಿದೆ. ಹೊಸ ತೈಲ ಸರಕು ಯಾವಾಗ ಬರುತ್ತದೆ ಎಂಬ ಬಗ್ಗೆ ಯಾವುದೇ ಖಾತ್ರಿ ಇಲ್ಲ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ (Kanchana Wijesekera) ಭಾನುವಾರ ಹೇಳಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸರ್ಕಾರ ಹೇಳಿದೆ. ಅದೇ ಸಮಯದಲ್ಲಿ, ರಾಜಧಾನಿ ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚಲಾಗಿದೆ. 51 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಮರುಪಾವತಿಸಲು ಶ್ರೀಲಂಕಾಕ್ಕೆ ಸಾಧ್ಯವಾಗುತ್ತಿಲ್ಲ. ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡ ನಾಗರಿಕರು ಇಂಧನವನ್ನು ಮಿತವಾಗಿ ಬಳಸುವಂತೆ ಒತ್ತಾಯಿಸಿದರು.
ಮತ್ತಷ್ಟು ಬಿಗಡಾಯಿಸಿದ ಶ್ರೀಲಂಕಾ ಪರಿಸ್ಥಿತಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ!
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ತಂಡವೊಂದು $3 ಬಿಲಿಯನ್ ಬೇಲ್ಔಟ್ ಪ್ಯಾಕೇಜ್ ಕುರಿತು ಮಾತುಕತೆ ನಡೆಸಲು ಶ್ರೀಲಂಕಾಕ್ಕೆ ಭೇಟಿ ನೀಡುತ್ತಿದೆ. ಹಿಂದೂ ಮಹಾಸಾಗರದ ರಾಷ್ಟ್ರವು ಗುರುವಾರ ಭೇಟಿ ಕೊನೆಗೊಳ್ಳುವ ಮೊದಲು ಸಿಬ್ಬಂದಿ ಮಟ್ಟದ ಒಪ್ಪಂದವನ್ನು ತಲುಪಲು ಆಶಿಸುತ್ತಿದೆಯಾದರೂ, ಅದು ಯಾವುದೇ ತಕ್ಷಣದ ಹಣವನ್ನು ಅನ್ಲಾಕ್ ಮಾಡುವುದು ಅನುಮಾನ ಎನ್ನಲಾಗಿದೆ.
