ಮತ್ತಷ್ಟು ಬಿಗಡಾಯಿಸಿದ ಶ್ರೀಲಂಕಾ ಪರಿಸ್ಥಿತಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ!

ಆರ್ಥಿಕ ಕುಸಿತದಿಂದ ಚೇತರಿಸಿಕೊಳ್ಳುವ ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸುವ ಪ್ರಯತ್ನಗಳ ಭಾಗವಾಗಿ ಶ್ರೀಲಂಕಾದ ಹೊಸ ಸರ್ಕಾರವು ಹೊಸ ಯೋಜನೆಗಳನ್ನು ಮಾಡಿದೆ. ಈ ಹೊಸ ಯೋಜನೆಗಳ ಅಡಿಯಲ್ಲಿ, ಸರ್ಕಾರವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಹೊರಟಿದೆ ಮತ್ತು ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹೊಸ ನೋಟುಗಳನ್ನು ಮುದ್ರಣ ಮಾಡುವುದಾಗಿ ಹೇಳಿದೆ.
 

The condition of Sri Lanka is bad government decided to print currency to pay salaries to government employees san

ಕೊಲಂಬೊ (ಮೇ.18): ಆರ್ಥಿಕ ಬಿಕ್ಕಟ್ಟಿನಿಂದ (economic crisis) ಕಂಗೆಟ್ಟಿರುವ ಶ್ರೀಲಂಕಾದ (Sri Lanka) ಹೊಸ ಸರ್ಕಾರ ಆರ್ಥಿಕ ಕೊರತೆಯನ್ನು ( financial deficit) ನೀಗಿಸುವ ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು (financial condition) ಸ್ಥಿರಗೊಳಿಸುವ ಪ್ರಯತ್ನಗಳ ಭಾಗವಾಗಿ ಹೊಸ ಯೋಜನೆಗಳನ್ನು ಮಾಡಿದೆ. ಇದರೊಂದಿಗೆ ಸರ್ಕಾರಿ ನೌಕರರಿಗೆ ಸಂಬಳ (salaries ) ನೀಡಲು ಕೂಡ ಸರ್ಕಾರದ ಬಳಿ ಹಣವಿಲ್ಲ, ಹೀಗಾಗಿ ಹೊಸ ಕರೆನ್ಸಿ ಮುದ್ರಿಸಲು (print new currency) ಸರ್ಕಾರ ನಿರ್ಧರಿಸಿದೆ.

ಅದರೊಂದಿಗೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನೂ ಮಾರಾಟ ಮಾಡಲು ಸರ್ಕಾರ ಮನಸ್ಸು ಮಾಡಿದೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ (Ranil Wickremesinghe) ಅವರು ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಶ್ರೀಲಂಕಾ ಏರ್‌ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಹೊಸ ಸರ್ಕಾರ ಯೋಜಿಸಿದೆ ಎಂದು ಹೇಳಿದರು. ಮಾರ್ಚ್ 2021 ಕ್ಕೆ ಕೊನೆಗೊಂಡ ವರ್ಷದಲ್ಲಿ ಶ್ರೀಲಂಕಾ ಏರ್‌ಲೈನ್ಸ್ 45 ಶತಕೋಟಿ ರೂಪಾಯಿಗಳ ನಷ್ಟವನ್ನು ಹೊಂದಿದೆ ಎಂದು ಅವರು ಹೇಳಿದರು.

ಆದರೆ, ಈ ನಷ್ಟವನ್ನು ಇನ್ನೂ ವಿಮಾನದಲ್ಲಿ ಕಾಲಿಡದ ಬಡವರು ಹೊರುವಂತಾಗಾಬಾರದು ಎಂದು ವಿಕ್ರಮಸಿಂಘೆ ಹೇಳಿದ್ದಾರೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಹೊಸ ಕರೆನ್ಸಿ ಮುದ್ರಿಸುವಂತೆ ಹೇಳಲಾಗಿದ್ದು, ಇದರಿಂದ ದೇಶದ ಕರೆನ್ಸಿ ಮೇಲೆ ಒತ್ತಡ ಬೀಳಲಿದೆ ಎಂದು ಪ್ರಧಾನಿ ಹೇಳಿದರು.

ದೇಶವು ಕೇವಲ ಒಂದು ದಿನದ ಗ್ಯಾಸೋಲಿನ್ ಸ್ಟಾಕ್‌ನೊಂದಿಗೆ ಉಳಿದಿದ್ದು ಮತ್ತು ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಲಂಗರು ಹಾಕಿರುವ ಮೂರು ಕಚ್ಚಾ ತೈಲ ಹಡಗುಗಳಿಗೆ ಪಾವತಿಸಲು ಮುಕ್ತ ಮಾರುಕಟ್ಟೆಯಿಂದ ಡಾಲರ್‌ಗಳನ್ನು ಸಂಗ್ರಹಿಸಲು ಸರ್ಕಾರ ಆಶಿಸುತ್ತಿದೆ ಎಂದು ಅವರು ಹೇಳಿದರು.

ಮುಂದಿನ ಕೆಲವು ತಿಂಗಳುಗಳು ನಮಗೆ ತುಂಬಾ ಕಷ್ಟಕರವಾಗಲಿದೆ ಎಂದು ಅವರು ಹೇಳಿದರು. ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಎಲ್ಲಾ ರಾಜಕೀಯ ಪಕ್ಷಗಳು ಭಾಗವಹಿಸಬೇಕಾದ ರಾಷ್ಟ್ರೀಯ ಅಸೆಂಬ್ಲಿ ಅಥವಾ ರಾಜಕೀಯ ಸಂಸ್ಥೆಯನ್ನು ನಾವು ತಕ್ಷಣವೇ ರಚಿಸಬೇಕಾಗಿದೆ. ಅಧ್ಯಕ್ಷ ರಾಜಪಕ್ಸೆ ಅವರ 'ಅಭಿವೃದ್ಧಿ ಬಜೆಟ್' ಬದಲಿಗೆ ಹೊಸ 'ಪರಿಹಾರ ಬಜೆಟ್' ಘೋಷಿಸುವುದಾಗಿ ಪ್ರಧಾನಿ ವಿಕ್ರಮಸಿಂಘೆ ಭರವಸೆ ನೀಡಿದರು.

ಖಜಾನೆ ಬಿಲ್‌ಗಳ ವಿತರಣೆಯ ಮಿತಿಯನ್ನು 3 ಲಕ್ಷ ಕೋಟಿ ರೂ.ಗಳಿಂದ 4 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲು ಸಂಸತ್ತಿನ ಮುಂದೆ ಸಂಪುಟದ ಮುಂದೆ ಪ್ರಸ್ತಾಪಿಸಲಾಗುವುದು ಎಂದು ವಿಕ್ರಮಸಿಂಘೆ ಹೇಳಿದರು. ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಮತ್ತು ಸರ್ಕಾರಿ ಬೆಂಬಲಿಗರ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಕಳೆದ ವಾರ ವಿಕ್ರಮಸಿಂಘೆ ಅವರನ್ನು ಪ್ರಧಾನಿಯಾಗಿ ನೇಮಿಸಲಾಗಿದೆ. ನಾಲ್ಕು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್ 2018 ರಲ್ಲಿ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದ್ದರು. ಆದಾಗ್ಯೂ, ಎರಡು ತಿಂಗಳ ನಂತರ ಸಿರಿಸೇನಾ, ವಿಕ್ರಮಸಿಂಘೆ ಅವರನ್ನು ಮತ್ತೆ ಪ್ರಧಾನಿಯಾಗಿ ನಿಯುಕ್ತಿ ಮಾಡಿದ್ದರು.

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಪಧಾನಿ ಪದವಿಗೇರಿದ ರಾನಿಲ್ ವಿಕ್ರಮಸಿಂಘೆ

ಬೇಲ್‌ಔಟ್ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಲು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೊಂದಿಗೆ ಮಾತುಕತೆ ನಡೆಸಲು ಮತ್ತು ಭಾರತ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಸಾಲವನ್ನು ವ್ಯವಸ್ಥೆ ಮಾಡಲು ಹಣಕಾಸು ಸಚಿವರನ್ನು ನೇಮಿಸಬೇಕು ಎಂದು ಹೇಳಲಾಗಿದೆ. ಪೂರ್ಣ ಸಚಿವ ಸಂಪುಟದ ಅನುಪಸ್ಥಿತಿಯಲ್ಲಿ ಸರ್ಕಾರಕ್ಕೆ ನಗದು ಸಿಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಶ್ರೀಲಂಕಾ ಜನರ ಕಿಚ್ಚಿಗೆ ಮಹಿಂದಾ ಮನೆ, ಐಷಾರಾಮಿ ಕಾರುಗಳು ಬೂದಿ!

ಶ್ರೀಲಂಕಾ ಎರಡು ವಿದೇಶಿ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ದೇಶವು ದಿವಾಳಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶಕ್ಕೆ 75 ಮಿಲಿಯನ್ ಡಾಲರ್ ಅಗತ್ಯವಿದೆ ಎಂದು ವಿಕ್ರಮಸಿಂಘೆ ಹೇಳಿದರು.

Latest Videos
Follow Us:
Download App:
  • android
  • ios