ವಿಶ್ವದ ಅತಿದೊಡ್ಡ ಕಟ್ಟಡ ನಿರ್ಮಾಣ ಕಾರ್ಯ ಶುರು ಮಾಡಿದ ಸೌದಿ ಅರೇಬಿಯಾ
ಸೌದಿ ಅರೇಬಿಯಾ ವಿಶ್ವದ ಅತಿದೊಡ್ಡ ಕಟ್ಟಡ 'ಮುಕಾಬ್' ನಿರ್ಮಾಣವನ್ನು ಪ್ರಾರಂಭಿಸಿದೆ. 400 ಮೀಟರ್ ಎತ್ತರದ ಈ ಚೌಕಾಕಾರದ ಕಟ್ಟಡವು ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗಿಂತ 20 ಪಟ್ಟು ದೊಡ್ಡದಾಗಿರಲಿದೆ.
ರಿಯಾದ್: ತೈಲ ಸಂಪತ್ತಿನ ಮೇಲೆಯೇ ಅವಲಂಬಿತವಾಗಿರುವ ತನ್ನ ಆರ್ಥಿಕತೆಯನ್ನು ನವೀನ ಮೂಲಸೌಕರ್ಯ ಯೋಜನೆಗಳತ್ತಲೂ ವಿಸ್ತರಿಸಲು ಮುಂದಾಗಿರುವ ಸೌದಿ ಅರೇಬಿಯಾ, ವಿಶ್ವದ ಅತಿದೊಡ್ಡ ಕಟ್ಟಡ ಯೋಜನೆ 'ಮುಕಾಬ್' ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದೆ.
ಚೌಕಾಕಾರದಲ್ಲಿರುವ ಈ ಕಟ್ಟಡ 400 ಮೀಟರ್ ಎತ್ತರವಿರಲಿದೆ. ಕಾಮಗಾರಿ ಮುಗಿದ ಬಳಿಕ, ಇದು ಜಗತ್ತಿನ ಅತಿದೊಡ್ಡ ಕಟ್ಟಡ ಎನಿಸಿಕೊಳ್ಳಲಿದೆ. ರಾಜಧಾನಿ ರಿಯಾದ್ ಬಳಿ ಇರುವ ಈ 3 ಕಟ್ಟಡದಲ್ಲಿ 20 ಲಕ್ಷ ಲಕ್ಷ ಚದರ ಮೀಟರ್ ಸ್ಥಳಾವಕಾಶ ಸಿಗಲಿದೆ. ವಿಸ್ತೀರ್ಣದಲ್ಲಿ ಇದು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹೆಗ್ಗುರುತಿನ ಕಟ್ಟಡ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ಗಿಂತ 20 ಪಟ್ಟು ದೊಡ್ಡದಾಗಿರಲಿದೆ.
ಈ ಕಟ್ಟಡ ನಿರ್ಮಾಣ ಯೋಜನೆಗೆ 4.2 ಲಕ್ಷ ಕೋಟಿ ರು. ವೆಚ್ಚವಾಗಲಿದೆ. 'ನ್ಯೂ ಮುರಾಬ್ಬ' ಎಂಬ ಹೊಸ ನಗರ ಜಿಲ್ಲೆಯೊಂದನ್ನು ಸೌದಿ ಅರೇಬಿಯಾ ಸೃಷ್ಟಿಸುತ್ತಿದ್ದು, ಅಲ್ಲಿ 2.5 2.5 ಕೋಟಿ ಚದರ ಮೀಟರ್ ಸ್ಥಳಾವಕಾಶ ಇರಲಿದೆ. ಆ ಜಿಲ್ಲೆಯಲ್ಲಿ 1.04 4 ಲಕ್ಷಮನೆಗಳನ್ನೂ ನಿರ್ಮಾಣ ಮಾಡುವ ಉದ್ದೇಶವನ್ನು ಸೌದಿ ಅರೇಬಿಯಾ ಹೊಂದಿದೆ. ಮುರಾಬ್ಬ ನಗರ ಜಿಲ್ಲೆಗೆ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮುಕಾಬ್ ಇರಲಿದೆ ಎಂದು ವರದಿಗಳು ತಿಳಿಸಿವೆ. ಮುಕಾಬ್‌ನಲ್ಲಿ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ, ಸಾಂಸ್ಕೃತಿಕ ಪ್ರದೇಶಗಳನ್ನು ಒಳಗೊಂಡಿರಲಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಈ ಕಟ್ಟಡ ಹೇಗಿರಲಿದೆ ಎಂಬ ವೀಡಿಯೋವನ್ನು ಸೌದಿ ಬಿಡುಗಡೆಗೊಳಿಸಿತ್ತು.