ಷರಿಯಾ ಕಾನೂನನ್ನು ಕಠಿಣಗೊಳಿಸುತ್ತಿರುವ ಸೌದಿ ಅರೇಬಿಯಾ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಾಹುವಿನ ಹೆಸರುಗಳ ಬಳಕೆಗೆ ಮಿತಿ ಹೇರಿದೆ. ಸಂಸತ್ ಅನುಮೋದಿಸಿರುವ ಈ ಹೊಸ ನಿಯಮದ ಪ್ರಕಾರ, ಅಲ್ಲಾಹುವಿನ ಏಳು ನಿರ್ದಿಷ್ಟ ಹೆಸರು ಬಳಕೆಗೆ ಮಿತಿ.

ರಿಯಾದ್‌: ಷರಿಯಾ ಕಾನೂನು ಹೊಂದಿರುವ ಸೌದಿ ಅರೇಬಿಯಾ, ಇದೀಗ ದೇಶದಲ್ಲಿ ಇನ್ನಷ್ಟು ಕಠಿಣ ಷರಿಯಾ ನಿಯಮ ಜಾರಿಗೆ ಮುಂದಾಗಿದೆ. ಈ ಪ್ರಕಾರ ಸಾರ್ವಜನಿಕ ಸ್ಥಳ, ಸಂಸ್ಥೆಗಳಲ್ಲಿ ಅಲ್ಲಾಹುವಿಗೆ ಸೇರಿದ ಕೇವಲ 7 ಹೆಸರುಗಳನಷ್ಟೇ ಕರೆಯಬೇಕು ಎನ್ನುವ ನಿಯಮ ವಿಧಿಸಿದೆ. ಆ ಏಳು ಹೆಸರುಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

ಸೌದಿ ಅರೇಬಿಯಾದ ಸಂಸತ್‌ ಇದಕ್ಕೆ ಅನುಮೋದನೆ ನೀಡಿದೆ. ಇಸ್ಲಾಮಿಕ್‌ ಕಾನೂನಿಗೆ ವಿರುದ್ಧವಾಗಿ ಅಲ್ಲಾಹುವಿನ ಹೆಸರನ್ನು ಕರೆಯುವುದಕ್ಕೆ ಕಡಿವಾಣ ಹೇರುವುದಕ್ಕೆ ಈ ಕಾನೂನು. ಇದರ ಪ್ರಕಾರ ಅಲ್-ಸಲಾಮ್, ಅಲ್-ಅದ್ಲ್, ಅಲ್-ಅವ್ವಲ್, ಅಲ್-ನೂರ್, ಅಲ್-ಹಕ್, ಅಲ್-ಶಾಹಿದ್ ಮತ್ತು ಅಲ್-ಮಲಿಕ್ ಎನ್ನುವ ಹೆಸರುಗಳಿಂದ ಅಲ್ಲಾಹುವಿನ ಹೆಸರನ್ನು ಕರೆಯಬೇಕು ಎನ್ನಲಾಗಿದೆ.

ಎಲ್ಲೆಲ್ಲಿ ಈ ನಿಯಮ ಜಾರಿ?

ಮುಂದಿನ 120 ದಿನಗಳಲ್ಲಿ ಈ ನಿಯಮ ಜಾರಿಗೆ ಬರಲಿದ್ದು, ಶಾಲಾ - ಕಾಲೇಜುಗಳು, ವಿಶ್ವವಿದ್ಯಾನಿಲಯ, ಆಸ್ಪತ್ರೆ, ಸಾಂಸ್ಕೃತಿಕ ಕೇಂದ್ರ, ಮಸೀದಿ ಸೇರಿದಂತೆ ಸರ್ಕಾರಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್‌ ಬ್ಯಾನ್‌ 

ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ. ಈ ಪುಸ್ತಕಗಳು ಷರಿಯಾ ಕಾನೂನು, ತಾಲಿಬಾನ್‌ನ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವುಗಳ ಬೋಧನೆ ನಿಷೇಧಿಸುವಂತೆ ಎಲ್ಲಾ ವಿವಿಗಳಿಗೆ ಅಲ್ಲಿನ ಶಿಕ್ಷಣ ಸಚಿವ ಸೂಚಿಸಿದ್ದಾರೆ. ಈ ಹಿಂದೆ ಭೀಕರ ಭೂಕಂಪಕ್ಕೆ ಆಫ್ಘಾನ್‌ ತುತ್ತಾಗಿದ್ದಾಗ, ಮಹಿಳೆಯರ ರಕ್ಷಣೆ ಮೇಲೆ ತಾಲಿಬಾನ್‌ ನಿಷೇಧ ಹೇರಿತ್ತು. ಜೊತೆಗೆ ಹೆಣ್ಣುಮಕ್ಕಳಿಗೆ 5ನೇ ತರಗತಿಗಿಂತ ಹೆಚ್ಚು ಶಿಕ್ಷಣ, ಪರಪುರುಷರಿಗೆ ಮುಖ ತೋರಿಸುವುದು, ವಿಶ್ವ ವಿದ್ಯಾಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿತ್ತು