ಸೌದಿ ಅರೆಬಿಯಾ ಮಹತ್ವದ ನಿರ್ಧಾರ; ಶಾಲಾ ಪಠ್ಯದಲ್ಲಿ ರಾಮಾಯಣ -ಮಹಾಭಾರತ ಸೇರ್ಪಡೆ!
ರಾಮಾಯಣ-ಮಹಾಭಾರತ ಮಹತ್ವ ಭಾರತೀಯರಿಗಿಂತ ವಿದೇಶಿಗರಿಗೆ ಚೆನ್ನಾಗಿದೆ ತಿಳಿದಿದೆ ಅನ್ನೋ ಮಾತಿದಿದೆ. ಇದಕ್ಕೆ ಪೂರಕವಾಗಿ ಇದೀಗ ಸೌದಿ ಅರೆಬಿಯಾ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸೌದಿ ಅರೆಬಿಯಾ ಶಾಲಾ ಮಕ್ಕಳಿಗೆ ಮಹಾಭಾರತ ಹಾಗೂ ರಾಮಾಯಣ ಬೋಧನಾ ವಿಷಯವಾಗಿ ಸೇರ್ಪಡಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ಸೌದಿ ಅರೆಬಿಯಾ(ಏ.23): ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಸೇರ್ಪಡೆ ಕುರಿತು ಸೌದಿ ಅರೆಬಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ಸೌದಿ ಅರೆಬಿಯಾ ಶಾಲಾ ಮಕ್ಕಳ ಪಠ್ಯದಲ್ಲಿ ಭಾರತದ ಮಹಾಭಾರತ-ರಾಮಾಯಣ ಸೇರ್ಪಡೆಗೊಳಿಸಿದೆ. ಪ್ರಿನ್ ಮೊಹಮ್ಮದ್ ಬಿನ್ ಸಲ್ಮಾನ್ ದೂರದೃಷ್ಟಿ ಭಾಗವಾಗಿ ಶಿಕ್ಷಣ ಕ್ಷೇತ್ರಕ್ಕೆ ವಿಷನ್ 2030 ಯೋಜನೆ ಜಾರಿ ಮಾಡಿದೆ.
ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕೇಳಿದ್ದೇನೆ, ಭಾರತಕ್ಕಿದೆ ವಿಶೇಷ ಸ್ಥಾನ: ಒಬಾಮಾ
ಸೌದಿ ಅರೆಬಿಯಾ ವಿಷನ್ 2030 ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತವನ್ನು ಬೋಧಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಜ್ಞಾನ, ವಿದ್ಯಾರ್ಥಿಗಳಿಗೆ ಇತರ ದೇಶದ ಇತಿಹಾಸ, ಸಾಂಸ್ಕೃತಿಕ ವಿಭಿನ್ನತೆ ಜ್ಞಾನ ಸಂಪಾದಿಸಲು ನೆರವಾಗಲಿದೆ. ಈ ಅಧ್ಯಯನವು ಜಾಗತಿಕವಾಗಿ ಮಹತ್ವದ ಭಾರತೀಯ ಸಂಸ್ಕೃತಿಗಳಾದ ಯೋಗ ಮತ್ತು ಆಯುರ್ವೇದದ ಮೇಲೆ ಕೇಂದ್ರೀಕರಿಸಲಿದೆ ಎಂದು ವರದಿಯಾಗಿದೆ.
'ವಾಲ್ಮೀಕಿ ರಾಮಾಯಣ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ'
ಸೌದಿ ಅರೇಬಿಯಾದ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಪರಿಚಯಿಸುವುದರ ಹೊರತಾಗಿ, ಹೊಸ ವಿಷನ್ 2030 ರಲ್ಲಿ ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸೌದಿ ಅರೆಬಿಯಾ ಹೇಳಿದೆ.
ಸೌದಿ ಅರೇಬಿಯಾದ ವಿಷನ್ -2030 ಅಡಿಯಲ್ಲಿ ಪಠ್ಯಕ್ರಮವು ಅಂತರ್ಗತ, ಉದಾರ ಮತ್ತು ಸಹಿಷ್ಣುತೆಯ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಸೌದಿ ಅರೆಬಿಯಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.