ತೆಹ್ರಾನ್[ಮಾ.14]: ಚೀನಾದಿಂದ ಹುಟ್ಟಿಕೊಂಡ ಕೊರೋನಾ ವೈರಸ್ ಸದ್ಯ ಇಡೀ ವಿಶ್ವವನ್ನೇ ತನ್ನ ಮುಷ್ಟಿಯಲ್ಲಿಟ್ಟು ಆಡಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಡೆಡ್ಲಿ ವೈರಸ್‌ಗೆ ಮೃತಪಟ್ಟವರ ಸಂಖ್ಯೆ 5 ಸಾವಿರ ದಾಟಿದ್ದು, ಭಾರತದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇದನ್ನು ನಿಯಂತ್ರಿಸಲು ಅನೇಕ ಕ್ರಮಗಳನ್ನು ವಹಿಸಲಗುತ್ತಿದೆಯದರೂ, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 

ಇರಾನ್‌ನಲ್ಲೂ ಈ ವೈರಸ್‌ ಮರಣ ಮೃದಂಗ ಬಾರಿಸುತ್ತಿದ್ದು, ಬರೋಬ್ಬರಿ  514 ಮಂದಿ ಬಲಿಯಾಗಿದ್ದಾರೆ. ಸಾವನ್ನಪ್ಪಿದ್ದವರನ್ನು ಹೂಳಲು ಇರಾನ್‌ನಲ್ಲಿ ಸ್ಥಳದ ಅಭಾವ ಎದುರಾಗುಗಿದ್ದು, ಸದ್ಯ ಮೃತಪಟ್ಟವರನ್ನು ಸಾಮೂಹಿಕ ಸಮಾಧಿ ಮಾಡಲು ಇರಾನ್‌ ಸ್ಮಶಾನವೊಂದನ್ನು ನಿರ್ಮಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಕೊರೋನಾ ರುದ್ರ ನರ್ತನಕ್ಕೆ ಜಗತ್ತೇ ತತ್ತರ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊರೋನಾ ವೈರಸ್‌ನಿಂದ ಸಾವ​ನ್ನ​ಪ್ಪಿ​ದ​ವರನ್ನು ಹೂಳಲು ಕೋಮ್‌ ಪಟ್ಟ​ಣ​ದಲ್ಲಿ ಬೃಹತ್‌ ಸ್ಮಶಾ​ನ​ವನ್ನು ನಿರ್ಮಾಣ ಮಾಡ​ಲಾ​ಗಿದೆ. ಈ ಸಮಾಧಿ ಎಷ್ಟು​ ದೊ​ಡ್ಡಾ​ಗಿದೆಯೆಂದರೆ ಬಾಹ್ಯಾ​ಕಾ​ಶ​ದಿಂದಲೂ ಈ ಸಮಾಧಿ ಗೋಚ​ರಿ​ಸು​ತ್ತಿದೆ. ಉಪಗ್ರಹವೊಂದು ಈ ದೃಶ್ಯ​ವನ್ನು ಸೆರೆ ಹಿಡಿ​ದಿದೆ.