ಅಷ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿದ್ದ ಸಂಡೂರಿನ ತನ್ವೀನ್‌ ಹಾಗೂ ಆಕೆಯ ಪತಿಯನ್ನು ಭಾರತೀಯ ರಾಯಭಾರಿ ಕಚೇರಿಯಿಂದ ರಕ್ಷಣೆ ಇಂದು ಇಬ್ಬರನ್ನೂ ದೆಹಲಿಗೆ ಕರೆತರುವ ನಿರೀಕ್ಷೆ

ಸಂಡೂರು (ಆ.22): ಅಷ್ಘಾನಿಸ್ತಾನದಲ್ಲಿ ಅತಂತ್ರ ಸ್ಥಿತಿಗೆ ಸಿಲುಕಿದ್ದ ಸಂಡೂರಿನ ತನ್ವೀನ್‌ ಹಾಗೂ ಆಕೆಯ ಪತಿಯನ್ನು ಭಾರತೀಯ ರಾಯಭಾರಿ ಕಚೇರಿಯಿಂದ ರಕ್ಷಣೆ ಮಾಡಲಾಗಿದ್ದು, ಇಂದು ಇಬ್ಬರನ್ನೂ ದೆಹಲಿಗೆ ಕರೆತರುವ ನಿರೀಕ್ಷೆ ಇದೆ. ಸಂಡೂರು ನಿವಾಸಿ ಸತ್ತಾರ್‌ ಸಾಬ್‌ ಹಾಗೂ ಫಾತೀಮಾ ಬಿ. ಅವರ ಪುತ್ರಿಯಾದ ತನ್ವೀನ್‌ ಎಂಜಿನಿಯರಿಂಗ್‌ ಪದವೀಧರೆ. 

ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾಗ ಆಫ್ಘನ್‌ ಮೂಲದ ಸಯ್ಯದ್‌ ಜಲಾಲ್‌ನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ 2018ರಲ್ಲಿ ಕುಟುಂಬದ ಸಮ್ಮತಿಯೊಂದಿಗೆ ಸಂಡೂರಿನಲ್ಲಿ ಮದುವೆ ಆಗಿದ್ದರು. ಈ ಮದುವೆಗೆ ಅಷ್ಘಾನಿಸ್ತಾನದಿಂದ ಸೈಯದ್‌ ಜಲಾಲ್‌ನ ಕುಟುಂಬದವರೂ ಆಗಮಿಸಿದ್ದರು.

ಡೇನಿಯಲ್‌ ಕ್ರೇಗ್‌ ಸಂಭಾವನೆ 743 ಕೋಟಿ ರು.: ವಿಶ್ವದ ಅತಿ ದುಬಾರಿ ನಟ!

ಕೆಲ ದಿನಗಳ ಹಿಂದೆ ಅಷ್ಘಾನಿಸ್ತಾನ ತಾಲಿಬಾನಿಗಳ ವಶವಾದ ಸುದ್ದಿ ತಿಳಿಯುತ್ತಿದ್ದಂತೆ ಸಂಡೂರಿನಲ್ಲಿರುವ ತನ್ವೀನ್‌ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿತ್ತು. ರಕ್ಷಣೆಗಾಗಿ ಪೊಲೀಸರ ನೆರವು ಕೋರಿತ್ತು. ಇದೀಗ ಭಾರತೀಯ ರಾಯಭಾರಿ ಕಚೇರಿ ಅವರು ಸುರಕ್ಷಿತವಾಗಿದ್ದಾರೆಂದು ಖಚಿತಪಡಿಸಿದ್ದು, ಇಂದು ತನ್ವೀನ್‌ ಮತ್ತು ಜಲಾಲ್‌ ದೆಹಲಿಗೆ ಬಂದಿಳಿಯಲಿದ್ದಾರೆಂದು ಮಾಹಿತಿ ನೀಡಿದೆ.