ಹಿಂದೂ ದೇವಸ್ಥಾನಗಳ ಮೇಲೆ ನಡೆದ ದಾಳಿಯ ಮುಖ್ಯ ರುವಾರಿ ಅರೆಸ್ಟ್ ಹುಸೈನ್‌ನ್ನು 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ

ಢಾಕಾ(ಅ.24): ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಸಮಯದಲ್ಲಿ ಹಿಂದೂಗಳ ಹಾಗೂ ಹಿಂದೂ ದೇವಸ್ಥಾನಗಳ ಮೇಲೆ ನಡೆದ ದಾಳಿಯ ಮುಖ್ಯ ರುವಾರಿ ಎನ್ನಲಾದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶೈಕತ್‌ ಮಂಡಲ್‌(30) ಅ.17ರಂದು ನಡೆದ ದಾಳಿಯ ಹಿಂದಿದ್ದ ವ್ಯಕ್ತಿ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಈತ ಫೇಸ್ಬುಕ್‌ನಲ್ಲಿ ಮಾಡಿದ ಲೈವ್‌ ವಿಡಿಯೋದಿಂದಾಗಿ ಪ್ರಚೋದನೆಗೊಂಡ ಗುಂಪು ಹಿಂದುಗಳ ಮೇಲೆ ದಾಳಿ ಮಾಡಿತ್ತು. ಈ ದುರ್ಘಟನೆಯಲ್ಲಿ 70ಕ್ಕೂ ಹೆಚ್ಚು ಹಿಂದುಗಳ ಮನೆ ಹಾಗೂ ಅಂಗಡಿಗಳು ನಾಶವಾಗಿದ್ದವು.

ಫೈಜಾಬಾದ್‌ ರೈಲು ನಿಲ್ದಾಣ ಇನ್ನು ಅಯೋಧ್ಯಾ ಕಂಟೋನ್ಮೆಂಟ್‌

ಮಂಡಲ್‌ನ ಸಹಚರ ಇಕ್ಬಾಲ್‌ ಹುಸೈನ್‌ನಲ್ಲಿ ವಿಚಾರಣೆ ನಡೆಸಿದ ಮಾರನೇ ದಿನ ಮಂಡಲ್‌ನನ್ನು ಗಾಜಿಪುರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹುಸೈನ್‌ನ್ನು 7 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದ್ದು, ಗುಪ್ತಚರ ಹಾಗೂ ಇತರ ಭದ್ರತಾ ಏಜೆನ್ಸಿಗಳು ವಿಚಾರಣೆ ನಡೆಸುತ್ತಿವೆ.

ಹಿಂದೂ ದೇವಾಲಯಗಳು ಮತ್ತು ಮನೆಗಳ ಮೇಲಿನ ಸರಣಿ ದಾಳಿಗಳ ವಿರುದ್ಧ ಶನಿವಾರ ಬಾಂಗ್ಲಾದೇಶದಾದ್ಯಂತದ ನಗರಗಳಲ್ಲಿ ಅಲ್ಪಸಂಖ್ಯಾತ ಧರ್ಮಗಳ ಹತ್ತಾರು ಜನರು ರ್ಯಾಲಿ ನಡೆಸಿದ್ದಾರೆ. ರಾಜಧಾನಿ ಢಾಕಾ ಸೇರಿದಂತೆ ದೇಶದಾದ್ಯಂತ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನಗಳನ್ನು ನಡೆಸಲಾಯಿತು. ಕಳೆದ ವಾರ ಹಿಂದೂ ವಿರೋಧಿ ಗಲಭೆಗಳ ವಿರುದ್ಧ ಪ್ರತಿಭಟನಾಕಾರರು ಕೋಪವನ್ನು ಹೊರಹಾಕಿದರು.

ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಮತ್ತು ನಾಗರಿಕ ಆಡಳಿತವು ಅಲ್ಪಸಂಖ್ಯಾತ ಜನರನ್ನು, ವಿಶೇಷವಾಗಿ ಹಿಂದೂ ಜನರನ್ನು ರಕ್ಷಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ರ್ಯಾಲಿಗಳನ್ನು ಆಯೋಜಿಸಿದ್ದ ಬಾಂಗ್ಲಾದೇಶ ಹಿಂದೂ-ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್‌ನ ನಾಯಕ ರಾಣಾ ದಾಸ್‌ಗುಪ್ತ ಹೇಳಿದ್ದಾರೆ

ಬಾಂಗ್ಲಾದೇಶದ ಎರಡನೇ ದೊಡ್ಡ ನಗರವಾದ ಚಿತ್ತಗಾಂಗ್‌ನಲ್ಲಿ ಕನಿಷ್ಠ 15,000 ಜನರು ಸೇರಿಕೊಂಡು ಅತಿದೊಡ್ಡ ಪ್ರತಿಭಟನೆಗಳನ್ನು ನಡೆಸಲಾಗಿದೆ ಎಂದು ದಾಸ್‌ಗುಪ್ತಾ ಹೇಳಿದರು. ಮಧ್ಯ ಢಾಕಾದ ಶಹಬಾಗ್ ನೆರೆಹೊರೆಯಲ್ಲಿ ಮತ್ತೊಂದು ದೊಡ್ಡ ರ್ಯಾಲಿ ನಡೆಯಿತು, ಅಲ್ಲಿ ಹಲವಾರು ಸಾವಿರ ಜನರು ಸೇರಿದ್ದರು.