Asianet Suvarna News Asianet Suvarna News

ಪುಟಿನ್ ತಲೆಗೆ 1 ಮಿಲಿಯನ್ ಡಾಲರ್‌ ಬಹುಮಾನ ಘೋಷಿಸಿದ ರಷ್ಯಾದ ಉದ್ಯಮಿ

  • ಮೃತಪಟ್ಟು ಅಥವಾ ಜೀವಂತವಾಗಿ ಸಿಕ್ಕರು ಓಕೆ
  • ಪುಟಿನ್‌ ತಲೆಗೆ 1 ಮಿಲಿಯನ್ ಡಾಲರ್‌ ಬಹುಮಾನ
  • ಪುಟಿನ್‌ ಅವರನ್ನು ತಂದುಕೊಟ್ಟವರಿಗೆ ಭಾರಿ ಬಹುಮಾನ
Russian Businessman announces 1million dolor bounty on President Vladimir Putin akb
Author
Bangalore, First Published Mar 3, 2022, 4:47 PM IST | Last Updated Mar 3, 2022, 4:47 PM IST

ಮಾಸ್ಕೋ(ಮಾ.3): ರಷ್ಯಾ ಮೂಲದ ಉದ್ಯಮಿಯೊಬ್ಬರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ತಲೆಗೆ 1 ಮಿಲಿಯನ್ ಡಾಲರ್‌ ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಪುಟಿನ್‌ ಅವರು ಜೀವಂತವಾಗಿಯಾದರೂ ಸರಿ ಮೃತಪಟ್ಟಾದರು ಸರಿ ಅವರನ್ನು ತಂದು ಕೊಟ್ಟರೆ ಒಂದು ಮಿಲಿಯನ್‌ಡಾಲರ್ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ರಷ್ಯಾದ ಉದ್ಯಮಿ ಅಲೆಕ್ಸ್ ಕೊನಾನಿಖಿನ್ (Alex Konanykhin) ಈ ಘೋಷಣೆ ಮಾಡಿದ್ದು, ಒಂದು ಬಿಲಿಯನ್‌ ಡಾಲರ್ ಒಟ್ಟುಗೂಡಿಸುವುದಕ್ಕಾಗಿ  ತಲಾ ಒಂದೊಂದು ಮಿಲಿಯನ್ ಕೊಡುವಂತೆ ಇತರ ಸಾವಿರ ಜನರಲ್ಲಿ ಅವರು ಕೇಳಿದ್ದಾರೆ. 

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದಲ್ಲಿ ಯುದ್ಧ ಅಪರಾಧಗಳನ್ನು ಎಸಗಿದ್ದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು 'ಸತ್ತ ಅಥವಾ ಜೀವಂತ'ವಾಗಿ ಸೆರೆ ಹಿಡಿಯುವ ಯಾವುದೇ ಮಿಲಿಟರಿ ಅಧಿಕಾರಿಗೆ 1 ಮಿಲಿಯನ್  ಡಾಲರ್‌ ನೀಡುವುದಾಗಿ ಹೇಳಿದರು. ಪುಟಿನ್ ಅವರನ್ನು ರಷ್ಯಾದ ಮತ್ತು ಅಂತರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸುವ ಅಧಿಕಾರಿಗೆ ಅವರ ಸಾಂವಿಧಾನಿಕ ಕರ್ತವ್ಯವನ್ನು ಅನುಸರಿಸಿ 1,000,000 ಡಾಲರ್‌ ಪಾವತಿಸುವ ಭರವಸೆ ನೀಡುತ್ತೇನೆ ಎಂದು ಕೊನಾನಿಖಿನ್ ಫೇಸ್‌ಬುಕ್‌ನಲ್ಲಿ(Facebook) ಬರೆದಿದ್ದಾರೆ.

Ukraine Crisis: ನಮ್ಮ ನಾಗರಿಕರನ್ನೂ ಕರೆತನ್ನಿ, ಭಾರತಕ್ಕೆ ನೇಪಾಳ ಮನವಿ!
ತಮ್ಮ ಪೋಸ್ಟ್‌ನಲ್ಲಿ ರಷ್ಯಾ ಮೂಲದ ವಾಣಿಜ್ಯೋದ್ಯಮಿ ಅಲೆಕ್ಸ್ ಕೊನಾನಿಖಿನ್ ಅವರು ಪುಟಿನ್ ವಿರುದ್ಧ ಕೆಂಡಕಾರಿದ್ದು, ಪುಟಿನ್‌ ಅವರು 
ರಷ್ಯಾದಲ್ಲಿ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಸ್ಫೋಟಿಸುವ ವಿಶೇಷ ಕಾರ್ಯಾಚರಣೆಯ ಪರಿಣಾಮವಾಗಿ ಅಧಿಕಾರಕ್ಕೆ ಬಂದರು. ನಂತರ ಮುಕ್ತ ಚುನಾವಣೆಗಳನ್ನು ನಿಷೇಧಿಸುವ ಮೂಲಕ ಜೊತೆಗೆ ವಿರೋಧಿಗಳನ್ನು ಕೊಲ್ಲುವ ಮೂಲಕ ಸಂವಿಧಾನವನ್ನು ಪುಟಿನ್‌ ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದರು.

ಮೂಲತಃ ರಷ್ಯನ್ ಮತ್ತು ರಷ್ಯಾದ ಪ್ರಜೆಯಾಗಿ, ರಷ್ಯಾದ ನಿರಂಕುಶತ್ವವನ್ನು ಕೊನೆಗಾಣಿಸುವುದು ನನ್ನ ನೈತಿಕ ಕರ್ತವ್ಯವೆಂದು ನಾನು ಭಾವಿಸುತ್ತೇನೆ. ಪುಟಿನ್  ಅವರ ರಾಕ್ಷಸೀಯ ದಾಳಿಯನ್ನು ತಡೆದುಕೊಳ್ಳುವ ವೀರೋಚಿತ ಪ್ರಯತ್ನಗಳಲ್ಲಿ ನಾನು ಉಕ್ರೇನ್‌ಗೆ ನನ್ನ ಸಹಾಯವನ್ನು ಮುಂದುವರಿಸುತ್ತೇನೆ ಎಂದು ಉದ್ಯಮಿ ಹೇಳಿದ್ದಾರೆ. ಪುಟಿನ್‌ ಫೋಟೋದೊಂದಿಗೆ ಸಾಮೂಹಿಕ ಹತ್ಯೆಯ ಅಪರಾಧಕ್ಕಾಗಿ,  ಸತ್ತು ಅಥವಾ ಜೀವಂತವಾಗಿಯಾದರೂ ಇವರು ಬೇಕಾಗಿದ್ದಾರೆ ಎಂದು ಬರೆಯಲಾಗಿದೆ. 

Ukraine Crisis: ಖಾರ್ಕೀವ್‌ನಿಂದ ಭಾರತೀಯರ ಸ್ಥಳಾಂತರಕ್ಕೆ 6 ತಾಸು ಯುದ್ಧ ನಿಲ್ಲಿಸಲು ಮುಂದಾದ ರಷ್ಯಾ!

ಈ ಪೋಸ್ಟ್‌ನ್ನು ಈಗ ಡಿಲಿಟ್ ಮಾಡಲಾಗಿದ್ದು, ಮತ್ತೊಂದು ಪೋಸ್ಟ್‌ನಲ್ಲಿ ಒಂದು ಬಿಲಿಯನ್‌ ಸೇರಿಸಲು ತಲಾ ಒಂದೊಂದು ಲಕ್ಷ ನೀಡಿ ನೆರವಾಗುವಂತೆ ಈ ಉದ್ಯಮಿ ಇತರ ಸಾವಿರ ಮಂದಿಯಲ್ಲಿ ನೆರವು ಕೇಳಿದರು. ಒಂದು ವರದಿಯ ಪ್ರಕಾರ, ಕೊನಾನಿಖಿನ್ ಹಾಗೂ ರಷ್ಯಾ ಸರ್ಕಾರದ ನಡುವಿನ ಸಂಬಂಧವೂ ಗತಕಾಲದಿಂದಲೂ ಎಣ್ಣೆಸೀಗೆಯಂತಿದೆ. ಮಾಸ್ಕೋ(Moscow)  ಭೌತಶಾಸ್ತ್ರ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಕೊನಾನಿಖಿನ್, ಬ್ಯಾಂಕಿಂಗ್, ಷೇರುಗಳು ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಅಲ್ಲದೇ ಈ ಉದ್ಯಮಿ 1992 ರ ಹೊತ್ತಿಗೆ ಸುಮಾರು $300 ಮಿಲಿಯನ್ ಮೌಲ್ಯದ 100 ಕ್ಕೂ ಹೆಚ್ಚು ಸಂಸ್ಥೆಗಳ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಅವರು ಆ ವರ್ಷವೇ ಆಗಿನ ರಷ್ಯಾದ ಅಧ್ಯಕ್ಷ ಬೋರಿಸ್ ಯೆಲ್ಟ್ಸಿನ್ (Boris Yeltsin) ಅವರ ಮೊದಲ ವಾಷಿಂಗ್ಟನ್‌ ಭೇಟಿಯ ನಿಯೋಗದ ಭಾಗವಾಗಿದ್ದರು. 1996ರಲ್ಲಿ ಅವರು ಅಮೆರಿಕಾದಲ್ಲಿ ತಂಗಿದ್ದಾಗ, ಕೊನನಿಖಿನ್ ಮತ್ತು ಅವರ ಪತ್ನಿಯನ್ನು ಫೆಡರಲ್ ವಲಸೆ ಏಜೆಂಟ್‌ಗಳು ತಮ್ಮ ಅಮೆರಿಕನ್ ವೀಸಾಗಳ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಿದ್ದರು. ಮಾಸ್ಕೋದಲ್ಲಿನ ರಷ್ಯನ್ ಎಕ್ಸ್‌ಚೇಂಜ್ ಬ್ಯಾಂಕ್‌ನಿಂದ ಅವರು $ 8 ಮಿಲಿಯನ್ ಡಾಲರ್‌ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ ನಂತರ ಈ ಬಂಧನ ನಡೆದಿತ್ತು.

ವಿಚಾರಣೆಯ ಸಮಯದಲ್ಲಿ, ಕೊನಾನಿಖಿನ್, ರಷ್ಯನ್ ಎಕ್ಸ್ಚೇಂಜ್ ಬ್ಯಾಂಕ್‌ನಲ್ಲಿ ನನ್ನ ಕೆಲವು ಕಾರ್ಪೊರೇಟ್ ಸಹಾಯಕರು ಹಣಕ್ಕಾಗಿ ತನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು ಮತ್ತು ಬೆದರಿಕೆ ಒಡ್ಡಿದ್ದರು ಎಂದು ಸಾಕ್ಷ್ಯ ನೀಡಿದರು. ಇದಾದ ಬಳಿಕ ಅವರು ಹಂಗೇರಿಗೆ ತೆರಳಿದರು, ಅಲ್ಲೂ ಅವರಿಗೆ ಬೆದರಿಕೆಗಳು ಬಂದಿದ್ದವು, ಇದು ಅವರನ್ನು ಜೆಕ್ (Czech Republic) ಗಣರಾಜ್ಯಕ್ಕೆ ಮತ್ತು ನಂತರ ನ್ಯೂಯಾರ್ಕ್‌ಗೆ (NewYork) ಪಲಾಯನ ಮಾಡಲು ಪ್ರೇರೇಪಿಸಿತು.

Latest Videos
Follow Us:
Download App:
  • android
  • ios