ಉಕ್ರೇನ್‌ ಸೇನಾಧಿಕಾರಿಗಳ ಗುರಿಯಾಗಿಸಿ ದಾಳಿ: ಓರ್ವ ಉಕ್ರೇನ್‌ ಯೋಧ ಸಾವು ಬಂಡುಕೋರರ ಮಟ್ಟಹಾಕಲು ಉಕ್ರೇನ್‌ ಯೋಧರಿಂದ ಭಾರಿ ತಂತ್ರಗಾರಿಕೆ ಡಿಯಲ್ಲಿ ಭರ್ಜರಿ ತಾಲೀಮು ಎರಡೂ ಸೇನೆಗಳ ಸನ್ನದ್ಧ ಸ್ಥಿತಿ

ಮಾಸ್ಕೋ(ಫೆ.20): ರಷ್ಯಾ ಮತ್ತು ಉಕ್ರೇನ್‌ ನಡುವಿನ ಬಿಕ್ಕಟ್ಟು(Russia Ukraine Crisis) ಬಹುತೇಕ ಯುದ್ಧದ(War) ಸ್ಥಿತಿಗೆ ಬಂದಿರುವ ಸ್ಪಷ್ಟಸೂಚನೆಗಳು ಶನಿವಾರ ಲಭ್ಯವಾಗಿವೆ. ಸೇನೆಯನ್ನು(Military) ಉಕ್ರೇನ್‌ ಗಡಿಯಿಂದ(Ukraine Border) ಹಿಂಪಡೆಯುತ್ತಿರುವುದಾಗಿ ಹೇಳಿದ್ದ ರಷ್ಯಾ, ಉಕ್ರೇನ್‌ ಗಡಿಯ ಆಯಕಟ್ಟಿನ ಪ್ರದೇಶದಲ್ಲಿ ಶನಿವಾರ ಬೃಹತ್‌ ಸೇನಾ ತಾಲೀಮು ನಡೆಸಿದೆ. ಇದೇ ವೇಳೆ ರಷ್ಯಾ ಬೆಂಬಲಿತ ಬಂಡುಕೋರ ಗುಂಪುಗಳು ಕೂಡ ಉಕ್ರೇನ್‌ನಲ್ಲಿನ ತಮ್ಮ ಪ್ರಾಬಲ್ಯದ ಪ್ರದೇಶದಲ್ಲಿ ಪಡೆಗಳನ್ನು ನಿಯೋಜಿಸಿವೆ. ಅಲ್ಲಲ್ಲಿ ಶೆಲ್‌ ದಾಳಿಗಳು ಕೂಡ ನಡೆದಿದ್ದು, ತನ್ನ ಒಬ್ಬ ಯೋಧ ಸಾವನ್ನಪ್ಪಿದ್ದಾನೆ ಎಂದು ಉಕ್ರೇನ್‌ ಹೇಳಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಸರ್ಕಾರ ಕೂಡ ಪ್ರತಿತಂತ್ರ ಆರಂಭಿಸಿದೆ. ಇದು ಯುದ್ಧದ ನಿಚ್ಚಳ ಸೂಚನೆ ಎಂದೇ ಭಾವಿಸಲಾಗಿದೆ.

ತನ್ನ ಹೇಳಿಕೆಗೆ ವಿರುದ್ಧವಾಗಿ ರಷ್ಯಾ ಸರ್ಕಾರವು, ಉಕ್ರೇನ್‌ನ ಮುಂಚೂಣಿ ಗಡಿಗೆ ಮತ್ತಷ್ಟುಸೇನೆ ಮತ್ತು ಶಸ್ತಾ್ರಸ್ತ್ರಗಳನ್ನು ರವಾನಿಸಿದ್ದು, ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಈ ವಿಷಯವನ್ನು ಅಮೆರಿಕದ ಖಾಸಗಿ ಕಂಪನಿಯೊಂದು ಸೆರೆಹಿಡಿದ ಇತ್ತೀಚಿನ ಉಪಗ್ರಹ ಚಿತ್ರಗಳು ಖಚಿತಪಡಿಸಿವೆ. ಈ ನಡುವೆ, ಶನಿವಾರ ಉಕ್ರೇನ್‌ ಗಡಿಯಲ್ಲಿ ರಷ್ಯಾ ಬೃಹತ್‌ ತಾಲೀಮು ನಡೆಸಿದ್ದು, ಈ ವೇಳೆ ಖಂಡಾಂತರ ಕ್ಷಿಪಣಿ, ಕ್ರೂಸ್‌ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತಾ್ರಸ್ತ್ರಗಳನ್ನು ಪರೀಕ್ಷೆಗೆ ಒಳಪಡಿಸಿ ಶಸ್ತ್ರಾಭ್ಯಾಸ ನಡೆಸಿದೆ.

Russia-Ukraine Crisis: ಪುಟಿನ್ ಅಣುಬಾಂಬ್ ವಾರ್ನಿಂಗ್, ಜಗತ್ತಿಗೆ ಮಹಾಯುದ್ಧ ಭೀತಿ

ಬಂಡಾಯ ಬಿಸಿ- ಶೆಲ್‌ ದಾಳಿ:
ಹೀಗಾಗಿ ರಷ್ಯಾದ ಜೊತೆಗೆ ದಾಳಿಗೆ ಸಜ್ಜಾಗಿರುವ ಉಕ್ರೇನ್‌ ಸೇನೆ, ತನ್ನ ದೇಶದೊಳಗೇ ಇರುವ ಬಂಡುಕೋರರ ವಿರುದ್ಧವೂ ಹೋರಾಟಕ್ಕೆ ರಣತಂತ್ರ ರೂಪಿಸಿದೆ. ತನ್ನ ಪಡೆಗಳನ್ನೂ ಬಲಪಡಿಸಲು ಆರಂಭಿಸಿದೆ.

ಆದರೆ, ಉಕ್ರೇನ್‌ ಸರ್ಕಾರಕ್ಕೆ ಮತ್ತೊಂದೆಡೆ ತನ್ನದೇ ದೇಶದೊಳಗಿರುವ ರಷ್ಯಾ ಬೆಂಬಲಿತ ಬಂಡುಕೋರರ ದಾಳಿಯ ಭೀತಿಯನ್ನೂ ಎದುರಿಸಬೇಕಾಗಿ ಬಂದಿದೆ. ಉಕ್ರೇನ್‌ ರಣನೀತಿಯ ಮಾಹಿತಿ ಪಡೆದಿರುವ ಪೂರ್ವ ಉಕ್ರೇನ್‌ನ ಡೊನೆಟ್ಸ್‌$್ಕ ಮತ್ತು ಲುಹಾನ್ಸಕ್‌ ಪ್ರಾಂತೀಯ ಬಂಡುಕೋರ ಸರ್ಕಾರಗಳು ಶನಿವಾರ ಯುದ್ಧ ತಾಲೀಮು ನಡೆಸಿವೆ.

Russia Ukraine Crisis: ಉಕ್ರೇನ್‌ನಿಂದ ದೇಶಕ್ಕೆ ಮರಳಿ: ಅಮೆರಿಕನ್ನಿಗರಿಗೆ ಬೈಡೆನ್ ಕರೆ

ಉಕ್ರೇನ್‌ನಲ್ಲಿ ಬಂಡುಕೋರರ ಹಿಡಿತದಲ್ಲಿರುವ ಹಲವು ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ ಸರಣಿ ಸ್ಫೋಟದ ಸದ್ದು ಕೇಳಿಬಂದಿದೆ. ಅದರ ನಡುವೆಯೇ ಶನಿವಾರ ಬಂಡುಕೋರರು ನಡೆಸಿದ ಶೆಲ್‌ ದಾಳಿಗೆ ತನ್ನ ಯೋಧನೊಬ್ಬ ಸಾವನ್ನಪ್ಪಿದ್ದಾನೆ ಎಂದು ಉಕ್ರೇನ್‌ ಸೇನೆ ಹೇಳಿಕೊಂಡಿದೆ. ರಾತ್ರಿ ಕೂಡ ಉಕ್ರೇನ್‌ನ ಕೆಲವು ಸೇನಾಧಿಕಾರಿಗಳು ಪೂರ್ವ ಉಕ್ರೇನ್‌ ಪ್ರವಾಸದಲ್ಲಿದ್ದಾಗ ಅವರ ಮೇಲೆ ಶೆಲ್‌ ದಾಳಿ ನಡೆದಿದೆ. ಆದರೆ ಅವರು ಬಂಕರ್‌ನಲ್ಲಿ ಅವಿತು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ತಮ್ಮ ಹಿಡಿತದ ಪ್ರದೇಶಗಳ ಮೇಲೆ ಉಕ್ರೇನ್‌ ದಾಳಿ ನಡೆಸಬಹುದು ಎಂಬ ಕಾರಣಕ್ಕಾಗಿ ಲಕ್ಷಾಂತರ ಜನರನ್ನು ರಷ್ಯಾಕ್ಕೆ ಕಳುಹಿಸುವ ಕೆಲಸವನ್ನು ಬಂಡುಕೋರರು ಆರಂಭಿಸಿದ್ದಾರೆ. ಬಂಡುಕೋರರಿಗೆ ಹಲವು ವರ್ಷಗಳಿಂದ ನೆರವು ನೀಡುತ್ತಿರುವ ರಷ್ಯಾ ಸರ್ಕಾರ, ಬಂಡುಕೋರರ ವಶದಲ್ಲಿನ ಕನಿಷ್ಠ 7 ಲಕ್ಷ ಜನರಿಗೆ ತನ್ನ ದೇಶಕ್ಕೆ ಬರಲು ಅವಕಾಶ ಮಾಡಿಕೊಟ್ಟಿದೆ.

ಉಕ್ರೇನಿ ಪ್ರತ್ಯೇಕತಾವಾದಿಗಳು ರಷ್ಯಾಗೆ ಸ್ಥಳಾಂತರ
ರಷ್ಯಾ ಹಾಗೂ ಉಕ್ರೇನ್‌ ನಡುವಿನ ಸಂಭಾವ್ಯ ಯುದ್ಧದ ಹಿನ್ನೆಲೆಯಲ್ಲಿ ಪೂರ್ವ ಉಕ್ರೇನ್‌ನ ಪ್ರತ್ಯೇಕತಾವಾದಿಗಳು ಶುಕ್ರವಾರ ತಾವು ರಷ್ಯಾಕ್ಕೆ ಸ್ಥಳಾಂತರಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.

ಪೂರ್ವ ಉಕ್ರೇನಿನ ಗಡಿಯಲ್ಲಿ ರಷ್ಯಾ ಸುಮಾರು 1,50,000 ಸೇನೆಯನ್ನು ನಿಯೋಜಿಸಿದ್ದು ಯಾವುದೇ ಸಮಯದಲ್ಲಿ ಯುದ್ಧ ಘೋಷಣೆಯಾಗುವ ಭೀತಿಯಿದೆ. ಗಡಿ ಭಾಗದಲ್ಲಿರುವ ಡೋನೆಸ್ಕ್‌ ಹಾಗೂ ಲೂಹಾನ್ಸ್‌$್ಕ ವಲಯದಲ್ಲಿ ರಷ್ಯಾ ಪಡೆ ನಡೆಸಿದ ಶೆಲ್‌ ದಾಳಿಯಿಂದಾಗಿ ಸ್ಥಳೀಯ ಶಿಶುವಿಹಾರದ ಗೋಡೆಗಳು ಕುಸಿದಿದೆ ಅಲ್ಲದೇ ಜನರ ಸಂವಹನಕ್ಕೆ ಅಡ್ಡಿಯಾಗಿದೆ. ಹೀಗಾಗಿ ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿದ್ದಂತೆ ರಷ್ಯಾ ಪರವಾಗಿರುವ ಪೂರ್ವ ಉಕ್ರೇನಿನ ಜನತೆಯು ರಷ್ಯಾಕ್ಕೆ ಸ್ಥಳಾಂತರಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.

2014ರಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಹಾಗೂ ಉಕ್ರೇನಿನ ಸೇನೆಯ ನಡುವಿನ ಹೋರಾಟದಲ್ಲಿ ಈ ವಲಯದ 14,000 ಜನರು ಮೃತಪಟ್ಟಿದ್ದರು.