ಇಷ್ಟು ದಿನ ಎರಡು ಲಸಿಕೆಗಳನ್ನು ಪಡೆಯಬೇಕಿತ್ತು. ಕೋವಿಡ್ ನಿಯಂತ್ರಣ ಉದ್ದೇಶದಿಂದ 2 ಡೋಸ್ ಲಸಿಕೆ ನೀಡಲಾಗುತಿತ್ತು. ಆದರೀಗ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್‌ಗೆ ಅನುಮೋದನೆ ಸಿಕ್ಕಿದೆ. 

ಮಾಸ್ಕೋ (ಮೇ.07): ರಷ್ಯಾದ ಸ್ಪುಟ್ನಿಕ್‌-5 ಕೊರೋನಾ ವೈರಸ್‌ ಲಸಿಕೆಯ ಸಿಂಗಲ್‌ ಡೋಸ್‌ ಆವೃತ್ತಿಗೆ ರಷ್ಯಾದ ಆರೋಗ್ಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. 

ಈ ಮೂಲಕ ಅಮೆರಿಕದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಬಳಿಕ ರಷ್ಯಾ ಸಿಂಗಲ್‌ ಡೋಸ್‌ ಲಸಿಕೆಗೆ ಅನುಮೋದನೆ ನೀಡಿದ 2ನೇ ದೇಶ ಎನಿಸಿಕೊಂಡಿದೆ.

ಸಿಂಗಲ್‌ ಡೋಸ್‌ನ ಸ್ಪುಟ್ನಿಕ್‌ ಲೈಟ್‌ ಲಸಿಕೆ ಶೇ.79.4ರಷ್ಟುಪರಿಣಾಮಕಾರಿಯಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್‌)ನ ಧನ ಸಹಾಯದೊಂದಿಗೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. 

ಮೂರನೇ ಕೊವಿಡ್‌ ಲಸಿಕೆಗೆ ದೇಶದಲ್ಲಿ ಅನುಮತಿ! ..

ರಷ್ಯಾದ ಸ್ಪುಟ್ನಿಕ್‌ ಲಸಿಕೆಗೆ ಈಗಾಗಲೇ ಭಾರತದ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳಲ್ಲಿ ಅನುಮೋದನೆ ನೀಡಲಾಗಿದೆ. ಜಾಗತಿಕವಾಗಿ 2 ಕೋಟಿಗೂ ಅಧಿಕ ಮಂದಿ ಸ್ಪುಟ್ನಿಕ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona