Russia Ukraine War: ಖಾರ್ಖಿವ್ ಮೇಲೆ ಭೀಕರ ದಾಳಿ ಸಾಧ್ಯತೆ.. ಈ ಕೂಡಲೇ ಅಲ್ಲಿಂದ ಹೊರಡಿ
* ಉಕ್ರೇನ್ ಮೇಲೆ ರಷ್ಯಾದ ನಿರಂತರ ದಾಳಿ
* ಟಿವಿ ಟವರ್ ಮೇಲೆ ಬಾಂಬ್
* ಮಾಧ್ಯಮಗಳ ಪ್ರಸಾರ ಸಂಪೂರ್ಣ ಬಂದ್
ಕೈವ್(ಮಾ. 02) ಪ್ರತಿರೋಧ ತೋರುತ್ತಿರುವ ಉಕ್ರೇನ್ (Ukraine) ಮೇಲೆ ವ್ಯಾಕ್ಯೂಮ್ ಬಾಂಬ್ ದಾಳಿಗೆ ಸಿದ್ಧವಾಗಿದೆ. ರಷ್ಯಾದ (Russia) ದೊಡ್ಡ ಸೇನೆ ನಿರಂತರ ದಾಳಿ ಮಾಡುತ್ತಿದ್ದರೂ ಉಕ್ರೇನ್ ಪ್ರತಿರೋಧ ತೋರಿಕೊಂಡೇ ಬಂದಿದೆ. ಈ ನಡುವೆ ಖಾರ್ಖಿವ್ ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ಮಹತ್ವದ ಮಾಹಿತಿ ನೀಡಿದೆ.
ಉಕ್ರೇನ್ ನಗರ ಖಾರ್ಖಿವ್ (Kharkiv )ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು ಎಲ್ಲ ಭಾರತೀಯರು ನಗರ ತೊರೆಯಬೇಕು. ಸುರಕ್ಷಿತ ದೃಷ್ಟಿಯಿಂದ ಈ ಕೂಡಲೇ ಸ್ಥಳಾಂತರವಾಗಬೇಕು. ವಾಹನ ಸಿಗದಿದ್ದರೆ ನಡೆದುಕೊಂಡೇ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ತಿಳಿಸಿದೆ.
Russia Ukraine war ಯುದ್ಧ ನಾಡು ಉಕ್ರೇನ್‌ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು
ಖಾರ್ಖಿವ್ ಮೇಲೆ ರಷ್ಯಾ ಭೀಕರ ದಾಳಿ ಮಾಡುವ ಸೂಚನೆ ಸಿಕ್ಕಿದ್ದು ಪ್ರಾಣ ಕಾಪಾಡಿಕೊಳ್ಳಲು ಅನಿವಾರ್ಯವಾಗಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಟಿವಿ ಟವರ್ ಮೇಲೆ ಬಾಂಬ್ ದಾಳಿ ಮಾಡಲಾಗಿದ್ದು ಮಾಧ್ಯಮಗಳ ಪ್ರಸಾರ ಬಂದ್ ಆಗಿದೆ. ಉಕ್ರೇನ್ ನ ಎಲ್ಲ ನಗರಗಳ ಮೇಲೆ ರಷ್ಯಾ ನಿರಂತರ ದಾಳಿ ಮಾಡುತ್ತಿದೆ.
ಪ್ರಾಣ ಉಳಿಸಿದ್ದ ರಾಷ್ಟ್ರ ಧ್ವಜ: ನಮ್ಮ ದೇಶದ ಹೆಮ್ಮೆಯ ರಾಷ್ಟ್ರಧ್ವಜವೀಗ ನಮ್ಮ ದೇಶದ ಪ್ರಜೆಗಳನ್ನು ಮಾತ್ರವಲ್ಲದೇ ಟರ್ಕಿ ದೇಶದ ಹಾಗೂ ಪಕ್ಕದ ಶತ್ರುರಾಷ್ಟ್ರ ಪಾಕಿಸ್ಥಾನದ ವಿದ್ಯಾರ್ಥಿಗಳನ್ನು ಕೂಡ ಯುದ್ಧಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದ್ದು ಹೆಮ್ಮೆಯ ಸಂಗತಿ. ರಷ್ಯಾ ಆಕ್ರಮಣದಿಂದ ಯುದ್ಧ ಪೀಡಿತವಾಗಿರುವ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಆಪರೇಷನ್ ಗಂಗಾ ಹೆಸರಿನ ಮೂಲಕ ರಕ್ಷಣೆ ಮಾಡುತ್ತಿದೆ. ಉಕ್ರೇನ್‌ನಲ್ಲಿ ಕೇವಲ ಭಾರತದ ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರಂಪಂಚದ ವಿವಿಧ ದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಎಲ್ಲಾ ದೇಶಗಳು ಭಾರತದಂತೆ ತಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಮುತುವರ್ಜಿ ವಹಿಸಿಲ್ಲ. ಇದರಿಂದಾಗಿ ಹಲವು ದೇಶಗಳ ವಿದ್ಯಾರ್ಥಿಗಳ ಸ್ಥಿತಿ ಅಲ್ಲಿ ಶೋಚನೀಯವಾಗಿದೆ.
ಈ ಮಧ್ಯೆ ಆಶಾಭಾವ ಮೂಡಿಸಿದ ಹಾಗೂ ಭಾರತೀಯರಾಗಿ ಹೆಮ್ಮೆಪಡುವ ವಿಷಯವೆಂದರೆ ಭಾರತದ ತ್ರಿವರ್ಣ ರಾಷ್ಟ್ರಧ್ವಜ ಕೇವಲ ಭಾರತೀಯರನ್ನು ಮಾತ್ರವಲ್ಲದೇ ಅಲ್ಲಿ ಸಿಲುಕಿರುವ ಟರ್ಕಿ ಹಾಗೂ ಪಾಕಿಸ್ತಾನದ ವಿದ್ಯಾರ್ಥಿಗಳನ್ನು ಕೂಡ ರಕ್ಷಿಸುವಲ್ಲಿ ನೆರವಾಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ದೇಶ ಹಾಗೂ ಪ್ರಪಂಚದಾದ್ಯಂತ ಇರುವ ಭಾರತೀಯರಿಗೆ ನಮ್ಮ ರಾಷ್ಟ್ರಧ್ವಜದ ಘನತೆ ಏನು ಎನ್ನುವುದು ಈ ಮೂಲಕ ಗೊತ್ತಾಗಿದೆ. ಸ್ವತಃ ಭಾರತೀಯ ವಿದ್ಯಾರ್ಥಿಗಳೇ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದರು.
ಎರಡೂ ದೇಶಗಳು ಯದ್ಧ ವಾತಾವರಣದಿಂದ ಹಿಂದೆ ಸರಿಯಲು ಒಪ್ಪಿಕೊಳ್ಳುತ್ತಿಲ್ಲ. ಕರ್ನಾಟಕದ ನವೀನ್ ಈಗ ಪಂಜಾಬಿನ ವಿದ್ಯಾರ್ಥಿ ರಷ್ಯಾ ದಾಳಿಗೆ ಬಲಿಯಾಗಿದ್ಧಾರೆ. ದೇಶ ತೊರೆಯುವುದು ಸುಲಭದ ಮಾತಲ್ಲ. ವಾಹನಗಳು ಸಿಗುತ್ತಿಲ್ಲ. ಇನ್ನೊಂದು ಕಡೆ ಜನಾಂಗೀಯ ದ್ಔಏಷ ಸಹ ತಲೆ ಎತ್ತಿದ್ದು ಯುರೋಪಿಯನ್ನರಿಗೆ ಮೊದಲ ಆದ್ಯತೆ ಎನ್ನುವಂತೆ ನಡೆದುಕೊಳ್ಳಲಾಗುತ್ತಿದೆ. ಸುರಕ್ಷಿತವಾಗಿ ಭಾರತೀಯರನ್ನು ಅಲ್ಲಿಂದ ಹೊರ ತರಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದೆ. ಆರು ಜನ ಸಚಿವರಿಗೆ ಹೊಣೆ ವಹಿಸಲಾಗಿದೆ. ಯುರೋಪ್ ಒಕ್ಕೂಟಗಳು ಸಹ ಸ್ಪಷ್ಟವಾಗಿ ಉಕ್ರೇನ್ ಬೆಂಬಲಕ್ಕೆ ನಿಂತಿಲ್ಲ. ರಷ್ಯಾ ಮಾತ್ರ ದಾಳಿ ಮಾಡಿ ಮುಗಿಸುವ ಯೋಚನೆಯಲ್ಲೇ ಇದೆ .