Asianet Suvarna News Asianet Suvarna News

982 ಕೋಟಿ ಮೌಲ್ಯದ ಬಂಗಲೆಯಲ್ಲಿ ಜಿಮ್ನಾಸ್ಟ್‌ ಪ್ರೇಯಸಿ ಜತೆ ಪುಟಿನ್‌ ವಾಸ!

ಉಕ್ರೇನ್‌ ಮೇಲೆ ದಾಳಿ ಮಾಡಿದ ಬಳಿಕ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಈ ಬಾರಿ ದುಬಾರಿ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Russia president vladimir putin spending time with gymnast girl friend in 982 crore valued Bungalow akb
Author
First Published Mar 4, 2023, 6:58 AM IST

ಮಾಸ್ಕೋ: ಉಕ್ರೇನ್‌ ಮೇಲೆ ದಾಳಿ ಮಾಡಿದ ಬಳಿಕ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಈ ಬಾರಿ ದುಬಾರಿ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಂಗಲೆಯನ್ನು ಪುಟಿನ್‌ ಇತ್ತೀಚಿಗೆ 982 ಕೋಟಿ ರು. ನೀಡಿ ಖರೀದಿಸಿದ್ದು, ತಮ್ಮ ಜಿಮ್ನಾಸ್ಟ್‌ ಪ್ರೇಯಸಿಯೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಬಂಗಲೆ ಮಾಸ್ಕೋದ ವಾಯವ್ಯ ಭಾಗದಲ್ಲಿದ್ದು, ರಾಜಕೀಯ ಲಂಚದಿಂದ (Political bribe) ಈ ಬಂಗಲೆಯನ್ನು ಖರೀದಿಸಿದ್ದಾರೆ ಹಾಗೂ ತಮ್ಮ ಪ್ರೇಯಸಿ ಅಲಿನಾ ಕಬೇವಾ (Alina Kabaeva) ಜೊತೆ ವಾಸಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸುಮಾರು 13 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಬಂಗಲೆಯ 2020ರಲ್ಲಿ ನಿರ್ಮಿಸಲು ಆರಂಭಿಸಲಾಗಿತ್ತು. ಇದರ ನಿರ್ಮಾಣಕ್ಕೆ 2 ವರ್ಷ ತಗುಲಿದ್ದು, ಇಲ್ಲಿ ತಮ್ಮ ಪ್ರೇಯಸಿ ಹಾಗೂ ಮಕ್ಕಳೊಂದಿಗೆ ಪುಟಿನ್‌ ಇದ್ದಾರೆ. ಅಲ್ಲದೇ ಕಬೇವಾ ಅವರ ಮಹಿಳಾ ಸಂಬಂಧಿಗಳು ಈ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಬ್ಬಬ್ಬಾ.. 70 ಎಕರೆಯಲ್ಲಿದೆ ರಷ್ಯಾ ಅಧ್ಯಕ್ಷ ಪುಟಿನ್ ವಾಸಿಸೋ ಗೋಲ್ಡನ್ ಪ್ಯಾಲೇಸ್‌

ಈ ಬಂಗಲೆಯ ಕೆಲವು ಫೋಟೋಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಲಾನ್‌ನಲ್ಲಿ ಚಿನ್ನದ ಕುರ್ಚಿಗಳನ್ನು ಇಡಲಾಗಿದೆ. ಅಲ್ಲದೇ ಮನೆಯ ಒಳಾಂಗಣವನ್ನು ಸಹ ಚಿನ್ನದಿಂದ ಅಲಂಕಾರ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

ಜಂಟಿ ಹೇಳಿಕೆ ಬಿಡುಗಡೆಗೆ ಜಿ20 ವಿಫಲ: ಕೆಲ ಅಂಶಗಳಿಗೆ ರಷ್ಯಾ, ಚೀನಾ ವಿರೋಧ

Follow Us:
Download App:
  • android
  • ios