ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23 ಜನ ಗಾಯಗೊಂಡಿದ್ದಾರೆ.
ಕೀವ್: ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23 ಜನ ಗಾಯಗೊಂಡಿದ್ದಾರೆ. ರಷ್ಯಾ - ಉಕ್ರೇನ್ ಯುದ್ಧ ಪ್ರಾರಂಭವಾದ ನಂತರದಲ್ಲೇ ಇದು ಅತಿ ದೊಡ್ಡ ವೈಮಾನಿಕ ದಾಳಿಯಾಗಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಸ್ಥಗಿತಗೊಳಿಸುವ ತಮ್ಮ ಆಡಳಿತದ ನಿರ್ಧಾರದ ಬಗ್ಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.
ಕೀವ್ ರಷ್ಯಾದ ಮೊದಲ ಗುರಿಯಾಗಿತ್ತು. ದಾಳಿಯಲ್ಲಿ ಕನಿಷ್ಠ 23 ಮಂದಿ ಗಾಯಗೊಂಡಿದ್ದು, 14 ಜನ ಅಸ್ಪತ್ರೆಗೆ ದಾಖಲಾಗಿದ್ದಾರೆ. ಉಕ್ರೇನಿಯನ್ ವಾಯುರಕ್ಷಣಾ ಪಡೆಗಳು 2 ಕ್ರೂಸ್ ಕ್ಷಿಪಣಿಗಳು ಸೇರಿದಂತೆ 270 ಗುರಿಗಳನ್ನು ಹೊಡೆದುರುಳಿಸಿದವು. ಇನ್ನೂ 208 ಗುರಿಗಳು ರಾಡಾರ್‌ನಿಂದ ನಾಶವಾಗಿವೆ. ರಾಜಧಾನಿಯ 10 ಜಿಲ್ಲೆಗಳಲ್ಲಿ ಕನಿಷ್ಠ 5 ಜಿಲ್ಲೆಗಳಲ್ಲಿ ಹಾನಿಯಾಗಿದೆ ಎಂದು ತುರ್ತು ಸೇವೆಗಳು ವರದಿ ಮಾಡಿವೆ.
ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದ ರಷ್ಯಾ
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಉಕ್ರೇನ್ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿ ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿ ಹಾಗೂ ಅದರಲ್ಲಿದ್ದ ಪೈಲಟ್‌ನನ್ನು ಹತ್ಯೆ ಮಾಡಿತ್ತು.
ಯುದ್ಧದಲ್ಲಿ ಇದು ಉಕ್ರೇನ್‌ನ ಎಫ್-16 ಯುದ್ಧ ವಿಮಾನ ಧ್ವಂಸ ಇದೇ ಮೊದಲು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಶಾಂತಿ ಮಾತುಕತೆಯ ಪ್ರಸ್ತಾಪ ನಡೆಯುತ್ತಿರುವ ನಡುವೆಯೇ ದಾಳಿ ನಡೆದಿತ್ತು
ಈ ಬಗ್ಗೆ ಉಕ್ರೇನ್ ವಾಯುಪಡೆಯ ಸಂವಹನ ವಿಭಾಗದ ಮುಖ್ಯಸ್ಥ ಯೂರಿ ಇಹ್ನಾತ್ ಪ್ರತಿಕ್ರಿಯಿಸಿದ್ದು, ‘ಇದುವರೆಗಿನ ಯುದ್ಧದಲ್ಲಿ ರಷ್ಯಾ ಅತಿದೊಡ್ಡ ದಾಳಿ ನಡೆಸಿದೆ. ರಾತ್ರೋರಾತ್ರಿ ಜನವಸತಿ, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು 477 ಡ್ರೋನ್ , 60 ಕ್ಷಿಪಣಿ ಸೇರಿದಂತೆ 537 ವೈಮಾನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಈ ಪೈಕಿ 249 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. 226 ಡ್ರೋನ್‌ಗಳು ಎಲೆಕ್ಟ್ರಾನಿಕ್ ಜಾಮ್‌ನಿಂದಾಗಿ ನಾಪತ್ತೆಯಾಗಿದೆ. ದಾಳಿಯಲ್ಲಿ ನಮ್ಮ ಒಬ್ಬ ನಾಗರಿಕ ಮಾತ್ರ ಸಾವನ್ನಪ್ಪಿದ್ದಾನೆ’ ಎನ್ನಲಾಗಿತ್ತು.


