ಯುದ್ಧದಲ್ಲಿ ಮೃತಪಟ್ಟ ಹಸುಳೆಗಳೆಷ್ಟು: ಹೃದಯ ಹಿಂಡುತಿದೆ 100ಕ್ಕೂ ಹೆಚ್ಚು ಖಾಲಿ ತೊಟ್ಟಿಲುಗಳು

  • ರಷ್ಯಾ ಉಕ್ರೇನ್‌ ಯುದ್ಧದಲ್ಲಿ ಮೃತಪಟ್ಟ ಹಸುಗೂಸುಗಳ ಸ್ಮರಣೆ
  • ಖಾಲಿ ಸ್ಟ್ರೋಲರ್‌ಗಳನಿಟ್ಟು ಅಂತಿಮ ನಮನ
  • 100ಕ್ಕೂ ಹೆಚ್ಚು ಸ್ಟ್ರೋಲರ್‌ಗಳು ಖಾಲಿ ಖಾಲಿ
Russia Ukraine war Empty Strollers Lined Up In Lviv Central Square As Symbol Of Children Killed In War

ಕೀವ್‌(ಮಾ.19): ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದಿಂದ ಉಕ್ರೇನ್‌ ಸಂಪೂರ್ಣ ನರಕವಾಗಿದೆ. ನೂರಾರು ಮಕ್ಕಳು ಸೇರಿದಂತೆ ಸಾವಿರಾರು ಜನ ಪ್ರಾಣ ಬಿಟ್ಟಿದ್ದಾರೆ. ಯುದ್ಧದಿಂದಾಗಿ ಕೊಲ್ಲಲ್ಪಟ್ಟ ಮಕ್ಕಳ ಸಂಕೇತವಾಗಿ ಎಲ್ವಿವ್‌ನ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಖಾಲಿಯಾದ ಸ್ಟ್ರಾಲರ್ಸ್‌fಗಳನ್ನು(ಹಸುಗೂಸುಗಳನ್ನು ಕೂರಿಸಿ ಎಳೆದೊಯ್ಯುವ ಸಾಧನ) ಸಾಲಾಗಿ ನಿಲ್ಲಿಸಲಾಗಿತ್ತು. ವಿಶ್ವಸಂಸ್ಥೆಯು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ರಷ್ಯಾ ಉಕ್ರೇನ್‌ ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.

ಉಕ್ರೇನಿಯನ್ ನಗರದ ಎಲ್ವಿವ್‌ನ ಕೋಬಲ್ಡ್ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಯುದ್ಧದಲ್ಲಿ ಮೃತಪಟ್ಟವರಿಗಾಗಿ ಶೋಕಿಸಲು ಮತ್ತು ರಷ್ಯಾದ ಆಕ್ರಮಣದಿಂದ ದೇಶದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಲು ಮಕ್ಕಳನ್ನು ಕರೆದೊಯ್ಯುವ ನೂರಾರು ಖಾಲಿ ತಳ್ಳುಗಾಡಿಗಳನ್ನು ಸಾಲಾಗಿರಿಸಲಾಗಿತ್ತು. ಎಲ್ವಿವ್ ಸಿಟಿ ಹಾಲ್‌ನಲ್ಲಿ 109 ಸ್ಟ್ರಾಲರ್ಸ್ (strollers) ಅಥವಾ ತಳ್ಳುಗಾಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿತ್ತು. ಯುದ್ಧದ ಪ್ರಾರಂಭವಾದಾಗಿನಿಂದ ಇದುವರೆಗೆ ಕೊಲ್ಲಲ್ಪಟ್ಟ ಪ್ರತಿ ಮಗುವನ್ನು ಪ್ರತಿನಿಧಿಸಿ ಈ ಪ್ರತಿಯೊಬ್ಬರಿಗೂ ಒಂದು ತಳ್ಳುಗಾಡಿಯನ್ನು ಇರಿಸಲಾಗಿತ್ತು ಎಂದು ಉಕ್ರೇನಿಯನ್ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 

ಎಲ್ವಿವ್‌ನ (Lviv) ಸೆಂಟ್ರಲ್ ಸ್ಕ್ವೇರ್‌ನಿಂದ (Central Square) ಇಂತಹ ವಿವಿಧ ಹೃದಯ ವಿದ್ರಾವಕ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ಸುತ್ತು ಹೊಡೆಯುತ್ತಿವೆ. ಅಲ್ಲಿ ಸ್ಥಳೀಯರು ಯುದ್ಧದಲ್ಲಿ ಕಳೆದುಕೊಂಡವರನ್ನು ನೆನೆದು ದುಃಖಿಸುತ್ತಿರುವುದನ್ನು ಈ ದೃಶ್ಯಗಳಲ್ಲಿ ಕಾಣಬಹುದು.

ಯುದ್ಧದಿಂದ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪಶ್ಚಿಮ ಉಕ್ರೇನ್‌ನಲ್ಲಿರುವ ಎಲ್ವಿವ್ ನಲ್ಲಿ ನೂರಾರು ಯುದ್ಧ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. 'ನಿಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ಮತ್ತು ಈ ರೀತಿಯ ಸ್ಟ್ರಾಲರ್‌ಗಳಲ್ಲಿ ಕುಳಿತಿರುವಾಗ ಅವರನ್ನು ನೆನಪಿಸಿಕೊಳ್ಳಿ' ಎಂದು ಉಕ್ರೇನಿಯನ್ ಮೂಲದ ಕೆನಡಾದಪ್ರಜೆ ಜುರಾವ್ಕಾ ನಟಾಲಿಯಾ ಟೊಂಕೊವಿಟ್ (Zhuravka Natalia Tonkovyt)ಅವರು ಟ್ವಿಟ್ಟರ್‌ನಲ್ಲಿ ಬರೆದಿರುವುದನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಅವರು ಈ ಸಮಯದಲ್ಲಿ ಅಲ್ಲಿ ಹಾದು ಹೋಗುತ್ತಿದ್ದರು.

ಯುದ್ಧ ನಿಲ್ಲದಿದ್ದರೆ ಪುಟಿನ್‌ ಅಣ್ವಸ್ತ್ರ ಬೆದರಿಕೆ ಸಾಧ್ಯತೆ: ಗುಪ್ತಚರ ಸಂಸ್ಥೆ ವರದಿ

ಮಕ್ಕಳು ಮೃತರಾಗಿರುವ  ಕಾರಣ ಈ ಸ್ಟ್ರೋಲರ್‌ಗಳು ಖಾಲಿಯಾಗಿವೆ. ಇದನ್ನು ನಿಮ್ಮ ಸ್ವಂತ ಮಕ್ಕಳೊಂದಿಗೆ ಹೋಲಿಕೆ ಮಾಡಿ, ನಿಮ್ಮ ಸ್ವಂತ ಮಕ್ಕಳ ಬಗೆಗಿನ ನಿಮ್ಮ ಭಾವನೆಗಳನ್ನು ನೆನಪಿಸಿಕೊಳ್ಳಿ. ನಾನು ಯಾವುದೇ ಖಾಲಿ ಇರುವ ಸ್ಟ್ರೋಲರ್‌ನ್ನು ನೋಡಲು ಬಯಸುವುದಿಲ್ಲ ಎಂದು ಅವರು ಬರೆದಿದ್ದಾರೆ.

ಉಕ್ರೇನ್‌ನಲ್ಲಿ(Ukraine) ತನ್ನ ಕ್ರಮವು ಒಂದು ವಿಶೇಷ ಮಿಲಿಟರಿ ಕಾರ್ಯಾಚರಣೆಯಾಗಿದೆ ಮತ್ತು ಅದು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ರಷ್ಯಾ (Russia) ಹೇಳಿದೆ. ಆದಾಗ್ಯೂ, ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಇದಲ್ಲದೆ, ಉಕ್ರೇನ್‌ನಲ್ಲಿ ಸುಮಾರು 6.5 ಮಿಲಿಯನ್ ಜನರು ಯುದ್ಧದಿಂದಾಗಿ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

Russia Ukraine War: ರಷ್ಯಾಕ್ಕೆ ದೊಡ್ಡ ಇರುಸುಮುರುಸು... ಪೋಲೆಂಡ್‌ ಗಡಿಯಿಂದ ದಾಳಿ

Latest Videos
Follow Us:
Download App:
  • android
  • ios