ಉಕ್ರೇನ್ ದೇಶದ ನಾಲ್ಕು ರಾಜ್ಯ ರಷ್ಯಾಕ್ಕೆ ಸೇರ್ಪಡೆ, ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್!
ವಿಶ್ವದ ಪ್ರಬಲ ರಾಷ್ಟ್ರಗಳ ವಿರೋಧಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಉಕ್ರೇನ್ ದೇಶದ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದಾರೆ. ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ಅಧಿಕೃತವಾಗಿ ರಷ್ಯಾ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಕ್ರೆಮ್ಲಿನ್ (ಸೆ. 30): ರಷ್ಯಾ ಶುಕ್ರವಾರ ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಜಿಯಾ ಆಗಿವೆ. ಕ್ರೆಮ್ಲಿನ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈ ನಾಲ್ಕು ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಪುಟಿನ್ ಭಾಷಣವನ್ನೂ ಮಾಡಿದರು. ಇದು ರಷ್ಯಾದ ಕೋಟ್ಯಂತರ ಜನರ ಕನಸಾಗಿತ್ತು. ಈ ನಾಲ್ಕು ಭಾಗಗಳಲ್ಲಿ ವಾಸಿಸುವ ಜನರ ಇಚ್ಛೆ ಮತ್ತು ಹಕ್ಕು ಕೂಡ ಆಗಿತ್ತು. ಈ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆ ನಡೆಸಿದ ನಂತರ ರಷ್ಯಾ ಅವರನ್ನು ತನ್ನ ಗಡಿಯಲ್ಲಿ ಸೇರಿಸಿದೆ ಎಂದಿದ್ದಾರೆ. ಇನ್ನು ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ರಷ್ಯಾ ತನ್ನ ಭೂಪ್ರದೇಶಕ್ಕೆ ಸೇರಿಸಿಕೊಂಡಿರುವ ಬಗ್ಗೆ ಯುರೋಪಿಯನ್ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಯುರೋಪಿಯನ್ ನಾಯಕರು ಎಂದಿಗೂ ಈ ಪ್ರದೇಶಗಳು ರಷ್ಯಾಕ್ಕೆ ಸೇರಿದ್ದು ಎಂದು ಮಾನ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. 27 ಯುರೋಪಿಯನ್ ದೇಶಗಳು ಒಳಗೊಂಡ ಯುರೋಪಿಯನ್ ಕೌನ್ಸಿಲ್ ಈ ಹೇಳಿಕೆಯನ್ನು ತಿಳಿಸಿದೆ. ರಷ್ಯಾ ಇಂಥ ಉದ್ಧಟತನ ಮಾಡುವುದರಿಂದ ಜಾಗತಿಕ ಭದ್ರತೆಯನ್ನು ಅಪಾಯಕ್ಕೆ ಒಡ್ಡುತ್ತಿದೆ ಎಂದಿದ್ದಾರೆ.
ವಿಶೇಷ ದಿನದಂತೆ ಆಚರಣೆ: ಉಕ್ರೇನ್‌ನ ನಾಲ್ಕು ಭಾಗಗಳನ್ನು ತನ್ನ ಗಡಿಯಲ್ಲಿ ಸೇರಿಸುವ ಮೂಲಕ, ಈಗ ಅವರ ಮೇಲಿನ ದಾಳಿಯನ್ನು ರಷ್ಯಾದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ರಷ್ಯಾ ತೋರಿಸಲು ಬಯಸಿದೆ. ಈ ಸಂದರ್ಭವನ್ನು ರಷ್ಯಾದಲ್ಲಿ ವಿಶೇಷ ದಿನದಂತೆ ಆಚರಿಸಲಾಗುತ್ತದೆ. ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ಪುಟಿನ್ (Vladimir Putin ) ಅವರ ಭಾಷಣವನ್ನು ಆಲಿಸಲು ಜಾಹೀರಾತು ಫಲಕಗಳು ಮತ್ತು ದೊಡ್ಡ ವೀಡಿಯೊ ಪರದೆಯನ್ನು ಹಾಕಲಾಯಿತು. ಈ ಅವಧಿಯಲ್ಲಿ ಹಲವು ರಸ್ತೆಗಳು ಮುಚ್ಚಲ್ಪಟ್ಟಿದ್ದವು. ಒಪ್ಪಂದಕ್ಕೆ ಸಹಿ ಹಾಕಿದ ನಂತರ ವಿಶೇಷ ಪ್ರದರ್ಶನವನ್ನು ಮಾಡಲಾಯಿತು.
ಪುಟಿನ್ ಭಾಷಣದ ಪ್ರಮುಖ ಅಂಶಗಳು:
- ಉಕ್ರೇನ್ 2014 ರ ಒಪ್ಪಂದದ ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳುತ್ತದೆ, ಯುದ್ಧವನ್ನು ನಿಲ್ಲಿಸಿ ಮತ್ತು ಮಾತುಕತೆಗಳನ್ನು ಪ್ರಾರಂಭಿಸಬೇಕು.
- ಉಕ್ರೇನ್‌ನ ಯಾವುದೇ ಭಾಗವು ರಷ್ಯಾಕ್ಕೆ ಸೇರಲು ಬಯಸಿದರೆ, ನಾವು ಅದಕ್ಕೆ ದ್ರೋಹ ಮಾಡುವುದಿಲ್ಲ.
- ಪಾಶ್ಚಿಮಾತ್ಯ ದೇಶಗಳು ಏನೇ ಹೇಳಬಹುದು, ಆದರೆ ಈ ನಾಲ್ಕು ರಾಜ್ಯಗಳ ಜನರು ರಷ್ಯಾವನ್ನು ಸೇರಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಜಗತ್ತು ಮತ್ತು ಉಕ್ರೇನ್, ಇದನ್ನು ಗೌರವಿಸಬೇಕು, ಏಕೆಂದರೆ ಅದು ಇಲ್ಲದೆ ಶಾಂತಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ.
- ರಷ್ಯಾ ತನ್ನ ಗಡಿಗಳನ್ನು ಮತ್ತು ತನ್ನ ಜನರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ.
'ಯೋಗ್ಯ ಅಭ್ಯರ್ಥಿ': ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನಕ್ಕೆ ಭಾರತವನ್ನು ಬೆಂಬಲಿಸಿದ ರಷ್ಯಾ!
- ಅಮೆರಿಕ ಮತ್ತು ಪಶ್ಚಿಮ ದೇಶಗಳು ಶತ್ರುಗಳು. ಅವರು ರಷ್ಯಾವನ್ನು ನಾಶಮಾಡಲು ಮತ್ತು ಅದನ್ನು ಗುಲಾಮರನ್ನಾಗಿ ಮಾಡಲು ಬಯಸುತ್ತಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದ ವಿಶ್ವದ ಏಕೈಕ ದೇಶ ಅಮೆರಿಕ. ಡೊನೆಟ್ಸ್ಕ್ (Donetsk), ಲುಹಾನ್ಸ್ಕ್ (Luhansk), ಜಪೋರಿಜಿಯಾ (Zaporizhia) ಮತ್ತು ಖೆರ್ಸನ್ (Kherson) ಜನರು ಈಗ ಶಾಶ್ವತವಾಗಿ ರಷ್ಯಾದ ನಾಗರಿಕರಾಗಿದ್ದಾರೆ.
Russia ಶಾಲೆಯಲ್ಲಿ ಮನಬಂದಂತೆ ಗುಂಡಿನ ದಾಳಿ: ಮಕ್ಕಳು ಸೇರಿ 10 ಬಲಿ; 20 ಕ್ಕೂ ಹೆಚ್ಚು ಜನರಿಗೆ ಗಾಯ
ಹಿಂದೆಯೂ ಈ ರೀತಿ ಮಾಡಿದ್ದ ರಷ್ಯಾ: 2008 ರಲ್ಲಿ, ಜಾರ್ಜಿಯಾದೊಂದಿಗೆ (Gerogia) ಸಣ್ಣ ಯುದ್ಧದ ನಂತರ, ರಷ್ಯಾ ಎರಡು ಪ್ರತ್ಯೇಕ ಜಾರ್ಜಿಯಾ ಪ್ರದೇಶಗಳಾದ ಅಬ್ಖಾಜಿಯಾ ಮತ್ತು ದಕ್ಷಿಣ ಒಸ್ಸೆಟಿಯಾವನ್ನು ಸ್ವತಂತ್ರ ರಾಜ್ಯಗಳಾಗಿ ಗುರುತಿಸಿತು. ರಷ್ಯಾ (Ukraine) ಕೂಡ ಈ ಎರಡು ಪ್ರದೇಶಗಳಿಗೆ ಸಾಕಷ್ಟು ಹಣವನ್ನು ನೀಡಿತ್ತು. ಇದರ ನಂತರ, ಇಲ್ಲಿನ ಜನರಿಗೆ ರಷ್ಯಾದ ಪೌರತ್ವವನ್ನು ನೀಡಲಾಯಿತು ಮತ್ತು ಯುವಕರನ್ನು ರಷ್ಯಾದ ಸೈನ್ಯಕ್ಕೆ ಸೇರಿಸಲಾಯಿತು. 2014 ರಲ್ಲಿ, ಜನಾಭಿಪ್ರಾಯ ಸಂಗ್ರಹಣೆಯ ನಂತರ ಕ್ರೈಮಿಯಾವನ್ನು ರಷ್ಯಾ (Russia) ಸ್ವಾಧೀನಪಡಿಸಿಕೊಂಡಿತು. ಆ ವೇಳೆಯೂ ಪುಟಿನ್ ಭಾಷಣ ಮಾಡಿದ್ದರು.