ನವದೆಹಲಿ(ಏ. 15)  ಭಾರತದೊಂದಿಗೆ ರಷ್ಯಾ ಹಿಂದಿನ ಕಾಲದಿಂದಲೂ ಸ್ನೇಹ ಸಂಬಂಧ ಬೆಳೆಸಿ ಉಳಿಸಿಕೊಂಡೇ ಬಂದಿದೆ.  ಪ್ರಧಾನಿ ನರೇಂದ್ರ ಮೋದಿ ಅವರ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ರಷ್ಯಾ ರಕ್ಷಣಾ ಇಲಾಖೆ 2  ಮಿಲಿಯನ್ ಡಾಲರ್ ದೇಣಿಗೆ ನೀಡಿದೆ.

ಪ್ರಧಾನಿ ಮೋದಿ ಹೇಳಿದ್ದ ಪಿಎಂ ಕೇರ್ಸ್ ವಿಭಾಗಕ್ಕೆ ದೇಣಿಗೆ ಸಂದಾಯವಾಗಿದೆ.  ರಷ್ಯಾದ ರಕ್ಷಣಾ ವಿಭಾಗದ  Rosoboronexport ಈ ದೇಣಿಗೆಯನ್ನು ನೀಡಿದೆ. Rosoboronexport ಮಿಲಿಟರಿ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೆ ಹೆಸರುವಾಸಿ. ಈಗ ಕಂಪನಿ ಭಾರತದ ನೆರವಿಗೆ ಈ ರೀತಿಯಲ್ಲಿ ಬಂದಿದೆ. 

ಕೊರೋನಾ ಹೋರಾಟದ ಸಂದರ್ಭದಲ್ಲಿ ಮೆಡಿಕಲ್ ಉತ್ಪನ್ನಗಳ ಗತಯಾರಿಕೆ ಮತ್ತು ಔಷಧ ಉಪಚಾರಕ್ಕೆ ಈ ಹಣ ಬಳಕೆ ಮಾಡಿಕೊಳ್ಳಲಾಗುತ್ತದೆ.

ಎಸ್-400 ಕ್ಷಿಪಣಿಗಳನ್ನು ಇದೇ ವಿಭಾಗದಿಂದ 2018ರಲ್ಲಿ ಭಾರತ ಖರೀದಿ ಮಾಡಿತ್ತು.  15000 ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ಇದ್ದರೆ, 1500 ರಷ್ಯಾ ಪ್ರವಾಸಿಗರು ಭಾರತದಲ್ಲಿ ಇದ್ದಾರೆ ಎಂಬ ಮಾಹಿತಿಯೂ ಇದೆ.  ಒಟ್ಟಿನಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ನೆರವಿಗೆ ರಷ್ಯಾ ಧಾವಿಸಿದೆ.