ಶಾಲೆ, ಆಸ್ಪತ್ರೆಗಳ ಮೇಲೆ ರಷ್ಯಾ ದಾಳಿ, 18 ಸಾವು20 ಲಕ್ಷ ಉಕ್ರೇನಿಯರು ನೆರೆ ದೇಶಕ್ಕೆ ಪಲಾಯನಕೀವ್ ವಶಕ್ಕೆ ರಷ್ಯಾದ ಸಂಪೂರ್ಣ ಸಿದ್ಧತೆ
ಕೀವ್ (ಮಾ. 9): ಸಂಧಾನ ಮಾತುಕತೆ (Peace talks), ಕದನ ವಿರಾಮದ (ceasefire ) ನಡುವೆಯೂ ಉಕ್ರೇನ್ (Ukraine) ಮೇಲಿನ ದಾಳಿಯನ್ನು ರಷ್ಯಾ (Russia) ಮುಂದುವರೆಸಿದೆ. ಹೀಗಾಗಿ ಸತತ 13ನೇ ದಿನವಾದ ಮಂಗಳವಾರವೂ ಉಕ್ರೇನ್‌ನಲ್ಲಿ ಭಾರೀ ಸಾವು ನೋವು ಉಂಟಾಗಿದೆ. ಸುಮಿಯ (sumy)ಜನವಸತಿ ಪ್ರದೇಶ, ಶಾಲೆಗಳು, ಆಸ್ಪತ್ರೆ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 18 ಜನರು ಸಾವನ್ನಪ್ಪಿದ್ದರೆ, ಮಕಾರಿವ್‌ನ ಕೈಗಾರಿಕಾ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ರಷ್ಯಾ ನಡೆಸಿದ ಶೆಲ್ (Shell) ದಾಳಿಯಲ್ಲಿ ಖಾರ್ಕಿವ್‌ನಲ್ಲಿರುವ (Kharkive)ಪರಮಾಣು ಸಂಶೋಧನಾ ಘಟಕಕ್ಕೆ (nuclear research centre) ಹಾನಿಯಾಗಿದೆ ಎಂದು ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (international atomic energy agency) ಕಳವಳ ವ್ಯಕ್ತಪಡಿಸಿದೆ.
ಈ ನಡುವೆ ರಾಜಧಾನಿ ಕೀವ್ ವಶಕ್ಕೆ ರಷ್ಯಾ ಸೇನೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ನಗರದ ಗಡಿಯಲ್ಲಿ ದೊಡ್ಡ ಪ್ರಮಾಣದ ಸೇನಾ ದಂಡನ್ನು ನಿಯೋಜಿಸಿದೆ. ಯುದ್ಧಕ್ಕೆ ಬಂದಿದ್ದ 1.5 ಲಕ್ಷ ಯೋಧರು ಈಗಾಗಲೇ ವಿವಿಧ ಪ್ರದೇಶಗಳ ಮೂಲಕ ಉಕ್ರೇನ್ ಗಡಿಯೊಳಗೆ ನುಗ್ಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ಇತರೆ ಹಲವು ಕರಾವಳಿ ನಗರಗಳನ್ನೂ ರಷ್ಯಾ ಸೇನೆ (Russia army) ಸುತ್ತುವರೆದಿದ್ದು, ಕದನ ವಿರಾಮದ ಅವಧಿ ಮುಗಿಯುತ್ತಲೇ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಖಾರ್ಕೀವ್‌ನಲ್ಲಿ ನಡೆದ ಯುದ್ಧದಲ್ಲಿ ರಷ್ಯಾದ ಸೇನಾ ಜನರಲ್ ವಿಟಲಿ ಗ್ಯಾರಿಸಿಮೋವ್ (vitaly gerasimov) ಉಕ್ರೇನಿನ ಸೇನೆ ದಾಳಿಗೆ ಬಲಿಯಾಗಿದ್ದಾನೆ ಎಂದು ಉಕ್ರೇನಿನ ಗುಪ್ತಚರ ಮೂಲಗಳು ತಿಳಿಸಿವೆ.
ಜನರ ಸಂಕಷ್ಟ: ಈ ನಡುವೆ ದಾಳಿಯ ಭೀತಿಯಿಂದ 2 ಲಕ್ಷಕ್ಕೂ ಹೆಚ್ಚಿನ ಉಕ್ರೇನಿಯನ್‌ರು ತಮ್ಮ ಮನೆಯನ್ನು ಬಿಟ್ಟು, ಬಂಕರ್, ಆಸ್ಪತ್ರೆ, ಚಚ್‌ರ್‍ಗಳಲ್ಲಿ ಬಂದು ನೆಲೆಸಿದ್ದಾರೆ. ಜನರಿಗೆ ಆಹಾರ, ನೀರು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸುವುದೂ ಅಸಾಧ್ಯವಾಗುತ್ತಿದ್ದು ಜನರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆಸ್ಪತ್ರೆಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ಔಷಧಿಗಳೂ ಲಭ್ಯವಿಲ್ಲದ ಕಾರಣ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದ್ದು, ನೋವು ನಿವಾರಕ ಮಾತ್ರಗಳ ಲಭ್ಯತೆಯಿಲ್ಲದ ಕಾರಣ ಅವುಗಳನ್ನು ನೀಡದೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ತೈಲ ಡಿಪೋ, ವಿದ್ಯುತ್ ಸ್ಥಾವರಗಳನ್ನೂ ರಷ್ಯಾ ಸೇನೆ ಧ್ವಂಸ ಮಾಡುತ್ತಿರುವ ಕಾರಣ ಹಲವು ನಗರಗಳಲ್ಲಿ ತೈಲ ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
Russia Ukraine War ಎರಡು ಪ್ರಮುಖ ಷರತ್ತಿಗೆ ಉಕ್ರೇನ್ ಒಪ್ಪಿಗೆ, ಶಾಂತವಾಗುತ್ತಾ ರಷ್ಯಾ?
ರಷ್ಯಾದ 500 ಕೇಜಿ ಬಾಂಬ್ ದಾಳಿ: ಮಕ್ಕಳು ಸೇರಿ 18 ಬಲಿ
ಸುಮಿ: ಸುಮಿಯಲ್ಲಿರುವ ವಸತಿ ಕಟ್ಟಡಗಳ ಮೇಲೆ ರಷ್ಯಾ ಸೋಮವಾರ 500 ಕೇಜಿ ತೂಕದ ಭಾರೀ ವಿನಾಶಕಾರಿ ಬಾಂಬ್‌ನಿಂದ ದಾಳಿ ನಡೆಸಿದ್ದು, ಈ ಘಟನೆಯಲ್ಲಿ 2 ಮಕ್ಕಳು ಸೇರಿದಂತೆ 18 ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನಿನ ಸಚಿವಾಲಯ ತಿಳಿಸಿದೆ.
Russian Oil Imports : ರಷ್ಯಾ ದೇಶದಿಂದ ತೈಲ ಆಮದಿಗೆ ಅಮೆರಿಕ ನಿಷೇಧ!
ರಷ್ಯಾದ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ರಷ್ಯಾ ನಡೆಸಿದ ಬಾಂಬ್ ದಾಳಿಯ ಚಿತ್ರವನ್ನು ಹಂಚಿಕೊಂಡಿದ್ದು, ‘ರಷ್ಯಾ 500 ಕೇಜಿ ಬಾಂಬ್ ವಸತಿ ಕಟ್ಟಡಗಳ ಮೇಲೆ ಎಸೆದಿದ್ದು ಬಾಂಬ್ ಸ್ಫೋಟಗೊಂಡಿಲ್ಲ. ಆದರೆ ಈ ಘಟನೆಯಲ್ಲಿ ಅಮಾಯಕ ಮಕ್ಕಳು ಸೇರಿದಂತೆ ನಾಗರಿಕರು ಸಾವನ್ನಪ್ಪಿದ್ದಾರೆ. ರಷ್ಯಾದ ಅನಾಗರಿಕರಿಂದ ನಮ್ಮವರನ್ನು ರಕ್ಷಿಸಲು ವಾಯು ಸೀಮೆಯನ್ನು ನಿರ್ಬಂಧಿಸಿ ಅಥವಾ ಹೋರಾಡಲು ನಮಗೆ ಯುದ್ಧ ವಿಮಾನಗಳನ್ನು ಕಳುಹಿಸಿ. ಏನನ್ನಾದರೂ ಮಾಡಿ ಎಂದು ಕುಲೇಬಾ ವಿನಂತಿಸಿಕೊಂಡಿದ್ದಾರೆ.
