* ಯುದ್ಧ ಬಗ್ಗೆ ಸುಳ್ಳು ಸುದ್ದಿ ವರದಿ ಮಾಡಿದರೆ 15 ವರ್ಷ ಜೈಲು* ರಷ್ಯಾದಲ್ಲಿ ಫೇಸ್‌ಬುಕ್‌, ಟ್ವೀಟರ್‌ ಬ್ಲಾಕ್‌* ತರಾತುರಿಯಲ್ಲಿ ಮಸೂದೆ ಅಂಗೀಕಾರ, ಪುಟಿನ್‌ ಅಂಕಿತ* ಹಲವು ಮಾಧ್ಯಮ ಸಂಸ್ಥೆಗಳಿಂದ ರಷ್ಯಾಗೆ ವಿದಾಯ

ಡಸ್ಸೆಲ್‌ಡಾಫ್‌ರ್‍(ಮಾ.06): ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ‘ಸುಳ್ಳು ಸುದ್ದಿ’ ಪ್ರಸಾರವಾಗುವುದನ್ನು ತಡೆಯಲು ಕಾನೂನು ಮೊರೆ ಹೋಗಿರುವ ರಷ್ಯಾ, ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ವಿರುದ್ಧ 15 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಿದೆ. ಇದೇ ವೇಳೆ, ಜಗದ್ವಿಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವೀಟರ್‌ಗಳನ್ನೂ ಬ್ಲಾಕ್‌ ಮಾಡಿದೆ.

ಈಗಾಗಲೇ ಬಿಬಿಸಿ, ಅಮೆರಿಕ ಸರ್ಕಾರಿ ಅನುದಾನಿತ ವಾಯ್‌್ಸ ಆಫ್‌ ಅಮೆರಿಕ, ರೇಡಿಯೋ ಫ್ರೀ ಯುರೋಪ್‌/ರೇಡಿಯೋ ಲಿಬರ್ಟಿ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳನ್ನು ರಷ್ಯಾ ನಿಷೇಧಿಸಿತ್ತು. ಈಗ ಅದಕ್ಕೆ ಕಾನೂನಿನ ಬಲವನ್ನು ನೀಡಿ, ಶಿಕ್ಷೆ ವಿಧಿಸಲು ಹೊರಟಿದೆ.

ಹಲವು ವಿದೇಶಿ ಮಾಧ್ಯಮ ಸಂಸ್ಥೆಗಳು ರಷ್ಯನ್‌ ಭಾಷೆಯಲ್ಲೂ ಯುದ್ಧಕ್ಕೆ ಸಂಬಂಧಿಸಿದ ವರದಿಯನ್ನು ಮಾಡುತ್ತಿವೆ. ಹೀಗಾಗಿ ಮಾಧ್ಯಮಗಳನ್ನು ನಿಯಂತ್ರಿಸಲು ರಷ್ಯಾ ಮಸೂದೆ ರೂಪಿಸಿದೆ. ಸಂಸತ್ತಿನ ಉಭಯ ಸದನಗಳಲ್ಲೂ ಈ ಮಸೂದೆ ಫಟಾಫಟ್‌ ಅಂಗೀಕಾರವಾಗಿದ್ದು, ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅಂಕಿತ ಕೂಡ ಬಿದ್ದಿದೆ.

ಇದರ ಬೆನ್ನಲ್ಲೇ ರಷ್ಯಾದಿಂದ ಸುದ್ದಿ ಪ್ರಸಾರ ನಿಲ್ಲಿಸುವುದಾಗಿ ಸಿಎನ್‌ಎನ್‌ ಹೇಳಿದೆ. ತಾತ್ಕಾಲಿಕವಾಗಿ ನಮ್ಮ ಪತ್ರಕರ್ತರು ರಷ್ಯಾದಲ್ಲಿ ಕಾರ್ಯ ಸ್ಥಗಿತಗೊಳಿಸಲಿದ್ದಾರೆ ಎಂದು ಬಿಬಿಸಿ ತಿಳಿಸಿದೆ. ಹಲವು ಮಾಧ್ಯಮ ಸಂಸ್ಥೆಗಳು ಕಾರ್ಯ ನಿಲ್ಲಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಹೇಳಿವೆ.

ಉಕ್ರೇನ್‌ನಲ್ಲಿ ರಷ್ಯಾಗೆ ಹಿನ್ನಡೆಯಾಗಿದೆ ಅಥವಾ ನಾಗರಿಕರ ಹತ್ಯೆಯಾಗಿದೆ ಎಂಬ ವರದಿಗಳನ್ನು ರಷ್ಯಾ, ‘ಸುಳ್ಳು ಸುದ್ದಿ’ ಎಂದು ನಿರಾಕರಿಸುತ್ತಲೇ ಬಂದಿದೆ. ಉಕ್ರೇನ್‌ ಮೇಲಿನ ದಾಳಿಯನ್ನು ರಷ್ಯಾದ ಸರ್ಕಾರಿ ಮಾಧ್ಯಮಗಳು ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎನ್ನುತ್ತಿವೆಯೇ ಹೊರತು ‘ಯುದ್ಧ ಅಥವಾ ಅತಿಕ್ರಮಣ’ ಎಂದು ಕರೆಯುತ್ತಿಲ್ಲ.

ಉಕ್ರೇನ್‌ ಸುದ್ದಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ರೇಡಿಯೋ ಕೇಂದ್ರ ಬಂದ್‌

ಉಕ್ರೇನಿನ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ವಿಮರ್ಶಾತ್ಮಕವಾಗಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ಪÜ್ರಗತಿಪರ ರೇಡಿಯೊ ಕೇಂದ್ರ ಎಖೋ ಮೊಸ್ಕವಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ರೇಡಿಯೋ ಕೇಂದ್ರದ ಮುಖ್ಯಸ್ಥ ಗುರುವಾರ ಆರೋಪಿಸಿದ್ದಾರೆ.

ರಷ್ಯಾ ಸರ್ಕಾರ ಉಕ್ರೇನಿನ ಮೇಲಿನ ದಾಳಿಯನ್ನು ‘ಕೇವಲ ಸೇನಾ ಕಾರ್ಯಾಚರಣೆ’ ಎಂದು ಕರೆದಿದ್ದು, ರಷ್ಯಾದ ಭದ್ರತೆಗೆ ಅಪಾಯಕಾರಿಯೆನಿಸುವ ಉಕ್ರೇನಿನ ಸೇನಾನೆಲೆಗಳನ್ನು ಮಾತ್ರ ನಾಶಪಡಿಸುವ ಉದ್ದೇಶದಿಂದ ಇದನ್ನು ನಡೆಸಲಾಗಿದೆ ಎಂದು ಹೇಳಿಕೆ ನೀಡಿತ್ತು. ಮಾಧ್ಯಮಗಳು ಇದೇ ನಿಲುವಿನೊಂದಿಗೆ ಸುದ್ದಿಯನ್ನು ಪ್ರಸಾರ ಮಾಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿತ್ತು. ಇದನ್ನು ಉಲ್ಲಂಘಿಸಿ ವಿಮರ್ಶಾತ್ಮಕವಾಗಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ಪ್ರಾಸಿಕ್ಯೂಟರ್‌ ಜನರಲ್‌ ಆದೇಶದಂತೆ ಎಖೋ ಮಾಸ್ಕ್‌ವಿ ರೇಡಿಯೋ ಕೇಂದ್ರ ಹಾಗೂ ಡಿಜಿಟಲ್‌ ಸುದ್ದಿ ಮಾಧ್ಯಮದ ಮೇಲೆ ಮಾಚ್‌ರ್‍ 3 ರಿಂದ ನಿರ್ಬಂಧ ಹೇರಲಾಗಿದೆ.

ರಷ್ಯಾದ ಸೇನಾ ಕಾರ್ಯಾಚರಣೆ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮಾಧ್ಯಮ ಸಂಪಾದಕರಿಗೆ 15 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನನ್ನು ರಷ್ಯಾ ಶೀಘ್ರವೇ ಹೊರಡಿಸಲಿದೆ ಎನ್ನಲಾಗಿದೆ.