ಯುಕೆ ಪ್ರಧಾನಿ ರಿಷಿ ಸುನಕ್, ಅಕ್ಷತಾ ನಿವಾಸದಲ್ಲಿ ಸಡಗರದ ದೀಪಾವಳಿ: ಹಬ್ಬಕ್ಕೆ ಶುಭ ಕೋರಿದ ಭಾರತದ ಅಳಿಯ
ಬೆಂಗಳೂರಿನ ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿ ಅವರ ಅಳಿಯ - ಮಗಳು ತಮ್ಮ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿ ಆಚರಿಸಿದ್ದಾರೆ.
ಲಂಡನ್ (ನವೆಂಬರ್ 9, 2023): ದೀಪಾವಳಿ ಹಬ್ಬ ಇನ್ನೇನು ಬಂದೇಬಿಡ್ತು. ಹಬ್ಬದ ಸಂಭ್ರಮ, ಸಡಗರ ಈಗಾಗಲೇ ಆರಂಭವಾಗಿದೆ. ಭಾರತದಲ್ಲಿ ಮಾತ್ರವಲ್ಲ, ದೂರದ ಇಂಗ್ಲೆಂಡ್‌ನಲ್ಲೂ ದೀಪಾವಳಿ ಆಚರಿಸಲಾಗಿದೆ. ಅದೂ, ಅಲ್ಲಿನ ಪ್ರಧಾನಿಗಳ ನಿವಾಸ ಡೌನಿಂಗ್ ಸ್ಟ್ರೀಟ್‌ನಲ್ಲಿ.
ಬೆಂಗಳೂರಿನ ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿ ಅವರ ಅಳಿಯ - ಮಗಳು ತಮ್ಮ ಅಧಿಕೃತ ನಿವಾಸದಲ್ಲಿ ದೀಪಾವಳಿ ಆಚರಿಸಿದ್ದಾರೆ. ದೀಪಾವಳಿಗೆ ಮುಂಚಿತವಾಗಿ ಡೌನಿಂಗ್ ಸ್ಟ್ರೀಟ್ ನಿವಾಸಕ್ಕೆ ಹಿಂದೂ ಸಮುದಾಯದ ಅತಿಥಿಗಳನ್ನು ಯುಕೆ ಪ್ರಧಾನಿ ರಿಷಿ ಸುನಕ್ ಸ್ವಾಗತಿಸಿದರು. ಇಂದು ರಾತ್ರಿ ಪ್ರಧಾನ ಮಂತ್ರಿ @RishiSunak ಅವರು #ದೀಪಾವಳಿಗೆ ಮುಂಚಿತವಾಗಿ ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರು - ಇದು ಕತ್ತಲೆಯ ಮೇಲೆ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿಯ 'X' ನ ಅಧಿಕೃತ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನು ಓದಿ: ಜೋ ಬೈಡೆನ್ ಭೇಟಿ ಬೆನ್ನಲ್ಲೇ ಇಸ್ರೇಲ್‌ಗೆ ಬಂದಿಳಿದ ರಿಷಿ ಸುನಕ್: ಬೆಂಜಮಿನ್ ನೆತನ್ಯಾಹು ಭೇಟಿಯಾಗಲಿರೋ ಭಾರತದ ಅಳಿಯ
ಡೌನಿಂಗ್ ಸ್ಟ್ರೀಟ್ ಹಂಚಿಕೊಂಡ ದೃಶ್ಯಗಳಲ್ಲಿ ಯುಕೆ ಪಿಎಂ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ದೀಪ ಬೆಳಗಿಸುತ್ತಿರುವುದನ್ನು ಸಹ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗಿಯಾಗಿದ್ದರು.
ಇನ್ನು, ಯುಕೆ ಮತ್ತು ಪ್ರಪಂಚದಾದ್ಯಂತ ಎಲ್ಲರಿಗೂ ಶುಭ ದೀಪಾವಳಿ ಎಂದು ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿ ಕಚೇರಿಯ ಪೋಸ್ಟ್ ಹೇಳಿದೆ. ದೀಪಾವಳಿಯು ಹಿಂದೂ ದೀಪಗಳ ಹಬ್ಬವಾಗಿದೆ. ಇದು ಕತ್ತಲೆಯ ಮೇಲೆ ಬೆಳಕಿನ ಆಧ್ಯಾತ್ಮಿಕ ವಿಜಯವನ್ನು ಸಂಕೇತಿಸುತ್ತದೆ ಅಂದರೆ, ಕೆಟ್ಟದ್ದರ ಮೇಲೆ ಒಳ್ಳೆಯದು ಎಂದರ್ಥ.
ಇದನ್ನೂ ಓದಿ: ನಾರಾಯಣ ಮೂರ್ತಿ, ಅಕ್ಷತಾ ಮೂರ್ತಿ ಅವರ 8320 ಕೋಟಿ ಮೌಲ್ಯದ ಸ್ಟಾರ್ಟಪ್ ಕಂಪನಿ ಬಂದ್! ಕಾರಣ ಹೀಗಿದೆ..
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಯುಕೆ ಸಹವರ್ತಿ ರಿಷಿ ಸುನಕ್ ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಚರ್ಚಿಸಿದರು. ಈ ವೇಳೆ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಉತ್ತಮ ಪ್ರದರ್ಶನಕ್ಕಾಗಿ ರಿಷಿ ಸುನಕ್ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು.
UK ಮತ್ತು ಭಾರತದ ನಡುವಿನ ಸ್ನೇಹದ ಕಾರಣ, ಉಭಯ ನಾಯಕರು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಇತ್ತೀಚಿನ ಪ್ರಗತಿಯನ್ನು ಚರ್ಚಿಸಿದರು. ಅವರು ಎರಡೂ ಕಡೆಯವರಿಗೆ ಲಾಭದಾಯಕವಾದ ಮಹತ್ವಾಕಾಂಕ್ಷೆಯ ಒಪ್ಪಂದ ಪಡೆದುಕೊಳ್ಳುವ ಪ್ರಾಮುಖ್ಯತೆಯನ್ನು ಒಪ್ಪಿಕೊಂಡರು ಎಂದು UK ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಪತ್ನಿ ಅಕ್ಷತಾ ಭೇಟಿ: ಭಾರತದ ಸಂಸ್ಕೃತಿಗೆ ಮೆಚ್ಚುಗೆ
ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾತುಕತೆ ನಡೆಸುತ್ತಿದ್ದು, ಮಾತುಕತೆಗಳು 2022 ರಲ್ಲಿ ಪ್ರಾರಂಭವಾಗಿದ್ದವು. ಯುಕೆ - ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) 12 ನೇ ಸುತ್ತಿನ ಮಾತುಕತೆಗಳು ಈ ವರ್ಷದ ಆಗಸ್ಟ್ 8-31 ರಿಂದ ನಡೆದವು.
ಅಲ್ಲದೆ, ಮುಂದಿನ ವರ್ಷ ಜನವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನದ ಭರವಸೆಯನ್ನು ಯುಕೆ ಪ್ರಧಾನಿ ವ್ಯಕ್ತಪಡಿಸಿದರು. ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಕುರಿತು ಉಭಯ ನಾಯಕರು ಚರ್ಚಿಸಿದರು ಹಾಗೂ ಟೀಂ ಇಂಡಿಯಾದ ಪ್ರಬಲ ಪ್ರದರ್ಶನಕ್ಕಾಗಿ ಪ್ರಧಾನಿ ಮೋದಿಯನ್ನು ರಿಷಿ ಸುನಕ್ ಅಭಿನಂದಿಸಿದರು ಮತ್ತು ಜನವರಿಯಲ್ಲಿ ಭಾರತದಲ್ಲಿ ತಮ್ಮ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ಗೆ ಹೆಚ್ಚಿನ ಅದೃಷ್ಟ ಸಿಗುತ್ತದೆ ಎಂದು ಆಶಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.