ನೇಪಾಳದಲ್ಲಿ ಲಾಕ್‌ಡೌನ್‌ ವೇಳೆ ಬೀದೀಲಿ ಅಡ್ಡಾಡಿದ ಖಡ್ಗಮೃಗ| ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಹೋದ ಮೂಕಪ್ರಾಣಿ

ಕಠ್ಮಂಡು(ಏ.08): ಲಾಕ್‌ಡೌನ್‌ನಿಂದಾಗಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬಂದ ನಿದರ್ಶನಗಳನ್ನು ನೋಡಿದ್ದೇವೆ. ಆದರೆ, ನೇಪಾಳದಲ್ಲಿ ಚಿತ್ವಾನ್‌ ನ್ಯಾಷನಲ್‌ ಪಾರ್ಕ್ನಿಂದ ತಪ್ಪಿಸಿಕೊಂಡ ಖಡ್ಗಮೃಗವೊಂದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ್ದು, ಒಬ್ಬ ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಹೋಗಿದೆ.

ನೇಪಾಳದಲ್ಲಿ ಲಾಕ್‌ಡೌನ್‌ ಇದ್ದಿದ್ದರಿಂದ ಖಡ್ಗಮೃಗವನ್ನು ನಿಯಂತ್ರಿಸಲು ಯಾರೂ ಇರಲಿಲ್ಲ. ನಗರವನ್ನು ಒಂದು ಸುತ್ತು ಹಾಕಿದ ಬಳಿಕ ಖಡ್ಗಮೃಗ ತಾನಾಗಿಯೇ ಗೂಡುಸೇರಿಕೊಂಡಿದೆ.

Scroll to load tweet…

ಖಡ್ಗಮೃಗ ಖಾಲಿ ರಸ್ತೆಗಳಲ್ಲಿ ಅಡ್ಡಾಡುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ.

"