ಏಂಜಲೀಸ್‌(ಜು.26): ಕೊರೋನಾ ವೈರಸ್‌ ತಡೆಯಲು ಲಸಿಕೆ ಹಾಗೂ ಔಷಧ ಕಂಡುಹಿಡಿಯಲು ವಿಶ್ವಾದ್ಯಂತ ಅವಿರತ ಯತ್ನಗಳು ಒಂದೆಡೆ ನಡೆದಿವೆ. ಆದರೆ, ಹಾಲಿ ಇರುವ 21 ಔಷಧಗಳಲ್ಲೇ ಕೊರೋನಾ ತಡೆಯುವ ಶಕ್ತಿ ಇದೆ. ಇದು ಪ್ರಯೋಗಾಲಯಗಳಲ್ಲಿ ಸಾಬೀತಾಗಿದೆ ಎಂದು ಭಾರತೀಯ ಮೂಲದವರು ಸೇರಿದಂತೆ ಹಲವಾರು ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೆ, ಈ ಕುರಿತು ಮತ್ತಷ್ಟುವಿಸ್ತೃತ ಸಂಶೋಧನೆ ನಡೆದರೆ ಕೊರೋನಾಗೆ ಶೀಘ್ರದಲ್ಲೇ ತಡೆ ಹಾಕಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಕೊರೋನಾತಂಕ ನಡುವೆ ಸಿಕ್ತು ಬಿಗ್ ಗುಡ್‌ ನ್ಯೂಸ್!

ಅಮೆರಿಕದ ಸ್ಯಾನ್‌ಫೋರ್ಡ್‌ ಮೆಡಿಕಲ್‌ ಡಿಸ್ಕವರಿ ಸಂಸ್ಥೆಯ ಸಂಶೋಧಕರು ಸೇರಿದಂತೆ ವಿಶ್ವದ ಅನೇಕ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಇವರು ಹಲವಾರು ಪ್ರಸಿದ್ಧ ಔಷಧಗಳನ್ನು ತರಿಸಿಕೊಂಡು, ಅವು ಕೊರೋನಾ ತಡೆಯುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರಿಶೀಲಿಸಿದ್ದಾರೆ. ಇವುಗಳಲ್ಲಿನ 100 ಸಣ್ಣ ಕಣಗಳಲ್ಲಿ ಕೊರೋನಾ ತಡೆಯುವ ಶಕ್ತಿ ಇದೆ ಎಂದು ಕಂಡುಬಂದಿದೆ ಎಂದು ‘ನೇಚರ್‌ ಜರ್ನಲ್‌’ ನಿಯತಕಾಲಿಕೆ ಪ್ರಕಟಿಸಿದೆ.

‘ಈ ಔಷಧಗಳು ಕೊರೋನಾ ವೈರಸ್‌ನ ಮರು ಉತ್ಪಾದನೆಯನ್ನು ತಡೆಗಟ್ಟುತ್ತವೆ. ಇವುಗಳ ಪೈಕಿ 4 ಔಷಧಗಳ ಸಂಯೋಜನೆಗಳನ್ನು ಕೊರೋನಾ ಪೀಡಿತರಿಗೆ ಈಗಾಗಲೇ ಬಳಸಲಾಗುತ್ತಿರುವ ರೆಮ್‌ಡೆಸಿವಿರ್‌ ಔಷಧದ ಜತೆ ಸಂಯೋಜಿಸಿದರೆ, ಇದು ಯಶಸ್ವಿ ಔಷಧವಾಗಲಿದೆ’ ಎಂದು ಸಂಶೋಧಕರು ಹೇಳಿದ್ದಾರೆ.