ಲಂಡನ್‌(ಜೂ.02): ಕೊರೋನಾ ಲಾಕ್‌ಡೌನ್‌ ಕಾರಣ ಆಗ್ನೇಯ ಇಂಗ್ಲೆಂಡ್‌ನ ಅರಮನೆಯಲ್ಲಿ ಪತಿ ಫಿಲಿಪ್‌ ಅವರೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿರುವ ಬ್ರಿಟನ್‌ ರಾಣಿ ಎಲಿಜಬೆತ್‌-2 ಮೊದಲ ಬಾರಿಗೆ ಮನೆಯಿಂದ ಆಚೆ ಬಂದು ತಮ್ಮ 94ನೇ ವಯಸ್ಸಿನಲ್ಲೂ ಕುದುರೆ ಸವಾರಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಕುದುರೆಗಳನ್ನು ಪ್ರೀತಿಸುವ, ಕುದುರೆ ಸವಾರಿಯನ್ನು ಇಷ್ಟಪಡುವ ರಾಣಿ ಎಲಿಜಬೆತ್‌, ಬಣ್ಣ ಬಣ್ಣದ ತಲೆವಸ್ತ್ರ, ಜಾಕೆಟ್‌, ಗ್ಲೌಸ್‌ ಮತ್ತು ಬೂಟು ಧರಿಸಿ ವಾರಾಂತ್ಯದ ನೆಪದಲ್ಲಿ ಬೆರ್ಕ್ಶೈರ್‌ನಲ್ಲಿರುವ ಬಂಗಲೆಯ ವಿಸ್ತಾರ ಮೈದಾನದಲ್ಲಿ ಕುದುರೆ ಸವಾರಿ ಮಾಡಿದ್ದಾರೆ.

ಮಾಚ್‌ರ್‍ 23ರಂದು ಬ್ರಿಟನ್‌ನಲ್ಲಿ ಅಧಿಕೃತವಾಗಿ ಕೊರೋನಾ ಲಾಕ್‌ಡೌನ್‌ ಘೋಷಣೆಯಾದ ಬಳಿಕ ರಾಣಿ ಎಲಿಜಬೆತ್‌ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.