ಇಟಲಿಯಲ್ಲಿ ಕೊರೋನಾ ತಾಂಡವ| 12 ಸಾವಿರದ 500ಕ್ಕೂ ಹೆಚ್ಚು ಮಂದಿಗೆ ಕೊರೋನಾ| ಸೋಂಕು ಹರಡುವ ಭೀತಿಯಲ್ಲಿ ಮನೆಯಲ್ಲೇ ಕೈದಿಗಳಂತಿದ್ದಾರೆ ಜನ| ಭಯದಲ್ಲೂ ಕಳೆಗುಂದದ ಜೀವನೋತ್ಸಾಹ, ನೋಡ್ಲೇಬೇಕು ಈ ವಿಡಿಯೋ

ರೋಮ್[ಮಾ.14]: ಚೀನಾ ಬಳಿಕ ಕೊರೋನಾಗೆ ತಿ ಹೆಚ್ಚು ನಗಲುಗಿರುವ ರಾಷ್ಟ್ರವೆಂದರೆ ಅದು ಇಟಲಿ. ಇಲ್ಲಿ 12 ಸಾವಿರದ 500ಕ್ಕೂ ಹೆಚ್ಚು ಮಂದಿಯಲ್ಲಿ ಈ ಮಾರಕ ಸೋಂಕು ಕಾಣಿಸಿಕೊಂಡಿದೆ. ಈ ಡೆಡ್ಲಿ ವೈರಸ್ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಜನರು ಮನೆಗಳಲ್ಲಿ ಕೈದಿಗಳಂತೆ ಬದುಕುತ್ತಿದ್ದಾರೆ. ಜನರು ಹೊರಗೆ ಓಡಾಡುವುದನ್ನೂ ನಿಲ್ಲಿಸಿದ್ದಾರೆ. ಇದರಿಂದ ಇಡೀ ನಗರವೇ ಖಾಲಿ ಹೊಡೆಯುತ್ತಿದೆ. ಹೀಗಿರುವಾಗ ಇಲ್ಲಿನ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಜನರು ಮನೆಯ ಬಾಲ್ಕನಿಯಲ್ಲಿ ನಿಂತು ಹಾಡು ಹಾಡುತ್ತಿರುವ ದೃಶ್ಯಗಳು ಇದರಲ್ಲಿವೆ. 

Scroll to load tweet…

ಹೌದು ಮನೆಯ ಬಾಲ್ಕನಿಯಲ್ಲಿ ನಿಂತ ಜನ ಒಟ್ಟಾಗಿ ಹಾಡು ಹಾಡಿ, ಸಂತೋಷದಿಂದ ಸಮಯ ಕಳೆಯುತ್ತಿದ್ದಾರೆ. ಕೆಲವರು ಗಿಟಾರ್ ನುಡಿಸಿ ಮೆರುಗು ಹೆಚ್ಚಿಸಿದ್ದರೆ, ಇನದ್ನು ಕೆಲವರು ಇನ್ನಿತರ ಸಂಗೀತ ಸಾಧನಗಳನ್ನು ನುಡಿಸಿದ್ದಾರೆ. ಒಟ್ಟಾರೆಯಾಗಿ ಅಲ್ಲೊಂದು ಪಾರ್ಟಿಯ ವಾತಾವರಣ ನಿರ್ಮಿಸಿದ್ದಾರೆ. ಈ ವಿಡಿಯೋ ಇಟಲಿಯ ಸಿಸಿಲಿ ನಗರದ್ದೆನ್ನಲಾಗಿದೆ.

Scroll to load tweet…
Scroll to load tweet…
Scroll to load tweet…

ಹಲವರು ಹಾಡು ಹಾಡಿ, ಸಂಗೀತ ವಾದನ ನುಡಿಸುತ್ತಿದ್ದರೆ, ಮತ್ತೆ ಕೆಲವರು ಪ್ರೇಕ್ಷಕರಾಗಿ ಚಪ್ಪಾಳೆ ತಟ್ಟಿ ಅವರನ್ನು ಮತ್ತಷ್ಟು ಪ್ರೋತ್ಸಾಹಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೊರೋನಾದಿಂದ ಬಳಲಿ ಬೆಂಡಾದ ಜನ ಪರಸ್ಪರ ರಂಜಿಸುತ್ತಾ ಹುಮ್ಮಸ್ಸಿನಿಂದ ಸಮಯ ಕಳೆಯುತ್ತಿದ್ದಾರೆ. ಕಷ್ಟ ಕಾಲದಲ್ಲೂ ಜೀವನೋತ್ಸಾಹ ಕಳೆದುಕೊಳ್ಳದ ಜನರಿಗೆ ನೆಟ್ಟಿಗರು ಸಲಾಂ ಎಂದಿದ್ದಾರೆ