Asianet Suvarna News Asianet Suvarna News

ವಿಶ್ವಸಂಸ್ಥೆ ಕಚೇರಿ ಎದುರು ಭಾರತ ವಿರೋಧಿ ಪೋಸ್ಟರ್, 2024ರಲ್ಲಿ ಮೋದಿ ಮಣಿಸಲು ಟೂಲ್ ಕಿಟ್ ಷಡ್ಯಂತ್ರ!

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮಣಿಸಲು ಅಂತಾರಾಷ್ಟ್ರೀಯ ಎಜೆನ್ಸಿಗಳು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ನಡೆದ ಹಲವು ಘಟನೆಗಳು ಇದಕ್ಕೆ ಪೂರಕವಾಗಿದೆ. ಇದೀಗ ವಿಶ್ವಸಂಸ್ಥೆ ಕಚೇರಿ ಎದರು ಭಾರತವನ್ನು ಅವಮಾನಿಸುವ ಹಾಗೂ ಮೋದಿ ಆಡಳಿತದಲ್ಲಿ ಭಾರತದಲ್ಲಿ ಬಾಲ್ಯ ವಿವಾಹ, ಕ್ರಿಶ್ಚಿಯನ್ ಮೇಲೆ ದಾಳಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ಕೋಮುಗಲಭೆ, ಉಗ್ರರ ದಾಳಿ, ಧರ್ಮಾಂಧತೆ ಹೆಚ್ಚಾಗಿದೆ ಎಂದು ಪೋಸ್ಟರ್‌ಗಳನ್ನು ಹಾಕಲಾಗಿದೆ. 
 

Propaganda poster Against India to defame seen Infront of UN headquarters Geneva report says Toolkit for 2024 election ckm
Author
First Published Mar 4, 2023, 7:04 PM IST

ಜನಿವಾ(ಮಾ.04): ಸುಪ್ರೀಂ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಕ್ಲಿನ್ ಚಿಟ್ ನೀಡಿದರೂ ಗುಜರಾತ್ ಗಲಭೆ ಕುರಿತು ಪ್ರಧಾನಿ ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ. ಇದನ್ನು ಪ್ರಸಾರ ಮಾಡಲು ಭಾರತದಲ್ಲಿ ಹಲವು ಸಂಘಟನೆಗಳ ಹೋರಾಟ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತಕ್ಕೆ ಅವಮಾನ. ಈ ಘಟನೆಗಳನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದರು. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಹಾಗೂ ಮೋದಿ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿತ್ತು. ಇದೀಗ ಈ ಆರೋಪ ನಿಜವಾಗುತ್ತಿದೆ. ಕಾರಣ ವಿಶ್ವಸಂಸ್ಥೆ ಕಚೇರಿ ಎದುರು ಭಾರತವನ್ನು ಅವಮಾನಿಸುವ ಕೆಲಸ ನಡೆದಿದೆ. ಈ ಕುರಿತು ಜಿನೆವಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಈ ರೀತಿ ಸುಳ್ಳಿನ ಮೂಲಕ ಏನನ್ನು ಬಿಂಬಿಸಲು ಹೊರಟಿದ್ದಾರೆ? ಇದರ ಹಿಂದೆ ಯಾರಿದ್ದಾರೆ ಎಂದು ವಿಡಿಯೋದಲ್ಲಿ ಪ್ರಶ್ನಿಸಲಾಗಿದೆ.

ಈ ವಿಡಿಯೋದಲ್ಲಿ ಆರಂಭದಲ್ಲಿ ವಿದ್ಯಾರ್ಥಿನಿ ನಾನು ಜಿನಿವಾ ನಗರದಲ್ಲಿದ್ದೇನೆ ಎಂದು ಮಾತು ಆರಂಭಿಸಿದ್ದಾರೆ. ಜೊತೆಗೆ ವಿಶ್ವಸಂಸ್ಥೆ ಪ್ರಧಾನ ಕಚೇರಿ, ಮಾನವ ಹಕ್ಕುಗಳ ಕಚೇರಿ ಇದೆ. ಈಗ ನೀವು ಈ ದೃಶ್ಯ ನೋಡಿ ಎಂದು ವಿಶ್ವಸಂಸ್ಥೆ ಕಚೇರಿ ಮುಂಭಾಗದ ದೃಶ್ಯ ನೀಡಿದ್ದಾರೆ. ಕಚೇರಿ ಮುಂಭಾಗದಲ್ಲಿ ದೊಡ್ಡ ದೊಡ್ಡ ಪೋಸ್ಟರ್ ಹಾಕಲಾಗಿದೆ. ಈ ಚಿತ್ರಗಳಲ್ಲಿ ಭಾರತದಲ್ಲಿ ಮಹಿಳೆಯರು ಜೀತದಾಳುಗಳಾಗಿ ನೋಡಲಾಗುತ್ತಿದೆ ಎಂದು ಕಾರ್ಮಿಕರ ಫೋಟೋ ಹಾಕಲಾಗಿದೆ. ಭಾರತದಲ್ಲಿ ಬಾಲ್ಯ ವಿವಾಹ ವಿಪರೀತವಾಗಿದೆ. ಭಾರತೀಯ ಮಕ್ಕಳ ಹಕ್ಕುಗಳ ದಾಖಲೆ ಪ್ರಕಾರ ಈ ಮಾಹಿತಿ ನೀಡಲಾಗಿದೆ ಎಂದು ಪೋಸ್ಟರ್ ಹಾಲಾಗಿದೆ. ಇಷ್ಟಕ್ಕೆ ಈ ಟೂಲ್ ಕಿಟ್ ಮುಗಿದಿಲ್ಲ.

ದಾಖಲೆ ಸಮೇತ ರಾಹುಲ್ ಗಾಂಧಿ ಕೇಂಬ್ರಿಡ್ಜ್ ಭಾಷಣದ ಷಡ್ಯಂತ್ರ ಬಟಾ ಬಯಲು, ಕಾಂಗ್ರೆಸ್ ಕಂಗಾಲು!

ಭಾರತೀಯ ಕ್ರಿಶ್ಚಿಯನ್ನರು ಸರ್ಕಾರ ಪ್ರಚೋದಿಸಿದ ಭಯೋತ್ಪಾದಕತೆಗೆ ಗುರಿಯಾಗುತ್ತಿದ್ದಾರೆ ಅನ್ನೋ ಪೋಸ್ಟರ್ ಹಾಕಲಾಗಿದೆ. ಭಾರತದ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉಗ್ರ ದಾಳಿಯಾಗುತ್ತಿದೆ. ಭಾರತೀಯ ಕ್ರಿಶ್ಚಿಯನ್ನರ ಮೇಲೆ ದಾಳಿ ಅಂತ್ಯ ಮಾಡಿ, ಚರ್ಚ್ ಮೇಲಿನ ದಾಳಿ ನಿಲ್ಲಿಸಿ, ಭಾರತ ಧರ್ಮಾಂಧತೆಯಲ್ಲಿ ಸಾಗುತ್ತಿದೆ ಸೇರಿದಂತೆ ಭಾರತವನ್ನು ಅವಮಾನಿಸುವ ಹಾಗೂ ಸುಳ್ಳನ್ನು ಬಿಂಬಿಸುವ ಪೋಸ್ಟರ್ ಹಾಕಲಾಗಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ಈ ಪೋಸ್ಟರ್‌ಗಳನ್ನು ನಾನು ಒಪ್ಪುವುದಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ? ಪ್ರತಿ ಬಾರಿ ಇದನ್ನು ಪ್ರಶ್ನಿಸಬೇಕು ಎಂದುಕೊಳ್ಳತ್ತೇನೆ. ಬಳಿಕ ನಾನು ನೆಗಟೀವ್ ಕುರಿತು ಯಾಕೆ ಮಾತನಾಡಬೇಕು.ಪಾಸಿಟಿವಿ ಸಾಕು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

 

 

ಜಿನಿವಾ ನಗರದಲ್ಲಿನ ವಿಶ್ವಸಂಸ್ಥೆ ಪ್ರಧಾನ ಕಚೇರಿ ಮುಂದೆ ಈ ಪೋಸ್ಟರ್ ಹಾಕಲಾಗಿದೆ. ಈ ರೀತಿಯ ಪ್ರಚಾರ ನೀಡುವ ಮೂಲಕ ಭಾರತವನ್ನು ಅವಮಾನಿಸುವ ಉದ್ದೇಶವೇನು? ಬಿಜೆಪಿ ನಾಯಕರು ಆರೋಪಿಸುವಂತೆ, 2024ರಲ್ಲಿ ಪ್ರಧಾನಿ ಮೋದಿ ಮಣಿಸಲು ಅಂತಾರಾಷ್ಟ್ರೀಯ ಟೂಲ್ ಕಿಟ್ ಸಿದ್ಧವಾಗಿದೆ. ಇದರ ಭಾಗವಾಗಿ ಈ ಎಲ್ಲಾ ಷಡ್ಯಂತ್ರಗಳು ನಡೆಯುತ್ತಿದೆ ಅನ್ನೋ ಮಾತುಗಳಿಗೆ ಇದು ಪುಷ್ಠಿ ನೀಡುವಂತಿದೆ. 

'1984ರಲ್ಲೂ ಗಲಭೆಯಾಗಿತ್ತು ಈ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಬಂದಿಲ್ಲ..?' ಜೈಶಂಕರ್‌ ಪ್ರಶ್ನೆ

2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಅಭಿವೃದ್ಧಿ, ಭ್ರಷ್ಟಾಚಾರ ಯಾವ ಆರೋಪಗಳು ಕೈಹಿಡಿಯುವುದಿಲ್ಲ ಎಂದು ಅರಿತಿರುವ ಕೆಲ ಎಜೆನ್ಸಿಗಳು, ಭಾರತವನ್ನು ಅವಮಾನಿಸುವ , ಹಿಂದುತ್ವ, ಧರ್ಮಾಂಧತೆ, ಚರ್ಚ್ , ಅಲ್ಪಸಂಖ್ಯಾತರ ಮೇಲಿನ ದಾಳಿ ಅನ್ನೋ ಹೇಳಿಕೆಗಳ ಮೂಲಕ ಈಗಿನಿಂದಲೇ ಆಟ ಶುರುಮಾಡಿದೆ. ಈ ಮೂಲಕ ಭಾರತವನ್ನು ಅವಮಾನಿಸುತ್ತಾ, ಮೋದಿ ಸರ್ಕಾರವನ್ನು ಮಣಿಸುವ ಅತೀ ದೊಡ್ಡ ಟೂಲ್ ಕಿಟ್  ಭಾಗ ಈ ಪ್ರಯತ್ನಗಳು ಅನ್ನೋ ಆರೋಪಗಳಿಗೆ ಸಾಕ್ಷ್ಯಗಳು ಲಭ್ಯವಾಗತೊಡಗಿದೆ.
 

Follow Us:
Download App:
  • android
  • ios