ವಾಷಿಂಗ್ಟನ್(ನ.03): ಕೊರೋನಾ ಮಹಾಮಾರಿ ನಡುವೆ ಇಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕದ ಈ ಚುನಾವಣೆ ಮೇಲೆ ಇಡೀ ವಿಶ್ವದ ಗಮನವಿದೆ. ಅಮೆರಿಕದ ಈ ಚುನಾವಣೆ ಈ ಬಾರಿ ಅಲ್ಲಿನ ಇತಿಹಾಸದ ಬಹುದೊಡ್ಡ ಚುನಾವಣೆಯಾಗಲಿದೆ. ಈ ಚುನಾವಣೆಯಲ್ಲಿ ಕಳೆದ ಅಧ್ಯಕ್ಷೀಯ ಚುನಾವಣೆಗೆ ಹೋಲಿಸಿದರೆ ಎರಡು ಪಟ್ಟು ಹಣ ಖರ್ಚು ಮಾಡಿದ್ದಾರೆಂದು ಅಂದಾಜಿಸಲಾಗಿದೆ. ಈ ಬಾರಿ ಸುಮಾರು  14 ಮಿಲಿಯನ್ ಡಾಲರ್ ವ್ಯಯಿಸಿದ್ದಾರೆಂದು ಅಂದಾಜಿಸಲಾಗಿದೆ. 

ಕೊರೋನಾ ಸಂಬಂಧ ಬೈಡೆನ್ ಹೇಳಿದ್ದೇನು?

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಚುನಾವಣಾ ಕಣಕ್ಕಿಳಿದಿರುವ ಬೈಡೆನ್ ತಾನು ಕೊರೋನಾವನ್ನು ಕಣ್ಮುಚ್ಚಿ ತೆರೆಯುವುದರೊಳಗೆ ನಿಯಂತ್ರಿಸುತ್ತೇನೆಂದು ಸುಳ್ಳು ಭರವಸೆ ನಿಡುವುದಿಲ್ಲ. ಇತ್ತ ಟ್ರಂಪ್ ಕೊನೆಯ ಹಂತದ ಚುನಾವಣೆ ವೇಳೆ ತಾನು ಕೊರೋನಾವನ್ನು ನಿಯಂತ್ರಿಸುವುದಾಗಿ ಹೇಳಿದ್ದರು. ಈ ಚುನಾವಣೆಯಲ್ಲಿ ಕೊರೋನಾ ವೈರಸ್ ಪ್ರಮುಖ ಪಾತ್ರ ವಹಿಸಿದೆ.

ಎರಡು ಪಕ್ಷಗಳ ನಡುವೆ ನಡೆಯುತ್ತೆ ಪೈಪೋಟಿ

ಅಮೆರಿಕದಲ್ಲಿ ನಾಲ್ಕು ವರ್ಷಕ್ಕೊಮ್ಮೆ ಅಧ್ಯಕ್ಷೀಯ ಚುನಾವಣೆ ನವೆಂಬರ್ ಮೊದಲ ವಾರದ ಮಂಗಳವಾರ ನಡೆಯುತ್ತದೆ. ಇಲ್ಲಿ ದ್ವಿಪಕ್ಷ ನೀತಿ ಇದೆ. ಇದರಂತೆ ಈ ಎರಡು ಪಕ್ಷದ ಓರ್ವ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಆಗಿದ್ದಾರೆ. ಇದು ಅತ್ಯಂತ ಪುರಾತನ ಪಕ್ಷವಾಗಿದೆ. ಇನ್ನೊಂದು ಪಕ್ಷ ರಿಪಬ್ಲಿಕನ್ ಪಕ್ಷವಾಗಿದೆ. ಇದು ಕೊಂಚ ಲಿಬರಲ್. ಜೋ ಬೈಡನ್ ಇದೇ ಪಕ್ಷದ ಅಭ್ಯರ್ಥಿಯಾಗಿದ್ದಾರೆ. 

ಮತದಾನ ಹೇಗೆ ನಡೆಯುತ್ತೆ?

ಅಮೆರಿಕದಲ್ಲಿ 50 ರಾಜ್ಯಗಳಿದ್ದು, ಆ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ದೇಶಾದ್ಯಂತ ಒಟ್ಟಾರೆ 538 ಪ್ರತಿನಿಧಿಗಳು ಇರುತ್ತಾರೆ. ಮತದಾರರು ಆ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಈ ಪ್ರತಿನಿಧಿಗಳಲ್ಲಿ 270 ಮಂದಿ ಯಾರನ್ನು ಬೆಂಬಲಿಸುತ್ತಾರೋ ಅವರೇ ಅಮೆರಿಕ ಅಧ್ಯಕ್ಷರಾಗುತ್ತಾರೆ. ಈ ಪ್ರತಿನಿಧಿಗಳು ಆಯಾ ಪಕ್ಷದ ಜತೆ ಗುರುತಿಸಿಕೊಳ್ಳುವುದರಿಂದ ಅವರು ಗೆಲ್ಲುತ್ತಿದ್ದಂತೆ ಯಾರು ನೂತನ ಅಧ್ಯಕ್ಷ ಎಂಬ ಚಿತ್ರಣ ಲಭಿಸಲಿದೆ. ಆದರೆ ಎಲೆಕ್ಟೋರಲ್‌ (ಪ್ರತಿನಿಧಿ) ಎಂದು ಕರೆಯುವ ಇವರೆಲ್ಲಾ ತಮ್ಮ ಆಯ್ಕೆಯ ಅಧ್ಯಕ್ಷರ ಆಯ್ಕೆಗೆ ಡಿ.14ರಂದು ತಮ್ಮ ತಮ್ಮ ರಾಜ್ಯಗಳಲ್ಲಿ ಮತ ಚಲಾಯಿಸುತ್ತಾರೆ. 2021ರ ಜ.6ರಂದು ಅಮೆರಿಕ ಸಂಸತ್‌ನಲ್ಲಿ ಪ್ರತಿನಿಧಿಗಳ ಮತ ಲೆಕ್ಕ ಹಾಕಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಜ.20ಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸುತ್ತಾರೆ.

ಯಾರು ರಾಷ್ಟ್ರಪತಿ ಅಭ್ಯರ್ಥಿಯಾಗಬಹುದು?

ಇಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಕೆಲ ಷರತ್ತುಗಳಿವೆ. ಇವುಗಳಲ್ಲಿ ಪ್ರಮುಖವಾದ ಅಂಶವೆಂದರೆ ಅಭ್ಯರ್ಥಿ ಬಾಲ್ಯದಿಂದ ಅಮೆರಿಕದಲ್ಲಿರಬೇಕು ಹಾಗೂ ಕನಿಷ್ಟ 35 ವರ್ಷ ವಯಸ್ಸಾಗಿರಬೇಕು. ಅಲ್ಲದೇ ಅಭ್ಯರ್ಥಿ ಕನಿಷ್ಟ 14 ವರ್ಷ ಅಮೆರಿಕದಲ್ಲಿ ನೆಲೆಸಿರಬೇಕು.

ಎಷ್ಟು ಮಂದಿ ಮತದಾನ ಮಾಡುತ್ತಾರೆ?

ಕಳೆದ ತಿಂಗಳು ಅಕ್ಟೋಬರ್ 28 ರವರೆಗೆ ಅರ್ಲೀ ವೋಟಿಂಗ್ ಮೂಲಕ 7.5 ಕೋಟಿಗೂ ಅಧಿಕ ಮಂದಿ ಮತ ಹಾಕಿದ್ದಾರೆ. ಅಮೆರಿಕದಲ್ಲಿ ಒಟ್ಟು 24 ಕೋಟಿ ಮತದಾರರಿದ್ದಾರೆ.  2016ರ ಚುನಾವಣೆ ವೇಳೆ ಅರ್ಲಿ ವೋಟಿಂಗ್‌ನಲ್ಲಿ5 ಕೋಟಿಗೂ ಅಧಿಕ ಮಂದಿ ಮತದಾನ ಮಾಡಿದ್ದರು. ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ 46.1  ಶೇಕಡಾದಷ್ಟು ಮತದಾನ ಸಿಕ್ಕಿತ್ತು. ಅತ್ತ ಹಿಲರಿ ಕ್ಲಿಂಟನ್‌ಗೆ 48.2 ಶೇಕಡದಷ್ಟು ಮತ ಸಿಕ್ಕಿತ್ತು. 

ಚರ್ಚೆ ಚುನಾವಣೆಯ ಪ್ರಮುಖ ಅಂಶ

ಅಮೆರಿಕದಲ್ಲಿ ರಾಷ್ಟ್ರಪತಿ ಚುನಾವಣೆಗೆ ನಡೆಯುವ ಚರ್ಚೆ ಬಹುದೊಡ್ಡ ಚುನಾವಣಾ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಪ್ರೈಮರಿ ಚುನಾವಣೆಯಿಂದ ರಾಷ್ಟ್ರಪತಿ ಚುನಾವಣೆವರೆಗೆ ವಿಭಿನ್ನ ಹಂತದಲ್ಲಿ ಚರ್ಚೆ ನಡೆಯುತ್ತದೆ. ಈ ಚರ್ಚೆ ಅಮೆರಿಕದ ನ್ಯೂಸ್ ಚಾನೆಲ್ ಆಯೋಜಿಸುತ್ತದೆ. ಇದರಲ್ಲಿ ಅಧ್ಯಕ್ಷೀಯ ಚರ್ಚೆ ಮಹತ್ವಪೂರ್ಣವಾಗುತ್ತದೆ. ಇದು ಎರಡೂ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಗಳ ನಡುವೆ ಮೂರು ಹಂತದಲ್ಲಿ ನಡೆಯುತ್ತದೆ. 

ಯಾವ ರಾಜ್ಯದ ಪಾತ್ರ ಪ್ರಮುಖ?

ಅಮೆರಿಕದಲ್ಲಿ ಡೆಲಿಗೇಟ್ಸ್ ಸಂಖ್ಯೆಯ ಆಧಾರದಲ್ಲಿ ಅತಿ ಹೆಚ್ಚು 415 ಅಂಕಗಳೊಂದಿಗೆ ಕ್ಯಾಲಿಫೋರ್ನಿಯ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದಾದ ಬಳಿಕ 228 ಅಂಕಗಳೊಂದಿಗೆ ಟೆಕ್ಸಾಸ್, ಹಾಗೂ 110 ಅಂಕಗಳೊಂದಿಗೆ ನಾರ್ಥ್ ಕ್ಯಾರೊಲಿನಾ ಇದೆ. ಆದರೆ ಇವೆಲ್ಲವೂ ಪ್ರೈಮರಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಡೆಲಿಗೇಟ್ಸ್ ಸ್ಥಾನದಲ್ಲಿ ಇಲೆಕ್ಟರ್ ಮಹತ್ವ ಹೆಚ್ಚಿದೆ.

ಕನ್ವೆಂಶನ್‌ನಲ್ಲಿ ಘೋಷಣೆ: 

ಪ್ರೈಮರಿ ಚುನಾವಣೆ ಬಳಿಕ ರಾಷ್ಟ್ರಪತಿ ಸ್ಥಾನಕ್ಕಾಗಿ ತನ್ನ ಅಭ್ಯರ್ಥಿಗಳ ಅಧಿಕೃತ ಘೋಷಣೆ ನ್ಯಾಷನಲ್ ಕನ್ವೆಂಶನ್‌ನಲ್ಲಿ ನಡೆಯುತ್ತದೆ. ಕನ್ವೆಂಶನ್ ಬಳಿಕ ಅಭ್ಯರ್ಥಿ ದೇಶಾದ್ಯಂತ ಪ್ರಚಾರ ಅಭಿಯಾನ ಆರಂಭಿಸುತ್ತಾರೆ. ಇದಾದ ಬಳಿಕ ಅಭ್ಯರ್ಥಿ ಸಮರ್ಥಕರೆದುರು ಭಾಷಣದಲ್ಲಿ ತನ್ನ ಅಭ್ಯರ್ಥಿ ಸ್ಥಾನ ಸ್ವೀಕರಿಸುತ್ತಾರೆ ಹಾಗೂ ಉಪ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಜುಲೈನಲ್ಲಿ ಡೆಮಾಕ್ರಟಿಕ್ ಹಾಗೂ ಆಗಸ್ಟ್‌ನಲ್ಲಿ ರಿಪಬ್ಲಿಕನ್ ಪಾರ್ಟಿಯ ನ್ಯಾಷನಲ್ ಕನ್ವೆಂಶನ್ ನಡೆಯುತ್ತದೆ.

ಜನವರಿಯಲ್ಲಿ ನಡೆಯುತ್ತದೆ ಪ್ರಮಾಣವಚನ:

ಅಮೆರಿಕದಲ್ಲಿ ಅಧ್ಯಕ್ಷೀಯ ಫಲಿತಾಂಶ ಘೋಷಣೆಯಾದ ಬಳಿಕ ಅಧ್ಯಕ್ಷರಿಗೆ ಕ್ಯಾಬಿನೆಟ್ ಆಯ್ಕೆಗಾಗಿ ಕೆಲ ಸಮಯ ನೀಡಲಾಗುತ್ತದೆ. ಇದಾದ ಬಳಿಕ ಜನವರಿಯಲ್ಲಿ ಶಪಥಗ್ರಹಣ ನಡೆಯುತ್ತದೆ. ಶಪಥಗ್ರಹಣದ ಬಳಿಕ ಅಧ್ಯಕ್ಷ ಪರೇಡ್ ಒಂದರಲ್ಲಿ ಶ್ವೇತಭವನ ತಲುಪುತ್ತಾರೆ. ಇದಾದ ಬಳಿಕ ಅವರ ನಾಲ್ಕು ವರ್ಷದ ಅಧಿಕಾರಾವಧಿ ಆರಂಭವಾಗುತ್ತದೆ.