Asianet Suvarna News Asianet Suvarna News

8 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲ್‌ ಆಯ್ತು ರಾಜಕುಮಾರಿ ಡಯನಾ ಸ್ವೆಟರ್

ಬ್ರಿಟಿಷ್ ರಾಜಕುಮಾರಿ ಡಯಾನ ದುರಂತವಾಗಿ ಸಾವನ್ನಪ್ಪಿ 26 ವರುಷಗಳೇ ಕಳೆದಿವೆ. ಆದರೆ ಅವರು ಅಂದು ಧರಿಸಿದ್ದ ಸ್ವೆಟರ್‌ ಈಗ 26 ವರ್ಷಗಳ ನಂತರ ಸುಮಾರು 1.1 ಮಿಲಿಯನ್ ಡಾಲರ್‌ಗೆ ಹರಾಜಾಗಿದೆ.  

Princess Diana sweater sold for more than 8 crores akb
Author
First Published Sep 17, 2023, 12:51 PM IST

ಲಂಡನ್ : ಬ್ರಿಟಿಷ್ ರಾಜಕುಮಾರಿ ಡಯಾನ ದುರಂತವಾಗಿ ಸಾವನ್ನಪ್ಪಿ 26 ವರುಷಗಳೇ ಕಳೆದಿವೆ. ಆದರೆ ಅವರು ಅಂದು ಧರಿಸಿದ್ದ ಸ್ವೆಟರ್‌ ಈಗ 26 ವರ್ಷಗಳ ನಂತರ ಸುಮಾರು 1.1 ಮಿಲಿಯನ್ ಡಾಲರ್‌ಗೆ ಹರಾಜಾಗಿದೆ.  ಹರಾಜು ಸಂಸ್ಥೆ ಸೋಥಿಬೆ ಈ ಹರಾಜು ಪ್ರಕ್ರಿಯೆ ನಡೆಸಿದ್ದು, ಭರ್ಜರಿ ಮೊತ್ತಕ್ಕೆ ರಾಜಕುಮಾರಿ ಡಯಾನ ಸ್ವೆಟ್ಟರ್ ಸೇಲ್ ಆಗಿದೆ.  ಕೊನೆಯ 15 ನಿಮಿಷಗಳಲ್ಲಿ  1,90,000 ಡಾಲರ್‌ನಿಂದ ಈಗ 1.1 ಮಿಲಿಯನ್ ಡಾಲರ್‌ಗೆ ಜಂಪ್ ಆಗಿದ್ದು,  ಇದು ಸ್ವೆಟರ್‌ನ ಮೂಲ ಬೆಲೆಗಿಂತ 80 ಸಾವಿರ ಡಾಲರ್ ಅಧಿಕ ಬೆಲೆಗೆ ಸೇಲ್ ಆಗಿ ಅಚ್ಚರಿ ಮೂಡಿಸಿದೆ.  

ಡಯಾನ 1981ರಲ್ಲಿ ಬಿಳಿ ಹಾಗೂ ಕಪ್ಪು ಕುರಿ ಮಾದರಿಯ ಕೆಂಪು ಸ್ವೆಟರ್‌ನ್ನು ಧರಿಸಿದ್ದರು. ಆಗ 19 ವರ್ಷ ವಯಸ್ಸಿನವರಾಗಿದ್ದ ಡಯಾನಾ ಈ ಸ್ವೆಟರ್ ಧರಿಸಿ ರಾಜಕುಮಾರ ಚಾರ್ಲ್ಸ್‌ನ ಪೋಲೋ ಪಂದ್ಯವನ್ನು ವೀಕ್ಷಿಸಿದ್ದರು. ಆದರೆ ನಂತರ ಈ ಸ್ವೆಟರ್‌ ಸ್ವಲ್ಪ ಹರಿದು ಹೋಗಿತ್ತು. ಈ ವೇಳೆ ಅದನ್ನು ಅವರು ಬೇರೆ ಬೇರೆ ಸ್ವೆಟರ್‌ನೊಂದಿಗೆ ಬದಲಾಯಿಸಿಕೊಂಡಿದ್ದರು.  ಸೋಥೆಬಿಯ ಆನ್‌ಲೈನ್ ಫ್ಯಾಶನ್ ಐಕಾನ್‌ಗಳ ಮಾರಾಟದಲ್ಲಿ ಅಪರಿಚಿತ ಬಿಡ್‌ದಾರರು ಖರೀದಿಸಿದ್ದಾರೆ.  ರಾಜಮನೆತನದ ವಸ್ತುವೊಂದು ಈ ರೀತಿ ಭಾರಿ ಮೊತ್ತಕ್ಕೆ ಮಾರಾಟ ಕಂಡು ಇತಿಹಾಸ ಬರೆದಿದೆ. 

ಇದಕ್ಕೂ ಮೊದಲು ಡಯಾನಾ ಅವರ ನೆಕ್ಲೇಸ್‌ ಕೂಡ ಭಾರಿ ಮೊತ್ತಕ್ಕೆ ಮಾರಾಟವಾಗಿತ್ತು.  ಈ ನೆಕ್ಲೇಸ್‌ನ್ನು ವಿಶೇಷವಾಗಿ ರಾಜಕುಮಾರಿ ಡಯಾನಾಗಾಗಿ ಮಾಡಲಾಗಿತ್ತು. ರಾಜಕುಮಾರಿ ಡಯಾನಾ ಅವರ ಸ್ವಾನ್ ಲೇಕ್ ನೆಕ್ಲೇಸ್ ವಿಶ್ವದ ಅತ್ಯಂತ ದುಬಾರಿ ಆಭರಣಗಳಲ್ಲಿ ಒಂದಾಗಿದೆ. ಈ ಹಾರವನ್ನು ರಾಜಕುಮಾರಿ ಡಯಾನಾ ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ 1997 ರಲ್ಲಿ ಸಾಯುವ ಕೆಲವು ದಿನಗಳ ಮೊದಲು ಧರಿಸಿದ್ದರು.  ಬ್ರಿಟಿಷ್ ಮಾಧ್ಯಮಗಳ ಪ್ರಕಾರ, ಈ ನೆಕ್ಲೇಸ್ ಅನ್ನು 178 ವಜ್ರಗಳು ಮತ್ತು ಐದು ಮುತ್ತುಗಳಿಂದ ಮಾಡಲಾಗಿದೆ. ಆಗಿನ ಕ್ರೌನ್ ಜ್ಯುವೆಲರ್ ಗ್ಯಾರಾರ್ಡ್ ಈ ಅಮೂಲ್ಯ ಹಾರವನ್ನು ತಯಾರಿಸಿದರು ಎಂದು ತಿಳಿದು ಬಂದಿದೆ. ಈ ನೆಕ್ಲೆಸ್ ನ್ನು ಬರೋಬ್ಬರಿ 10 ಮಿಲಿಯನ್ ಪೌಂಡ್‌ಗಳಿಗೆ ಮಾರಾಟ ಆಗಿದೆ.  ವಜ್ರ ಮತ್ತು ಮುತ್ತಿನ ಈ ನೆಕ್ಲೇಸ್ ಮತ್ತು ಕಿವಿಯೋಲೆ ಸೆಟ್ ಅನ್ನು ದಿವಂಗತ ವೇಲ್ಸ್ ರಾಜಕುಮಾರಿಗೆ ದೋಡಿ ಅಲ್-ಫಾಯೆದ್ ನೀಡಿದ್ದರು ಎಂದು ಹೇಳಲಾಗಿತ್ತು. 

Follow Us:
Download App:
  • android
  • ios