Asianet Suvarna News Asianet Suvarna News

Breaking:ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್‌ ಅಲಿ ಜರ್ದಾರಿ ಆಯ್ಕೆ

ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್‌ ಅಲಿ ಜರ್ದಾರಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನದ ಅಧ್ಯಕ್ಷರಾಗಿ ಅವರು 2ನೇ ಬಾರಿ ಆಯ್ಕೆಯಾದಂತಾಗಿದೆ.
 

PPPs Asif Ali Zardari elected as 14th Pakistan President san
Author
First Published Mar 9, 2024, 6:30 PM IST

ಇಸ್ಲಾಮಾಬಾದ್‌ (ಮಾ.9): ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಆಸಿಫ್‌ ಅಲಿ ಜರ್ದಾರಿ 2ನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಅಧ್ಯಕ್ಷರ ಚುನಾವಣೆಯ ವೇಳೆ ಆಸಿಫ್‌ ಅಲಿ ಜರ್ದಾರಿ ಗೆಲುವು ಕಾಣುವ ಮೂಲಕ ಪಾಕಿಸ್ತಾನದ ಅಧ್ಯಕ್ಷರೆನಿಸಿಕೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ 14ನೇ ಅಧ್ಯಕ್ಷ ಎನ್ನುವ ಕೀರ್ತಿ ಅವರದಾಗಿದೆ.ಪಿಪಿಪಿಯ ಹಿರಿಯ ನಾಯಕರಾಗಿರುವ ಆಸಿಫ್‌ ಅಲಿ ಜರ್ದಾರಿ, 2ನೇ ಬಾರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಂಡ ನಾಗರೀಕ ಎನಿಸಿಕೊಂಡಿದ್ದಾರೆ. ಪಿಪಿಪಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿ ಜರ್ದಾರಿ ಅವರು 255 ಮತಗಳನ್ನು ಪಡೆದುಕೊಂಡರೆ, ಇಮ್ರಾನ್ ಖಾನ್ ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಅಭ್ಯರ್ಥಿ ಮಹಮೂದ್ ಖಾನ್ ಅಚಕ್ಜಾಯ್ 119 ಮತಗಳನ್ನು ಪಡೆದುಕೊಂಡರು. ಪಿಪಿಪಿ ಮತ್ತು ಪಿಎಂಎಲ್‌-ಎನ್‌ ನಡುವೆ ಹೊಸದಾಗಿ ರೂಪುಗೊಂಡ ಒಕ್ಕೂಟದಲ್ಲಿ 68 ವರ್ಷ ವಯಸ್ಸಿನ ಜರ್ದಾರಿ, ರಾಷ್ಟ್ರದ ಅಧ್ಯಕ್ಷರಾಗಿ ಮರು ಆಯ್ಕೆ ಆಗುತ್ತಾರೆ ಎನ್ನುವ ಸುಳುವು ಅದಾಗಲೇ ಸಿಕ್ಕಿತ್ತು. ಉದ್ಯಮಿ ಹಾಗೂ ರಾಜಕಾರಣಿಯೂ ಆಗಿರುವ ಜರ್ದಾರಿ, ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್‌ಜೀರ್‌ ಭುಟ್ಟೋ ಅವರ ಪತಿ. 2008 ರಿಂದ 2013ರವರೆಗೆ ಇವರು ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಜರ್ದಾರಿ ಅವರು ಪಾಕಿಸ್ತಾನದ ಇತಿಹಾಸದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ. ಕಳೆದ ವರ್ಷ ಐದು ವರ್ಷಗಳ ಅವಧಿ ಮುಗಿಸಿರುವ ಡಾ.ಆರಿಫ್ ಅಲ್ವಿ ಅವರ ಸ್ಥಾನವನ್ನು ಅವರು ವಹಿಸಿಕೊಳ್ಳಲಿದ್ದಾರೆ. ಆದರೆ, ಹೊಸ ಸರ್ಕಾರ ಸಂಪೂರ್ಣವಾಗಿ ರಚನೆಯಾಗದ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

Follow Us:
Download App:
  • android
  • ios