ಬೋಟನ್ನೇ ಅಡಿಮೇಲು ಮಾಡಿದ ತಿಮಿಂಗಿಲ: ಮೀನುಗಾರರ ಎದೆನಡುಗಿಸುವ ವೀಡಿಯೋ ವೈರಲ್
ಶಾರ್ಕ್ ಅಥವಾ ತಿಮಿಂಗಿಲವೊಂದು ಸಮುದ್ರದ ನಡುವೆ ಮೀನುಗಾರಿಕಾ ಬೋಟನ್ನು ಅಡಿಮೇಲು ಮಾಡಿದೆ. ಅಮೆರಿಕಾದ ನ್ಯೂ ಇಂಗ್ಲೆಂಡ್‌ನ ನ್ಯೂ ನ್ಯೂ ಹಂಪ್ಶೈರ್ ಸಮೀಪವಿರುವ ಪೋರ್ಟ್‌ಸ್ಮೂತ್ ಹರ್ಬರ್ ಸಮೀಪ ಈ ಘಟನೆ ನಡೆದಿದೆ
ನ್ಯೂ ಹಂಪ್ಶೈರ್: ಶಾರ್ಕ್ ಅಥವಾ ತಿಮಿಂಗಿಲವೊಂದು ಸಮುದ್ರದ ನಡುವೆ ಮೀನುಗಾರಿಕಾ ಬೋಟನ್ನು ಅಡಿಮೇಲು ಮಾಡಿದೆ. ಅಮೆರಿಕಾದ ನ್ಯೂ ಇಂಗ್ಲೆಂಡ್‌ನ ನ್ಯೂ ನ್ಯೂ ಹಂಪ್ಶೈರ್ ಸಮೀಪವಿರುವ ಪೋರ್ಟ್‌ಸ್ಮೂತ್ ಹರ್ಬರ್ ಸಮೀಪ ಈ ಘಟನೆ ನಡೆದಿದೆ. ಬೋಟು ಸಾಗುತ್ತಿದ್ದಾಗ ಒಮ್ಮೆಲೇ ತಿಮಿಂಗಿಲ ಮೇಲೇರಿ ಬಂದಿದ್ದು, ಪರಿಣಾಮ ಬೋಟ್ ತಲೆಕೆಳಗಾಗಿದೆ. ಬೋಟ್‌ನಲ್ಲಿದ್ದವರೆಲ್ಲೂ ಸಮುದ್ರಕ್ಕೆ ಬಿದ್ದಿದ್ದಾರೆ. ಸಮೀಪದಲ್ಲೇ ಇತರ ಬೋಟ್‌ಗಳಲ್ಲಿದ್ದ ಜನರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ನೀರಿನಿಂದ ಮೇಲೆದ್ದ ತಿಮಿಂಗಿಲ ಬೋಟ್ ಸಮೀಪದಲ್ಲೇ ಮೇಲೆ ಜಿಗಿದಿದ್ದು, ಇದರ ರಭಸಕ್ಕೆ ಬೋಟ್ ಅಡಿಮೇಲಾಗಿದೆ. ಈ ವೇಳೆ ಬೋಟ್‌ನಲ್ಲಿ ಇಬ್ಬರು ಇದ್ದು ಅವರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ಘಟನೆ ನಡೆದಯುವ ವೇಳೆ ಸೋದರರಾದ 16 ವರ್ಷದ ಕೊಲಿನ್ ಯಗೇರ್ ಹಾಗೂ ಆತನ ಅಣ್ಣ 19 ವರ್ಷದ ವ್ಯಾಟ್ ಜೊತೆಗಿದ್ದು, ಈ ಬಂದರಿನ ಸಮೀಪ ಮೀನುಗಾರಿಕೆಗೆ ಬಂದಿದ್ದು, ಈ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದಾರೆ. ಇವರು ಘಟನೆ ನಡೆಯುವ ವೇಳೆ ಇನ್ನೊಂದು ಬೋಟ್‌ನಲ್ಲಿದ್ದು, ಕೂಡಲೇ ತಮ್ಮ ಮೊಬೈಲ್‌ನಲ್ಲಿ ಈ ಭಯಾನಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಲ್ಲದೇ ಕೂಡಲೇ ಸಮುದ್ರಕ್ಕೆ ಬಿದ್ದ ಇತರ ಮೀನುಗಾರರ ನೆರವಿಗೆ ಧಾವಿಸಿದ್ದಾರೆ.
ಸ್ಕೂಬಾ ಡೈವಿಂಗ್ ಮಾಡುವ ಪ್ರವಾಸಿಗರೇ ಎಚ್ಚರ! ಮುರ್ಡೇಶ್ವರ ಸಮುದ್ರ ತೀರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ತಿಮಿಂಗಿಲ!
WMTW-TV ವರದಿಯ ಪ್ರಕಾರ, ಘಟನೆ ನಡೆಯುವ ವೇಳೆ ಬೋಟ್‌ನಲ್ಲಿದ್ದ ಓರ್ವ ನೀರಿಗೆ ಹಾರಿದ್ದರೆ, ಮತ್ತೊರ್ವ ಜಂಪ್ ಮಾಡಲು ಸಾಧ್ಯವಾಗದೆ, ಬೋಟ್ ಮಗುಚಿದ ನಂತರ ಕೂಡಲೇ ನೀರಿನ ಮೇಲ್ಭಾಗಕ್ಕೆ ಈಜುತ್ತಾ ಬಂದು ಪಾರಾಗಿದ್ದಾರೆ. ಘಟನೆಯಲ್ಲಿ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾದ ಕೋಸ್ಟ್ ಗಾರ್ಡ್‌ಗಳು ಕೂಡ ಎರಡು ಬೋಟ್‌ಗಳ ಸಿಬ್ಬಂದಿ ಕೂಡ ಯಾವುದೇ ಹಾನಿ ಇಲ್ಲದೇ ಪಾರಾಗಿದ್ದಾರೆ. ತಿಮಿಂಗಿಲ ಕೂಡ ಗಾಯಗೊಂಡಿಲ್ಲ ಎಂದು ಹೇಳಿದ್ದಾರೆ.
ವೇ ಅಲ್ಲ ಆಹಾ ಅನ್ನುವ ವಾಂತಿ ಇದು: ಕೇರಳದ ಮೀನುಗಾರನಿಗೆ ಸಿಕ್ತು 28 ಕೋಟಿ ಮೌಲ್ಯದ ತಿಮಿಂಗಿಲ 'ವಾಂತಿ'
ತಿಮಿಂಗಿಲಗಳು ನ್ಯೂ ಹಂಪ್ಶೈರ್ ನ ನೀರಿನಲ್ಲಿ ಸಾಮಾನ್ಯವೆನಿಸಿದ್ದು, ವಿಶೇಷವಾಗಿ ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಪ್ರಕರಣದಲ್ಲಿ ಕಾಣಿಸಿಕೊಂಡ ತಿಮಿಂಗಿಲವೇ ಈ ಹಿಂದೆ ನಡೆದ ಇಂತಹ ಕೆಲ ಘಟನೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಗಮನಿಸಿದ ಸ್ಥಳೀಯರು ಹೇಳಿದ್ದಾರೆ. ಈ ಮುಖಾಮುಖಿಯೂ ಅಚಾನಕ್ ಆಗಿ ಊಹೆಯೂ ಮಾಡಲಾಗದಂತೆ ಎದುರಾಗುವ ಸಮುದ್ರ ಜೀವಿಗಳೊಂದಿಗಿನ ಮುಖಾಮುಖಿಯನ್ನು ತೋರಿಸುತ್ತಿದ್ದು, ಮೀನುಗಾರರು ಈ ಸಮುದ್ರದಲ್ಲಿರುವಾಗ ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಸೂಚಿಸುತ್ತಿದೆ.