ಸೌತ್ ಹಾಂಪ್ಟನ್(ಜೂ. 09 )  ಈ ಲಾಕ್ ಡೌನ್ ಎಂತೆಂಥ ಎಡವಟ್ಟುಗಳಿಗೆ ದಾರಿ ಮಾಡಿಕೊಡುತ್ತದೆ ..ಅಯ್ಯಯ್ಯಪ್ಪಾ... ಅದರಲ್ಲೂ ಲೈವ್ ಅಪ್ಲಿಕೇಶನ್ ಗಳು ಮಾಡುವ ಎಟವಟ್ಟು ಒಂದೇ  ಎರಡೇ!

ಯೋಗ ಕಲಿಸುವ ಗುರುವಿನ ಗಂಡನ ಮಾನ ಹರಾಜಾಗಿ ಹೋಗಿದೆ. ಪ್ರಖ್ಯಾತ ನಿರೂಪಕರೊಬ್ಬರು ಜಗತ್ತಿನ ಮುಂದೆ ಹೆಂಡತಿ ಕಾರಣಕ್ಕೆ ಬೆತ್ತಲಾಗಿದ್ದಾರೆ.

ಬ್ರಿಟನ್ ನಿವಾಸಿ ಕ್ರಿಸ್ಟಿನಾಗೆ ಅಷ್ಟಾಂಗ ಯೋಗದ ಮೇಲೆ ಬಲು ಪ್ರೀತಿ, ಲಾಕ್ ಡೌನ್ ಸಮಯದಲ್ಲಿ ನೇರವಾಗಿ ಕಲಿಸಲು ಸಾಧ್ಯವಾಗದ ಕಾರಣ ಆನ್ ಲೈನ್ ಮೊರೆ ಹೋಗಿದ್ದರು.

ಹೀಗಿರುವ ಕ್ರಿಸ್ಟಿನಾ ಇಸ್ಟಾಗ್ರ್ಯಾಮ್ ನಲ್ಲಿ ಕೆಲದಿನಗಳ ಹಿಂದೆ ಪೋಸ್ಟ್ ಮಾಡಿದ್ದ ವಿಡಿಯೋ ಗಂಡನ ಮಾನ ಹರಾಜು ಹಾಕಿದೆ. ಅವರ ಪತಿ ಪ್ರಖ್ಯಾತ ವಾಹಿನಿಯ ನಿರೂಪಕ ಕ್ರಿಸ್ ಕೊಮೋ.

ಸಿನಿಮಾಕ್ಕಾಗಿ ಸಂಪೂರ್ಣ ಬೆತ್ತಲಾದ ನಟ-ನಟಿಯರಿವರು!

ಮನೆಯ ಹಾಲ್ ನಲ್ಲಿ ಕ್ರಿಸ್ಟಿನಾ ಯೋಗಾಸನ ಮಾಡುತ್ತಿದ್ದರೆ ಅತ್ತ ಹುಲ್ಲುಹಾಸಿನ ಮೆಲೆ ಗಂಡ ನಿರೂಪಕ ಕ್ರಿಸ್ ಕೊಮೋ ಬೆತ್ತಲಾಗಿ ನಿಂತಿದ್ದ.  ಕೆಲವೇ ಕ್ಷಣಗಳಲ್ಲಿ ವಿಡಿಯೋ ಹರಿದಾಡಿತು.

ಮೂರು ಮಕ್ಕಳ ತಾಯಿ ಕ್ರಿಸ್ಟಿನಾ, ಪ್ಯೂರಿಸ್ಟ್ ಎಂಬ ವೇದಿಕೆಯನ್ನು ಮುನ್ನಡೆಸುತ್ತಿದ್ದಾರೆ.  ಒಟ್ಟಿನಲ್ಲಿ ಯೋಗಾಸನ ಮಾಡಲು ಹೋಗಿ ಹೆಂಡತಿ ಗಂಡನನ್ನು ಜಗತ್ತಿಗೆ ಬೆತ್ತಲಾಗಿ ಪರಿಚಯಿಸಿದ್ದಾರೆ.