ಮುದ್ದಾದ ನಾಯಿಮರಿಗಳನ್ನು ದತ್ತು ಪಡೆದ ಪೊಲೀಸರು ಅಂಗಡಿಯೊಂದರ ಮುಂದೆ ಬ್ಯಾಗ್‌ನಲ್ಲಿದ್ದ ಐದು ನಾಯಿಮರಿಗಳು

ಟುಲ್ಸಾ ಓಕ್ಲಾ(ಡಿ.28): ದಾರಿ ಬದಿಯಲ್ಲಿ ಬಿಟ್ಟಿದ್ದ ನಾಲ್ಕು ನಾಯಿಮರಿಗಳನ್ನು ಪೊಲೀಸರು ದತ್ತು ತೆಗೆದುಕೊಂಡ ಘಟನೆ ಅಮೆರಿಕಾದ ಟುಲ್ಸಾ ಓಕ್ಲಾ (TULSA, Okla)ದಲ್ಲಿ ನಡೆದಿದೆ. ಕ್ರಿಸ್‌ಮಸ್‌ ದಿನದಂದೇ ಈ ನಾಯಿಮರಿಗಳು ಸಿಕ್ಕಿವೆ. ಬದಿ ಬಿಟ್ಟಿದ್ದ ಐದು ನಾಯಿ ಮರಿಗಳ ಪೈಕಿ ನಾಲ್ಕು ನಾಯಿ ಮರಿಗಳನ್ನು ಪೊಲೀಸರು ದತ್ತು ಪಡೆದಿದ್ದಾರೆ. ಉಳಿದ ಒಂದು ನಾಯಿ ಮರಿಯನ್ನು ಸಮೀಪದಲ್ಲಿದ್ದ ಅಂಗಡಿಯೊಂದರ ಮಾಲೀಕರು ಮನೆಗೆ ತೆಗೆದುಕೊಂಡು ಹೋಗಿ ಆಶ್ರಯ ನೀಡಿದ್ದಾರೆ. 

ತಾವು ದತ್ತು ತೆಗೆದುಕೊಂಡ ನಾಯಿ ಮರಿಗಳೊಂದಿಗೆ ಪೊಲೀಸರು ಫೋಟೋ ತೆಗೆಸಿಕೊಂಡಿದ್ದು, ಅವುಗಳನ್ನು ಫೇಸ್‌ಬುಕ್‌(Facebook)ನಲ್ಲಿ ಪೋಸ್ಟ್‌ ( Facebook post) ಮಾಡಿದ್ದಾರೆ. ಈ ಮುದ್ದಾದ ನಾಯಿ ಮರಿಗಳನ್ನು ಜೀಪ್‌ ಇರುವ ಬ್ಯಾಗ್‌ವೊಂದರಲ್ಲಿ ತುಂಬಿಸಿ ಅಂಗಡಿಯೊಂದರ ಮುಂದೆ ಬಿಟ್ಟು ಹೋಗಲಾಗಿತ್ತು. ನೀವೇನಾದರೂ ಸಾಕುಪ್ರಾಣಿಗಳನ್ನು ಕೊಳ್ಳಲು ಬಯಸಿದ್ದರೆ ಇಲ್ಲಿ ದತ್ತು ಪಡೆಯಿರಿ, ಬೇರೆಡೆ ಕೊಳ್ಳಲು ಹೋಗಬೇಡಿ ಎಂದು ಫೇಸ್‌ಬುಕ್‌ ಫೋಸ್ಟ್‌ನಲ್ಲಿ ಪೊಲೀಸರು ಹೇಳಿದ್ದಾರೆ. ಸಾಕುಪ್ರಾಣಿಗಳ ಪುನರ್ವಸತಿ ಕೇಂದ್ರಗಳು ಈಗಾಗಲೇ ಪ್ರಾಣಿಗಳಿಂದ ಭರ್ತಿಯಾಗಿವೆ ಎಂದು ತಿಳಿದು ಬಂದಿದೆ. 

Pet Care: ಶ್ವಾನದ ಆರೈಕೆಗೆ ಅಶ್ವಗಂಧ, ಬೇವು ಪ್ರಯೋಜನಕಾರಿ

ಸಾಕುಪ್ರಾಣಿಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಮನೆಯಲ್ಲಿ ನಾಯಿ (Dog), ಬೆಕ್ಕು (Cat) ಅಂತ ಒಂದಿಷ್ಟು ಪೆಟ್ಸ್‌ಗಳನ್ನು ತಂದು ಸಾಕಿಕೊಳ್ಳುತ್ತಾರೆ. ಆದರೆ ಇವುಗಳ ಆರೈಕೆ ಹೇಗೆ ಅನ್ನೋದು ಹಲವರಿಗೆ ತಿಳಿದಿರದ ವಿಷಯ. ಅದರಲ್ಲೂ ಸಾಕುಪ್ರಾಣಿಗಳ ಆರೋಗ್ಯ (Health) ಕಾಪಾಡಲು ಆರ್ಯುವೇದದ ಮೂಲಿಕೆಗಳು ಉತ್ತಮ ಅನ್ನೋದು ನಿಮಗೆ ಗೊತ್ತಾ..?

ಶ್ವಾನ (Dog)ದಷ್ಟು ನಂಬಿಕೆ, ನಿಷ್ಠೆ ಹೊಂದಿರುವ ಪ್ರಾಣಿ ಬೇರೊಂದಿಲ್ಲ. ಹೀಗಾಗಿ ಹಲವು ಮನೆಗಳಲ್ಲಿ ಶ್ವಾನಗಳನ್ನು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಅವುಗಳ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸುವ ಮತ್ತು ಆರೋಗ್ಯಕರವಾಗಿರಲು ಮನೆ ಮಂದಿ ಯತ್ನಿಸುತ್ತಾರೆ. ಆದರೆ ಪ್ರಾಣಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಏನು ಮಾಡಬೇಕೆಂದು ಹಲವರಿಗೆ ತಿಳಿದಿರದ ವಿಷಯ. ಸೂಕ್ತ ವೈದ್ಯರಲ್ಲಿ ಕೊಂಡೊಯ್ಯಬಹುದಾದರೂ ಕೆಲವೊಂದು ಆರ್ಯುವೇದ ಮೂಲಿಕೆಗಳು ಸಹ ಪ್ರಾಣಿಗಳ ಆರೈಕೆಗೆ ನೆರವಾಗುತ್ತವೆ. ಅಶ್ವಗಂಧ, ಬೇವು ಮೊದಲಾದವುಗಳು ಸಾಕುಪ್ರಾಣಿಗಳ ಆರೈಕೆಗೆ ರಾಮಬಾಣಬಾಣವಾಗಿದೆ. ಅಶ್ವಗಂಧ (Ashwagandha) ಮತ್ತು ಬೇವು (Neem)ನಾಯಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ ತಿಳಿಯೋಣ..

Chhattisgarh: ಕರುಳ ಕುಡಿಯನ್ನು ಬೀದಿಗೆಸೆದ ಹೆತ್ತವ್ವ, ಕಂದನಿಗೆ ಕಾವಲು ನಿಂತ ಶ್ವಾನಗಳು!

ಅಶ್ವಗಂಧ ಆರ್ಯುವೇದ (Ayurveda)ದಲ್ಲಿಯೇ ಉನ್ನತ ಸ್ಥಾನವನ್ನು ಹೊಂದಿರುವ ಸಸ್ಯ. ಮನುಷ್ಯರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಉತ್ಪನ್ನಗಳಲ್ಲಿ ಅಶ್ವಗಂಧವನ್ನು ಬಳಸಲಾಗುತ್ತದೆ. ಅಶ್ವಗಂಧ ಸೇವಿಸುವುದರಿಂದ ಮಾನಸಿಕ ಒತ್ತಡ ನಿವಾರಣೆ, ಮೆದುಳಿನ ಸವೆತ, ನಿದ್ದೆ (Sleep)ಯ ಕೊರತೆ ಮೊದಲಾದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಾಗೆಯೇ ಶ್ವಾನಗಳ ಆರೋಗ್ಯಕ್ಕೂ ಅಶ್ವಗಂಧವನ್ನು ಬಳಸಬಹುದಾಗಿದೆ. ಅಶ್ವಗಂಧವು ಬ್ಯಾಕ್ಟೀರಿಯಾ (Bacteria) ವಿರೋಧಿ ಮತ್ತು ಆ್ಯಂಟಿಫಂಗಲ್‌ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಶ್ವಾನದ ದೇಹದಲ್ಲಿರುವ ಉಣ್ಣಿ ಮತ್ತು ಜಿಗಣೆಗಳನ್ನು ನೈಸರ್ಗಿಕ ಮತ್ತು ಸುರಕ್ಷಿತ ರೀತಿಯಲ್ಲಿ ಹಿಮ್ಮೆಟ್ಟಿಸುತ್ತದೆ. 

ಅಶ್ವಗಂಧದಲ್ಲಿ ಪ್ರಾಣಿಗಳನ್ನು ಶಾಂತಗೊಳಿಸುವ ಗುಣಲಕ್ಷಣಗಳಿದ್ದು, ಇದು ವಿವಿಧ ಅನಾರೋಗ್ಯವನ್ನು ಹೋಗಲಾಡಿಸುತ್ತದೆ. ನಾಯಿಗಳಲ್ಲಿರುವ ಭಯ ಅಥವಾ ಆತಂಕವನ್ನು ಹೋಗಲಾಡಿಸಲು ಸಹಾಯ (Help) ಮಾಡುತ್ತದೆ. ಅಶ್ವಗಂಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸುತ್ತದೆ: ನಾಯಿಗಳ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಶ್ವಾನದಿಂದ ಗೊತ್ತಾಯ್ತು ನಿಂತ ಶ್ವಾಸ... ಮಗುವಿನ ಜೀವ ಉಳಿಸಿದ Pet Dog

ಅಶ್ವಗಂಧ ಉರಿಯೂತದ ನೋವನ್ನು ನಿವಾರಿಸುತ್ತದೆ. ಸಾಕುಪ್ರಾಣಿಗಳಲ್ಲಿ ಕಂಡು ಬರುವ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳಲ್ಲಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಚರ್ಮದ ಸೋಂಕುಗಳು, ಅಲರ್ಜಿಗಳು, ಚರ್ಮದ ತುರಿಕೆಗಳನ್ನು ನೈಸರ್ಗಿಕವಾಗಿ ಹೋಗಲಾಡಿಸುತ್ತದೆ. ನರ ಮತ್ತು ಹೃದಯರಕ್ತನಾಳದ ವ್ಯವಸ್ಥೆಗಳ ಸಾಮಾನ್ಯ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ. ಒಟ್ಟಾರೆ ಆರ್ಯುವೇದದಲ್ಲಿ ಹೆಚ್ಚಿನ ಮಹತ್ವ ಹೊಂದಿರುವ ಅಶ್ವಗಂಧವು ನಾಯಿಯ ಒಟ್ಟಾರೆ ಆರೋಗ್ಯವನ್ನು ನಿಯಂತ್ರಣದಲ್ಲಿಡುತ್ತದೆ.