Asianet Suvarna News Asianet Suvarna News

ಶ್ವಾನದಿಂದ ಗೊತ್ತಾಯ್ತು ನಿಂತ ಶ್ವಾಸ... ಮಗುವಿನ ಜೀವ ಉಳಿಸಿದ Pet Dog

  • ಮಗುವಿನ ಜೀವ ಉಳಿಸಿದ ಶ್ವಾನ
  • ಸಮಯಪ್ರಜ್ಞೆ ಮೆರೆದ ಹೆನ್ರಿ
  • ಟ್ವಿಟ್ಟರ್‌ನಲ್ಲಿ ನಾಯಿಯ ಕಾರ್ಯಕ್ಕೆ ಶ್ಲಾಘನೆ
Babys Life Gets Saved Because of Familys Pet Dog akb
Author
Bangalore, First Published Dec 16, 2021, 1:20 PM IST

ಸಾಕುಪ್ರಾಣಿಗಳು ಮಾನವರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಅದರಲ್ಲೂ  ಶ್ವಾನಗಳ ಸ್ವಾಮಿನಿಷ್ಠೆಗೆ ಸರಿಸಾಟಿ ಯಾರು ಇಲ್ಲ. ಅನ್ನ ಹಾಕಿದ ಮನೆಗೆ ಎಂದಿಗೂ ಎರಡು ಬಗೆಯದ ಅವುಗಳು ಉಸಿರಿರುವವರೆಗೆ ಮಾನವನಿಗೆ ಋಣಿಯಾಗಿ ಇರುವವು. ಶ್ವಾನದ ನಿಯತ್ತಿನ ಬಗ್ಗೆ ಸಾಕಷ್ಟು ನಿದರ್ಶನಗಳು ಈಗಾಗಲೇ ಆಗಿ ಹೋಗಿವೆ. ಈಗ ಇಲ್ಲಿ ನಾವು ಹೇಳ ಹೊರಟಿರುವುದು ಕೂಡ ಸಮಯಪ್ರಜ್ಞೆ ತೋರಿದ ಶ್ವಾನದ ಬಗ್ಗೆ. ಇಲ್ಲೊಂದು ಶ್ವಾನ ಅಸ್ವಸ್ಥಗೊಂಡ ಮಗುವಿನ ಜೀವ ಉಳಿಸಿದೆ.

ಕೆಲ್ಲಿ ಆಂಡ್ರ್ಯೂ (Kelly Andrew)ಎಂಬುವವರು ತನ್ನ ನಾಯಿ ಹೆನ್ರಿ (Henry) ತನ್ನ ಮಗಳನ್ನು ಬದುಕಿಸಿರುವುದಾಗಿ ಹೇಳಿದ್ದಾರೆ. ತನ್ನ ಮಗು ಅನಾರೋಗ್ಯಕ್ಕಿಡಾಗಿದ್ದು, ಅವಳನ್ನು ಮಲಗಿಸಿದ್ದ ಸ್ಥಳಕ್ಕೆ ಹೋಗಿ ನಾಯಿ ಬೊಗಳುತ್ತಲೇ ಇತ್ತು. ಜೊತೆಗೆ ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತಲೇ ಇತ್ತು. ಆದರೆ ಮಗು ಅನಾರೋಗ್ಯಕ್ಕೀಡಾದ ಸಮಯದಲ್ಲಿ ಈ ನಾಯಿ ಹೀಗೆ ಬೊಗಳಿ ಆಕೆಗೆ ತೊಂದರೆ ಮಾಡುತ್ತಿದೆ ಎಂದು ನನಗೆ ನಾಯಿಯ ಬಗ್ಗೆಯೇ ಸಿಟ್ಟು ಬಂದಿತ್ತು. ಆದರೆ ಅದರಿಂದಲೇ ನನ್ನ ಮಗಳು ಬದುಕಿದಳು ಎಂಬುದು ನನಗೆ ಆಮೇಲೆ ಗೊತ್ತಾಯಿತು ಎಂದು ಕೆಲ್ಲಿ ಆಂಡ್ರ್ಯೂ ಹೇಳಿದ್ದಾರೆ. 

"ಕಳೆದ ರಾತ್ರಿ ನಾಯಿ ನರ್ಸರಿಗೆ ನುಗ್ಗಿ ಮಗುವನ್ನು ಎಚ್ಚರಗೊಳಿಸಿತು. ಅವಳು ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ನಾನು ಅವನೊಂದಿಗೆ( ನಾಯಿಯೊಂದಿಗೆ) ತುಂಬಾ ಬೇಸರಗೊಂಡಿದ್ದೆ. ಎಲ್ಲಿಯವರೆಗೆ ಎಂದರೆ ಅವಳು ಉಸಿರಾಡುವುದನ್ನು ನಿಲ್ಲಿಸುವವರೆಗೂ ಎಂದು ಆಂಡ್ರ್ಯೂ ಬರೆದುಕೊಂಡಿದ್ದಾರೆ. ನಾವು ಇಡೀ ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದೇವೆ. ಅವನು ಅವಳನ್ನು ಎಬ್ಬಿಸದಿದ್ದರೆ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ. ನಾವು ನಾಯಿಗಳ ಸ್ವಾಮಿನಿಷ್ಠೆಗೆ ಅರ್ಹರಲ್ಲ ಎಂದು ಆಕೆ ಹೇಳಿದ್ದಾರೆ. ನಂತರ, ಕೆಲ್ಲಿ ನಾಯಿ ಮತ್ತು ತನ್ನ ಮಗಳ ಆರೋಗ್ಯದ ಬಗ್ಗೆ ವಿವರಿಸಿದರು. ಮಗು ಇಂದು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಕತ್ತಲೆಯ ಭಯವಿದ್ದರೂ ರಾತ್ರಿಯಿಡೀ ಕೋಟೆಯನ್ನು ಧೈರ್ಯದಿಂದ ಕಾದ ಹೆನ್ರಿಯೊಂದಿಗೆ ನಾವು ಮನೆಯಲ್ಲಿದ್ದೇವೆ ಎಂದು ಹೇಳಿದರು.

 

ನಾಯಿ ಮಗುವನ್ನು ಎಚ್ಚರಿಸಿದ ಬಳಿಕ ಆಂಡ್ರ್ಯೂ ಹೋಗಿ ನೋಡಿದಾಗ ಮಗು ಉಸಿರಾಡಲು ಕಷ್ಟ ಪಡುತ್ತಿರುವುದು ಗೊತ್ತಾಗಿದೆ. ನಂತರ ಮಗುವಿನ ಆರೋಗ್ಯ ರಕ್ಷಣೆಗಾಗಿ ಕನೆಕ್ಟಿಕಟ್ ಮಕ್ಕಳ ಆಸ್ಪತ್ರೆಗೆ ಅವರು ಕರೆ ಮಾಡಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಿ ಮಗುವನ್ನು ಉಳಿಸಿಕೊಂಡಿದ್ದಾರೆ. ಆಂಡ್ರ್ಯೂ ತಮ್ಮ ನಾಯಿ ಹಾಗೂ ಮಗುವಿನ ಬಂಧದ ಬಗ್ಗೆ ಬರೆದು ಮಾಡಿದ ಫೋಸ್ಟ್‌  ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಇದಕ್ಕೆ 102.5 ಸಾವಿರಕ್ಕಿಂತಲೂ ಹೆಚ್ಚು ಲೈಕ್‌ಗಳು ಬಂದಿದ್ದು ಜೊತೆಗೆ 10,000 ಕ್ಕೂ ಹೆಚ್ಚು ರಿಟ್ವೀಟ್‌ ಆಗಿದೆ.

Birthday Celebration: ಪ್ರೀತಿಯ ಶ್ವಾನ 'ಗೋಪಿ' ಯ ಬರ್ತಡೇ ಆಚರಿಸಿದ ಸುಧಾಮೂರ್ತಿ..!

ಟ್ವಿಟ್ಟರ್‌ನಲ್ಲಿ ಇವರು ಮಾಡಿದ ಪೋಸ್ಟ್‌ನ ಕೆಳಭಾಗದಲ್ಲಿ ಜನರು ತಮ್ಮ ಸಾಕು ಪ್ರಾಣಿಗಳು ತಮ್ಮ ಜೀವಗಳನ್ನು ಹೇಗೆ ಉಳಿಸಿದವು ಎಂಬ ಬಗ್ಗೆ ಮತ್ತಷ್ಟು ಹೃದಯಸ್ಪರ್ಶಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಟ್ವಿಟ್ಟರ್‌ ಬಳಕೆದಾರರು ಅವರು ಹಠಾತ್ ಶಿಶು ಮರಣ ಸಿಂಡ್ರೋಮ್‌ನಿಂದ ಹೇಗೆ ಬದುಕುಳಿದರು ಎಂದು ಹೇಳಿದರು. ಹಲವು ವರ್ಷಗಳ ಹಿಂದೆ, ನನ್ನ ತೊಟ್ಟಿಲಲ್ಲಿ ನನ್ನೊಂದಿಗೆ ನಾವು ಸಾಕಿದ್ದ ಬೆಕ್ಕೊಂದು ಮಲಗುತ್ತಿತ್ತು. ಒಂದು ರಾತ್ರಿ ಬೆಕ್ಕು ಒಳಗೆ ಹೋಗಿ ನನ್ನ ಹೆತ್ತವರನ್ನು ಎಬ್ಬಿಸಲು ಪ್ರಯತ್ನಿಸಿತು. ಈ ವೇಳೆ ನನ್ನ ತಂದೆ ಬೆಕ್ಕನ್ನು ಹಲವು ಬಾರಿ ಬೆಡ್‌ನಿಂದ ಎಸೆದಿದ್ದರು. ಕೊನೆಗೆ ಬೆಕ್ಕು ಅವರನ್ನು ಎಳಿಸುವ ಸಲುವಾಗಿ ಅವರ ಎದೆಯ ಮೇಲೆ ಮೂತ್ರ ವಿಸರ್ಜನೆ ಮಾಡಿತು. ಬಳಿಕ ಹೊರಗೆ ಓಡಿ ಬಂದು ನಾನು ಇದ್ದಲ್ಲಿಗೆ ಅವರನ್ನು ಕರೆ ತಂದಿತ್ತು. ಈ ವೇಳೆ ನಾನು ಉಸಿರು ನಿಲ್ಲಿಸಿ ದೇಹ ನೀಲಿಯಾಗಿತ್ತು. ಕೂಡಲೇ ಅವರು ನನಗೆ ಚಿಕಿತ್ಸೆ ನೀಡಿ ಬದುಕಿಸಿದರು ಎಂದು ಅವರು ಬರೆದುಕೊಂಡಿದ್ದಾರೆ. 

Mangaluru Airport | ಭದ್ರತೆಗೆ ನಿಯೋಜನೆ ಗೊಂಡಿದ್ದ CISF ಪಡೆಯ ಲೀನಾ ಸಾವು

ಇನ್ನೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ,  ನನ್ನ  ನಾಯಿಯೊಂದು ರಾತ್ರಿಯಲ್ಲಿ ನನ್ನ ತಂದೆಯ ಮುಖವನ್ನು ನೋಡುತ್ತಾ ಮತ್ತು ಪದೇ ಪದೇ ನನ್ನನ್ನು ತಳ್ಳುತ್ತಾ ನನ್ನ ತಂದೆಯ ಕೋಣೆಗೆ ಏಕೆ ಹೋಗುತ್ತಿದೆ ಎಂದು ನಮಗೆ ಬಹಳ ಸಮಯದವರೆಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅವರು ಅವಳನ್ನು(ನಾಯಿಯನ್ನು) ದೂರ ತಳ್ಳುತ್ತಲೇ ಇದ್ದರು ಮತ್ತು ಅವಳು ಇನ್ನೂ ಅವರತ್ತಲೇ  ಸುತ್ತುತ್ತಿದ್ದಳು. ನಂತರ ಅವರು ಪೇಸ್‌ಮೇಕರ್ ( ಹೃದಯ ಬಡಿತವನ್ನು ನಿಯಂತ್ರಣದಲ್ಲಿ ಇಡಲು ಎದೆಯ ಭಾಗದಲ್ಲಿ ಅಳವಡಿಸುವ ಒಂದು ಯಂತ್ರ)  ಅನ್ನು ಹಾಕಿಕೊಂಡ ನಂತರ ಆಕೆ ಸುಮ್ಮನಾದಳು ಎಂದು ಬರೆದುಕೊಂಡಿದ್ದಾರೆ. 

ಒಟ್ಟಿನಲ್ಲಿ ನಾಯಿ ಹಾಗೂ ಮನುಷ್ಯನ ಅನುಬಂಧದ ಬಗ್ಗೆ ಬೇಕಾದಷ್ಟು ಉದಾಹರಣೆಗಳಿವೆ.

Follow Us:
Download App:
  • android
  • ios