ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಬ್ರಿಟನ್‌ ಹಾಗೂ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್| ರೂಪಾಂತರಿ ವೈರಸ್‌ ವಿರುದ್ಧವೂ ಫೈಝರ್‌ ಸಂಸ್ಥೆಯ ಕೊರೋನಾ ಲಸಿಕೆ ಪರಿಣಾಮಕಾರಿ ಆಗಬಲ್ಲದು

ವಾಷಿಂಗ್ಟನ್‌(ಜ.09): ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಬ್ರಿಟನ್‌ ಹಾಗೂ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್‌ ವಿರುದ್ಧವೂ ಫೈಝರ್‌ ಸಂಸ್ಥೆಯ ಕೊರೋನಾ ಲಸಿಕೆ ಪರಿಣಾಮಕಾರಿ ಆಗಬಲ್ಲದು ಎಂದು ನೂತನ ಅಧ್ಯಯನಗಳು ತಿಳಿಸಿವೆ. ಬ್ರಿಟನ್‌ ಹಾಗೂ ದಕ್ಷಿಣ ಆಫ್ರಿಕಾ ವೈರಸ್‌ಗಳು ಎನ್‌501ವೈ ಎಂಬ ಸಮಾನ ರೂಪಾಂತರಿ ಪ್ರಭೇದವನ್ನು ಒಳಗೊಂಡಿವೆ.

ಕೊರೋನಾ ವೈರಸ್‌ ಮೇಲ್ಭಾಗದಲ್ಲಿರುವ ಮುಳ್ಳಿನ ರೀತಿಯ ಪ್ರೊಟೀನ್‌ ಕಣಗಳಲ್ಲಿ ಕೆಲಮಟ್ಟಿನ ವ್ಯತ್ಯಾಸಗಳಿವೆ. ವಿಶ್ವದಲ್ಲಿ ಈಗ ಬಿಡುಗಡೆ ಆಗಿರುವ ಬಹುತೇಕ ಲಸಿಕೆಗಳು ಇಂತಹ ಪ್ರೋಟೀನ್‌ ಕಣಗಳನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.

ಆದರೆ, ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆದ ವೈರಸ್‌ಗೆ ಲಸಿಕೆ ಫಲ ನೀಡುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಟೆಕ್ಸಾಸ್‌ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಫೈಝರ್‌ ಸಂಸ್ಥೆಯ ಸಂಶೋಧಕರ ತಂಡ ಕೈಗೊಂಡ ಪ್ರಾಯೋಗಿಕ ಪರೀಕ್ಷೆಯ ವೇಳೆ ಲಸಿಕೆ ರೂಪಾಂತರಗೊಂಡ 15 ಪ್ರಭೇದಗಳ ಮೇಲೆ ಕಾರ್ಯನಿರ್ವಹಿಸಿರುವುದು ಕಂಡುಬಂದಿದೆ ಎಂದು ವರದಿ ತಿಳಿಸಿದೆ.