Covid Crisis: ಚೀನಾದ ಶೂನ್ಯ ಕೋವಿಡ್ ಸೂತ್ರ, ಜನರು ಲೋಹದ ಬಾಕ್ಸ್‌ನಲ್ಲಿ ಬಂಧಿ!

* ಕೊರೋನಾ ಪ್ರಕರಣ ನಿಯಂತ್ರಿಸಲು ಚೀನಾದ ವಿನೂತನ ಕ್ರಮ

* ಚೀನಾದ ಶೂನ್ಯ ಕೋವಿಡ್ ಸೂತ್ರ, ಜನರು ಲೋಹದ ಬಾಕ್ಸ್‌ನಲ್ಲಿ ಬಂಧಿ!

* ಡ್ರ್ಯಾಗನ್ ಹೊಸ ನೀತಿಗೆ ಗರ್ಭಿಣಿಗೆ ಗರ್ಭಪಾತ

People Forced To Live In Metal Boxes Under China Zero Covid Rule pod

ಬೀಜಿಂಗ್(ಜ.13): ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ ಇತರ ದೇಶಗಳಲ್ಲಿ ವಿವಿಧ ರೀತಿಯ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲಾಗುತ್ತಿದೆ. ಏತನ್ಮಧ್ಯೆ, ಪ್ರೋಟೋಕಾಲ್‌ಗಳನ್ನು ಅನುಸರಿಸುವಾಗ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದೇ ಸಮಯದಲ್ಲಿ, ಇಲ್ಲಿ ಕೊರೋನಾ ಹರಡುವುದನ್ನು ತಡೆಯಲು ಚೀನಾ ಅನುಸರಿಸುತ್ತಿರುವ ನೀತಿಯು ಜನರಿಗೆ ತೊಂದರೆ ಉಂಟುಮಾಡುವಂತಿದೆ.

ಚೀನಾ ತನ್ನ "ಶೂನ್ಯ ಕೋವಿಡ್" ನೀತಿಯಡಿಯಲ್ಲಿ ತನ್ನ ನಾಗರಿಕರ ಮೇಲೆ ಹಲವು ಕಠಿಣ ನಿಯಮಗಳನ್ನು ವಿಧಿಸಿದೆ. ಲಕ್ಷಾಂತರ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಜನರನ್ನು ಲೋಹದ ಪೆಟ್ಟಿಗೆಗಳಲ್ಲಿ ವಾಸಿಸಲು ಒತ್ತಾಯಿಸಲಾಗುತ್ತಿದೆ. ಬೀಜಿಂಗ್ ಮುಂದಿನ ತಿಂಗಳ ಚಳಿಗಾಲದ ಒಲಿಂಪಿಕ್ಸ್ ಅನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ ಎಂಬುವುದು ಉಲ್ಲೇಖನೀಯ.

ಡೈಲಿ ಮೇಲ್ ವರದಿ ಪ್ರಕಾರ, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಎರಡು ವಾರಗಳ ಕಾಲ ಈ ಇಕ್ಕಟ್ಟಾದ ಬಾಕ್ಸ್‌ಗಳಲ್ಲಿ ಇರಲು ಒತ್ತಾಯಿಸುತ್ತಿದ್ದಾರೆ. ಅವರ ಪ್ರದೇಶದಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಕಂಡುಬಂದರೂ ಹೀಗೆ ಮಾಡುವುದು ಅನಿವಾರ್ಯ. ಈ ಪೆಟ್ಟಿಗೆಗಳಲ್ಲಿ ಮರದ ಹಾಸಿಗೆಗಳು ಮತ್ತು ಶೌಚಾಲಯಗಳನ್ನು ಜೋಡಿಸಲಾಗಿದೆ. ಅನೇಕ ಪ್ರದೇಶಗಳಲ್ಲಿ ಮಧ್ಯರಾತ್ರಿಯ ನಂತರ ಜನರು ತಮ್ಮ ಮನೆಗಳನ್ನು ತೊರೆದು ಕ್ವಾರಂಟೈನ್ ಕೇಂದ್ರಗಳಿಗೆ ಹೋಗಬೇಕೆಂದು ಹೇಳಲಾಗಿದೆ ಎಂದು ಹೇಳಲಾಗುತ್ತಿದೆ.

ವರದಿಯ ಪ್ರಕಾರ, ಚೀನಾದಲ್ಲಿ ಸುಮಾರು 20 ಮಿಲಿಯನ್ ಜನರು ತಮ್ಮ ಮನೆಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ ಮತ್ತು ಆಹಾರವನ್ನು ಖರೀದಿಸಲು ಸಹ ತಮ್ಮ ಮನೆಗಳಿಂದ ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ. ಈ ಕಟ್ಟುನಿಟ್ಟಿನ ಲಾಕ್‌ಡೌನ್ ನಂತರ, ಗರ್ಭಿಣಿ ಚೀನೀ ಮಹಿಳೆಯೊಬ್ಬಳ ಗರ್ಭಪಾತವಾಯಿತು. ಆಕೆಯ ವೈದ್ಯಕೀಯ ಚಿಕಿತ್ಸೆ ತಲುಪಲು ವಿಳಂಬವಾಗಿದೆ. ಅಂದಿನಿಂದ ಚೀನಾದ ಶೂನ್ಯ ಕೋವಿಡ್ ನೀತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. 2019 ರಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂಬುವುದು ಉಲ್ಲೇಖನೀಯ. 

Latest Videos
Follow Us:
Download App:
  • android
  • ios