Asianet Suvarna News Asianet Suvarna News

ಉಗ್ರರಿಗೆ ಪಂಜ್‌ಶೀರ್‌ ಸಡ್ಡು: ಇಡೀ ಅಫ್ಘಾನ್ ಉಗ್ರರ ವಶವಾದರೂ, ಪಂಜ್‌ಶೀರ್‌ ಇನ್ನೂ ಸ್ವತಂತ್ರ!

* ಅಪ್ಪನಂತೆ ತಾಲಿಬಾನಿಗಳ ವಿರುದ್ಧ ಸಿಡಿದೆದ್ದ ಪುತ್ರ ಮಸೌದ್‌

* ಉಗ್ರರಿಗೆ ಸಡ್ಡು ಹೊಡೆದ ಪಂಜ್‌ಶೀರ್‌

* ಇಡೀ ದೇಶ ಉಗ್ರರ ವಶವಾದರೂ, ಪಂಜ್‌ಶೀರ್‌ ಇನ್ನೂ ಸ್ವತಂತ್ರ

 

Panjshir Valley A mountain the Taliban has so far failed to climb in hostile Afghanistan pod
Author
Bangalore, First Published Aug 21, 2021, 7:44 AM IST

 

ಕಾಬೂಲ್‌(ಆ.21): ಇಡೀ ಆಷ್ಘಾನ್‌ ರಾಜಕೀಯ ನಾಯಕರು, ಸೇನೆ ತಾಲಿಬಾನಿ ಉಗ್ರರಿಗೆ ಶರಣಾಗಿ ನಿಂತಿದ್ದರೆ ಇತ್ತ ಪಂಜ್‌ಶೀರ್‌ ಎಂಬ ಸಣ್ಣ ಕಣಿವೆಯೊಂದು ಮಾತ್ರ ಉಗ್ರರಿಗೆ ಸಡ್ಡು ಹೊಡೆಯುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದೆ. ದಶಕಗಳ ಹಿಂದೆ ತಮ್ಮ ಪ್ರಾಂತ್ಯವನ್ನು ರಕ್ಷಿಸಿಕೊಳ್ಳಲು ಹೇಗೆ ಅಹಮದ್‌ ಶಾ ಮಸೌದ್‌ ಹೋರಾಡಿ ಪ್ರಾಣ ತೆತ್ತಿದ್ದರೋ, ಇದೀಗ ಅವರ ಪುತ್ರರಾದ ಅಹಮದ್‌ ಮಸೌದ್‌ ಪಣ ತೊಟ್ಟು ಉಗ್ರರಿಗೆ ಸವಾಲು ಹಾಕಿದ್ದಾರೆ.

ಜೊತೆಗೆ, ಅಮೆರಿಕ ಸೇನೆ ತನಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದರೆ ತಂದೆಯಂತೆಯೇ ತಾಲಿಬಾನಿಗಳ ವಿರುದ್ಧ ಹೋರಾಡಲು ಸಿದ್ಧವಿರುವುದಾಗಿ ಘೋಷಿಸಿದ್ದಾನೆ. ಆತನ ಕೆಚ್ಚೆದೆಯ ಮಾತುಗಳು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಕಾಬೂಲ್‌ನಿಂದ 150 ಕಿ.ಮೀ ದೂರದಲ್ಲಿರುವ ಸಂಪೂರ್ಣ ಕಣಿವೆಯಿಂದ ಆವೃತ್ತವಾಗಿರುವ ಪಂಜ್‌ಶೀರ್‌ ಅನ್ನು ಈ ಹಿಂದೆ ಸೋವಿಯತ್‌ ಒಕ್ಕೂಟ ದಾಳಿ ಮಾಡಿದಾಗಲೂ ವಶಪಡಿಸಿಕೊಳ್ಳಲು ಆಗಿರಲಿಲ್ಲ. ಬಳಿಕ ತಾಲಿಬಾನಿಗಳು 90ರ ದಶಕದಲ್ಲಿ ದಾಳಿ ಮಾಡಿದಾಗಲೂ ಅದು ಅಷ್ಟೂವರ್ಷ ಸ್ವತಂತ್ರ್ಯವಾಗಿಯೇ ಇತ್ತು. ಈಗಲೂ ಅದು ಹಾಗೆಯೇ ಉಳಿಯುವ ಮೂಲಕ ಅಚ್ಚರಿ ಮೂಡಿಸಿದೆ. ಈ ಕಣಿವೆ ಪ್ರವೇಶಿಸಲು ಪಂಜ್‌ಶೀರ್‌ ನದಿ ಸಾಗುವ ಸಣ್ಣ ಮಾರ್ಗದ ಮೂಲಕವೇ ಬರಬೇಕು. ಅದು ಅಷ್ಟುಸುಲಭವಲ್ಲ. ಅದನ್ನು ರಕ್ಷಿಸಲು 1.50 ಲಕ್ಷದಷ್ಟಿರುವ ಜನರು ರೆಡಿಯಾಗಿದ್ದಾರೆ. ತಾಲಿಬಾನಿಗಳು ಪಶ್ತೂನ್‌ಗಳಾಗಿದ್ದರೆ, ಪಂಜ್‌ಶೀರ್‌ ಜನರು ತಜಕಿಸ್ತಾನದ ಬುಡಕಟ್ಟು ಸಮುದಾಯದವರು.

Follow Us:
Download App:
  • android
  • ios