Asianet Suvarna News Asianet Suvarna News

ದೀಪಾವಳಿ ಬದಲು ಹೋಳಿ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ!

*ಹಿಂದೂಗಳು ಬಹುಸಂಖ್ಯಾತರಾಗಿರುವ ಸಿಂಧ್ ಪ್ರಾಂತ್ಯ
*ಹೋಳಿ ಹಬ್ಬದ ಶುಭಾಶಯ ಕೋರಿದ ಸಿಂಧ್‌ ಮುಖ್ಯಮಂತ್ರಿ
*ದೀಪಾವಳಿಗೂ ಹೋಳಿಗೂ ವ್ಯತ್ಯಾಸ ಗೊತ್ತಿಲ್ಲವೇ? ಎಂದ ನೆಟ್ಟಿಗರು

Pakistans Sindh CM Murad Ali Shah Holi message on Diwali
Author
Bengaluru, First Published Nov 6, 2021, 8:05 AM IST
  • Facebook
  • Twitter
  • Whatsapp

ಪಾಕಿಸ್ತಾನ(ನ.6): ಭಾರತದಲ್ಲಿ ದೀಪಾವಳಿ (Diwali 2021) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ತಗ್ಗಿದೆ ಹಿನ್ನೆಲೆಯಲ್ಲಿ ದೀಪಾವಳಿ (Deepawali) ಹಬ್ಬವನ್ನು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ಸಡಗರದಿಂದ ಆಚರಿಸಲಾಗಿದೆ. ಭಾರತ ಸೇರಿದಂತೆ ಜಗತ್ತಿನ ಇತ ರಾಷ್ಟ್ರಗಳಲ್ಲೂ ಕೂಡ ದೀಪಾವಳಿ ಆಚರಿಸಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಅಮೆರಿಕ (America) ಅಧ್ಯಕ್ಷ ಜೋ ಬಿಡೆನ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್, ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಹಲವಾರು ನಾಯಕರು ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದರು.

ಈ ಮಧ್ಯೆ ಪಾಕಿಸ್ತಾನದ (Pakistan) ಸಿಂಧ್ ಮುಖ್ಯಮಂತ್ರಿ ಶುಭಾಶಯ ಕೋರಿರುವ ಟ್ವೀಟ್‌ ಈಗ ಎಲ್ಲೆಡೆ ವೈರಲ್‌ ಆಗಿದೆ. ಪಾಕಿಸ್ತಾನದ ಸಿಂದ್‌ (Sindh) ಪ್ರಾಂತ್ಯ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ (Hindu) ಪ್ರದೇಶವಾಗಿದೆ. ಆದರೆ ಪಾಕಿಸ್ತಾನದ ಸಿಂಧ್ ಮುಖ್ಯಮಂತ್ರಿ ಜನರಿಗೆ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಲು ಹೋಗಿ ಹೋಳಿ ಹಬ್ಬದ ಶುಭಾಶಯ ಕೊರಿದ್ದಾರೆ. ಈ ಟ್ವೀಟ್‌ ಈಗ ವೈರಲ್‌ ಆಗಿದೆ.

ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚು ಎಲನ್‌ ಮಸ್ಕ್‌ ಸಂಪತ್ತು!

ದೀಪಾವಳಿ  ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಹಲವಾರು ನಾಯಕರು ಮತ್ತು ರಾಜಕಾರಣಿಗಳು ಜನರಿಗೆ ಶುಭ ಹಾರೈಸಲು  ದೀಪಾವಳಿ ಸಂದೇಶಗಳನ್ನು ಪೋಸ್ಟ್ ಮಾಡಿದರು. ಆದಾಗ್ಯೂ, ನೆಟ್ಟಿಗರ ಗಮನವನ್ನು ಸೆಳೆದದ್ದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿಯ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಿದ ಟ್ವೀಟ್. ದೀಪಾವಳಿಯಂದು, ಮುಖ್ಯಮಂತ್ರಿ ಮುರಾದ್ ಅಲಿ ಷಾ (Murad Ali Shah) ಅವರ ಟ್ವಿಟ್ಟರ್ ಖಾತೆಯಲ್ಲಿ ಅವರ ಫೋಟೋವನ್ನು ಹಂಚಿಕೊಳ್ಳಲಾಗಿದೆ ಮತ್ತು ಅದರ ಮೇಲೆ "ಹ್ಯಾಪಿ ಹೋಳಿ" ಎಂದು ಬರೆಯಲಾಗಿದೆ. ಆದರೆ ಇದು ಹೋಳಿ ಹಬ್ಬವಲ್ಲ, ದೀಪಾವಳಿ ಹಬ್ಬ ಎಂದು ನೆಟ್ಟಿಗರು ಎಚ್ಚರಿಸುತಿದ್ದಂತೆಯೇ ಪೋಸ್ಟ್‌ ಡಿಲೀಟ್‌ ಮಾಡಲಾಗಿದೆ. ಆದರೆ ದೀಪಾವಳಿ ಸಂದರ್ಭದಲ್ಲಿ ಹೋಳಿ ಹಬ್ಬದ ಶುಭಾಶಯ ಕೋರಿದ ಮುಖ್ಯಮಂತ್ರಿ ಟ್ವೀಟ್‌ ಸ್ಕ್ರೀನ್‌ಶಾಟ್ ಈಗ ಎಲ್ಲಡೆ ವೈರಲ್‌ ಆಗಿದೆ.

ದೀಪಾವಳಿ 2021: ಈ ಕಾರಣಕ್ಕೆ ಈ ಬಾರಿ ಬಾಲಿವುಡ್‌ನಲ್ಲಿ ಗ್ರ್ಯಾಂಡ್‌ ಸೆಲೆಬ್ರೆಷನ್‌ ಇಲ್ಲ

ಪಾಕಿಸ್ತಾನ ಮೂಲದ ಪತ್ರಕರ್ತ ಮುರ್ತಾಜಾ ಸೋಲಂಗಿ (Murtaza Solangi) ಅವರು ಈಗ ಡೀಲಿಟ್‌ ಮಾಡಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್ (Screen Shot)ಅನ್ನು ಹಂಚಿಕೊಂಡಿದ್ದಾರೆ. "ಪಾಕಿಸ್ತಾನದಲ್ಲಿ ಸಿಂಧ್ ಹಿಂದೂಗಳು ಬಹುಸಂಖ್ಯಾತರಾಗಿರುವ ಪ್ರದೇಶ.  ಸಿಂಧ್‌ನಲ್ಲಿರುವ ಸಿಎಂ ಭವನದ ಸಿಬ್ಬಂದಿಗೆ ದೀಪಾವಳಿ ಮತ್ತು ಹೋಳಿ ನಡುವಿನ ವ್ಯತ್ಯಾಸ ತಿಳಿಯದಿದ್ದರೆ ಅದು ಅತ್ಯಂತ ಶೋಚನಿಯ. ಇದರಿಂದ ನಿಜಕ್ಕೂ ದುಃಖವಾಗಿದೆ ಎಂದು  ಮುರ್ತಾಜಾ ಸೋಲಂಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗಿದ್ದು ಹಲವರು ಟ್ವೀಟ್‌ ಬಗ್ಗೆ ವ್ಯಂಗ್ಯ ಮಾಡಿದರೆ ಇನ್ನೂ ಕೆಲವರು ಮುಖ್ಯಮಂತ್ರಿಗಳ ನಿರ್ಲಕ್ಷ್ಯತನಕ್ಕೆ ಕೀಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆಯೇ ಖಾತೆಯಿಂದ ಟ್ವೀಟ್‌ ಡಿಲೀಟ್‌ ಮಾಡಲಾಗಿದೆ. 

 

 

ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ (ನವೆಂಬರ್ 4) ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ನೌಶೇರಾ ಸೆಕ್ಟರ್‌ಗೆ (Nowshera sector) ಆಗಮಿಸಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ದೆಹಲಿಯಿಂದ (Delhi) ಬೆಳಗ್ಗೆ 7:30ಕ್ಕೆ  ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ ಪ್ರಧಾನಿ ಮೋದಿ, ಕನಿಷ್ಠ ಭದ್ರತಾ ವ್ಯವಸ್ಥೆಗಳು ಮತ್ತು ಯಾವುದೇ ಸಂಚಾರ ನಿರ್ಬಂಧಗಳಿಲ್ಲದೇ ರಾಜೌರಿಯ ನೌಶೇರಾ ಸೆಕ್ಟರ್‌ಗೆ ತಲುಪಿದ್ದಾರೆ. ಗಡಿ ಕಾಯುವ ಸೈನಿಕರಿಗೆ ಸಿಹಿ ತಿನಿಸುವ ಮೂಲಕ ದೀಪಾವಳಿ ಶುಭಾಶಯ ಕೋರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ (Jammu and Kasmir) ರಜೌರಿಯ ಗಡಿ ಜಿಲ್ಲೆಯ ನೌಶೇರಾ ತಲುಪಿದ ಪ್ರಧಾನಿ, ಅಲ್ಲಿನ ಯೋಧರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ತನ್ನೊಂದಿಗೆ ತಂದಿದ್ದೇನೆ ಎಂದು ಹೇಳಿದ್ದಾರೆ. "ನಮ್ಮ ಸೈನಿಕರು 'ಮಾ ಭಾರತಿ'ಯ 'ಸುರಕ್ಷಾ ಕವಚ'. ನಿಮ್ಮೆಲ್ಲರಿಂದಾಗಿ ನಮ್ಮ ದೇಶದ ಜನರು ಶಾಂತಿಯುತವಾಗಿ ಮಲಗಲು ಮತ್ತು ಹಬ್ಬಗಳ ಸಮಯದಲ್ಲಿ ಸಂತೋಷವಾಗಿರಲು ಸಾಧ್ಯ. "ನಿಮ್ಮ ಸಾಮರ್ಥ್ಯ ಹಾಗೂ ಶಕ್ತಿಯು ದೇಶದ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ" ಎಂದು ಪ್ರಧಾನಿ ಹೇಳಿದ್ದಾರೆ.

Follow Us:
Download App:
  • android
  • ios