ಇದೆಂಥಾ ಪದ್ಧತಿ/ ಅಳಿಯನಿಗೆ ರೈಫಲ್ ಗಿಫ್ಟ್ ಕೊಟ್ಟ ಅತ್ತೆ/ ಪಾಕಿಸ್ತಾನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್/ ತರೇವಾರಿ ಪ್ರತಿಕ್ರಿಯೆ
ಇಸ್ಲಾಮಾಬಾದ್(ನ. 27) ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ವಿವಿಧ ಉಡುಗೊರೆ ನೀಡುವುದು ನಮ್ಮ ವಾಡಿಕೆ. ಆದರೆ ಪಾಕಿಸ್ತಾನದ ಕತೆ ಮಾತ್ರ ಭಿನ್ನ.
ಆರತಕ್ಷತೆ ಸಂದರ್ಭ ವಧುವಿನ ತಾಯಿ ಹೊಸ ಅಳಿಯನಿಗೆ ಮುತ್ತಿನ ಜತೆ ಬಂದೂಕು ಕೊಟ್ಟಿದ್ದಾರೆ. ವೇದಿಕೆಯಲ್ಲೆ ಅಳಿಯನ ಚುಂಬಿಸುವ ಅತ್ತೆ ಎಕೆ 47 ಬಂದೂಕನ್ನು ಕೊಟ್ಟು ಯುದ್ಧಕ್ಕೆ ಸಿದ್ಧನಾಗು ಎಂಬಂತೆ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ಫುಲ್ ವೈರಲ್.
ಪಾಕಿಸ್ತಾನದಲ್ಲಿ ಕೊರೋನಾ ಎರಡನೇ ಅಲೆ
ಪಾಕಿಸ್ತಾನಿಯರು ಇದು ನಮ್ಮಲ್ಲಿ ಬಲು ಕಾಮನ್ ಎಂದು ಭೂಜ ತಟ್ಟಿಕೊಂಡಿದ್ದಾರೆ. ಇಮಥ ಕೆಟ್ಟ ಪದ್ಧತಿಗಳಿಂದಲೇ ಪಾಕಿಸ್ತಾನದಲ್ಲಿ ಭಯೋತ್ಪಾದನೆ ಮನೆ ಮಾಡಿದೆ ಎಂದು ಕಮೆಂಟ್ ಗಳು ಬಂದಿವೆ.
ಪಾಕಿಸ್ತಾನದಲ್ಲಿ ಆಯುಧಗಳನ್ನು ಹೊಂದಲು ಯಾವ ನೀತಿ ನಿಯಮಗಳು ಇಲ್ಲವೇ? ಅಲ್ಲಿನ ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.
