ಯುರೋಪ್ ರಾಷ್ಟ್ರಗಳ ಬಳಿಕ ಇದೀಗ ಪಾಕಿಸ್ತಾನದಲ್ಲಿ ಕೊರೋನಾ ವೈರಸ್‌ನ ಎರಡನೇ ಅಲೆ ಆರಂಭ| ಪಾಕಿಸ್ತಾನದಲ್ಲಿ ಈಗ ನಿತ್ಯ 3 ಸಾವಿರಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು
ಕರಾಚಿ(ನ.27): ಯುರೋಪ್ ರಾಷ್ಟ್ರಗಳ ಬಳಿಕ ಇದೀಗ ಪಾಕಿಸ್ತಾನದಲ್ಲಿ ಕೊರೋನಾ ವೈರಸ್‌ನ ಎರಡನೇ ಅಲೆ ಆರಂಭವಾಗಿದೆ. ಪಾಕಿಸ್ತಾನದಲ್ಲಿ ಈಗ ನಿತ್ಯ 3 ಸಾವಿರಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದು, ಆಸ್ಪತ್ರೆಗಳು ಬಹುತೇಕ ಭರ್ತಿ ಆಗಿವೆ.
ಮುಂದಿನ ಎರಡು ವಾರಗಳು ಅತ್ಯಂತ ಮಹತ್ವದ್ದಾಗಿದ್ದು, ಪರಿಸ್ಥಿತಿ ಇನ್ನಷ್ಟುಹದಗೆಡಲಿದೆ. ಶೇ.95ರಷ್ಟುಹಾಸಿಗೆಗಳು ಈಗಾಗಲೇ ಭರ್ತಿ ಆಗಿದ್ದು, ಕೆಲವೇ ಆಸ್ಪತ್ರೆಗಳಲ್ಲಿ ಮಾತ್ರ ಹಾಸಿಗೆ ವ್ಯವಸ್ಥೆ ಇದೆ’ ಎಂದು ಪಾಕಿಸ್ತಾನ ವೈದ್ಯಕೀಯ ಒಕ್ಕೂಟದ ಕಾರ್ಯದರ್ಶಿ ಖೈಸರ್ ಸಜ್ಜದ್ ತಿಳಿಸಿದ್ದಾರೆ.
26/11 ಮುಂಬೈ ದಾಳಿಯ ಸಂತ್ರಸ್ತರಿಗೆ ಇಸ್ರೇಲ್ ಜನರ ಗೌರವ..! ಪಾಕಿಸ್ತಾನ ಭಯೋತ್ಪಾದನೆ ಖಂಡನೆ
ಪಾಕಿಸ್ತಾನದಲ್ಲಿ ಜೂ.14ರಂದು ಅತ್ಯಧಿಕ 6183 ಕೊರೋನಾ ಪ್ರಕಣಗಳು ದಾಖಲಾಗಿದ್ದವು. ಆ ಬಳಿಕ ಸೋಂಕಿನ ಪ್ರಮಾಣ 500ರ ಆಸುಪಾಸಿಗೆ ಇಳಿಕೆ ಆಗಿತ್ತು. ಹೀಗಾಗಿ ಕೊರೋನಾ ವೈರಸ್ ದೇಶದಲ್ಲಿ ಕ್ಷೀಣಿಸಿತು ಎಂದು ಜನರು ಭಾವಿಸಿದ್ದರು. ಆದರೆ, ಕಳೆದ ಎರಡು ವಾರಗಳಿಂದ ಸೋಂಕಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 27, 2020, 11:04 AM IST