ಇಸ್ಲಾಮಾಬಾದ್‌ (ಅ.24): ಭಾರತದ ಪ್ರಧಾನಿ ನರೇಂದ್ರ ಮೋದಿ ಮೇಲೆ ಹಾವಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್‌ ಗಾಯಕಿ ಹಾಗೂ ನಟಿ ರಬಿ ಪಿರ್ಜಾದಾ ಇದೀಗ ಮೋದಿ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾಳೆ. 

ಮೈ ಮೇಲೆ ಕಪ್ಪು ಸುಸೈಡ್‌ ಜಾಕೆಟ್‌ ಧರಿಸಿರುವ ಫೋಟೋವೊಂದನ್ನು ಟ್ವೀಟ್‌ ಮಾಡಿರುವ ಪಿರ್ಜಾದಾ, ಕಾಶ್ಮೀರದ ಹುಡುಗಿಯಾಗಿ ಹಿಟ್ಲರ್‌ ಮೋದಿಯನ್ನು ಅಪ್ಪಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾಳೆ.

ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!...

ಪಿರ್ಜಾದಾ ಈ ಮುನ್ನ ಹಾವುಗಳನ್ನು ಕೈಯಲ್ಲಿ ಹಿಡಿದುಕೊಂದು ಅವುಗಳನ್ನು ಮೋದಿಗೆ ಉಡುಗೊರೆ ನೀಡುವುದಾಗಿ ವಿಡಿಯೋವೊಂದನ್ನು ಟ್ವೀಟ್‌ ಮಾಡಿದ್ದಳು. ಆದರೆ ಮನೆಯಲ್ಲಿ ಅಕ್ರಮವಾಗಿ ಹಾವುಗಳನ್ನು ಸಾಕಿದ್ದಕ್ಕಾಗಿ ಅವಳ ವಿರುದ್ಧ ಪಾಕ್‌ ಅಧಿಕಾರಿಗಳು ಕೇಸು ದಾಖಲಿಸಿದ್ದರು.