* ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ* ಅಫ್ಘಾನಿಸ್ತಾನಕ್ಕೆ ವಿಮಾನ ಸೇವೆಯನ್ನು ಪಾಕಿಸ್ತಾನ ಸರ್ಕಾರ ತಾತ್ಕಾಲಿಕವಾಗಿ ರದ್ದು
ಇಸ್ಲಾಮಾಬಾದ್(ಆ.23): ತಾಲಿಬಾನ್ ಉಗ್ರರಿಂದ ಅರಾಜಕತೆ ಸೃಷ್ಟಿಯಾಗಿರುವ ನೆರೆಯ ಅಷ್ಘಾನಿಸ್ತಾನಕ್ಕೆ ವಿಮಾನ ಸೇವೆಯನ್ನು ಪಾಕಿಸ್ತಾನ ಸರ್ಕಾರ ತಾತ್ಕಾಲಿಕವಾಗಿ ರದ್ದು ಮಾಡಿದೆ. ಅಲ್ಲದೆ ಅಷ್ಘಾನಿಸ್ತಾನದಲ್ಲಿ ಸಿಲುಕಿದ ಪಾಕಿಸ್ತಾನದ ಪ್ರಜೆಗಳನ್ನು ಸುರಕ್ಷಿತವಾಗಿ ಕರತರುವ ಕಾರ್ಯಾಚರಣೆಗೂ ತಡೆಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಸಂಸ್ಥೆಯು ಆಫ್ಘನ್ ಮತ್ತು ಪಾಕಿಸ್ತಾನಕ್ಕೆ ವಿಮಾನ ಸೇವೆ ಕಲ್ಪಿಸುತ್ತಿದ್ದು, ಕಳೆದೊಂದು ವಾರದಿಂದಲೂ ಪಾಕಿಸ್ತಾನ ಪ್ರಜೆಗಳನ್ನು ರಕ್ಷಣೆ ಮಾಡುತ್ತಿದೆ. ಆದರೆ ತಾಲಿಬಾನ್ ಉಗ್ರರ ಬೆದರಿಕೆಯಿಂದಾಗಿ ನಿಲ್ದಾಣಕ್ಕೆ ಸ್ವಚ್ಛತಾ ಕೆಲಸಗಾರರು ಬರುತ್ತಿಲ್ಲ.
ಹಾಗಾಗಿ ಆಫ್ಘನ್ ವಿಮಾನ ನಿಲ್ದಾಣಗಳು ಕಸದ ರಾಶಿಗಳಿಂದಲೇ ತುಂಬಿ ತುಳುಕುತ್ತಿದ್ದು, ಇದರಿಂದ ವಿಮಾನ ಅಪಘಾತಕ್ಕೀಡಾಗುವ ಭೀತಿಯಿದೆ. ಅಲ್ಲದೆ ಅಷ್ಘಾನಿಸ್ತಾನದಲ್ಲಿ ಭದ್ರತೆ ಸೇರಿದಂತೆ ಯಾವುದೇ ಸೌಕರ್ಯಗಳು ಸಿಗುತ್ತಿಲ್ಲ. ಹೀಗಾಗಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎನ್ನಲಾಗಿದೆ.
