ಪಾಕಿಸ್ತಾನದ ಬಳಿ ಯಾವುದೇ ರೀತಿಯ ಮಾತುಕತೆ ನಡೆಸದಿರಲು ಭಾರತ ನಿರ್ಧರಿಸಿದೆ. ಜೈಶ್ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಕೂಡ ಮಾತುಕತೆ ನಡೆಸದಿರಲು ತೀರ್ಮಾನಿಸಿದೆ.
ನವದೆಹಲಿ: ಮಾತುಕತೆಗೆ ಬನ್ನಿ, ಮಾತುಕತೆಗೆ ಬನ್ನಿ ಎಂದು ಅಂಗಲಾಚುತ್ತಿದ್ದರೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜತೆ ಮಾತುಕತೆಗೆ ಭಾರತ ಸದ್ಯ ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ.
ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರ ವಿರುದ್ಧ ತಕ್ಷಣವೇ, ವಿಶ್ವಾಸಾರ್ಹ ಹಾಗೂ ನಂಬುವಂತಹ ಕ್ರಮಗಳನ್ನು ಪಾಕಿಸ್ತಾನ ಕೈಗೊಳ್ಳಬೇಕು.
ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗೂ ತಕ್ಕ ಶಾಸ್ತಿ ಮಾಡಬೇಕು. ಅದಾಗದ ಹೊರತು ಮಾತುಕತೆ ಇಲ್ಲ ಎಂಬುದು ಭಾರತದ ನಿಲುವಾಗಿದೆ ಎಂದು ಮೂಲಗಳು ತಿಳಿಸಿವೆ.
