ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಪ್ರಮಾಣ ಪತ್ರ ಸಿಗದಬೇಕಾದರೆ ಖುರಾನ್ ಪಠಣ ಹಾಗೂ ಉರ್ದು ತರ್ಜುಮೆ ಕಡ್ಡಾಯ| ಆದೇಶ ಹೊರಡಿಸಿರುವ ಪಂಜಾಬ್ ಪ್ರಾಂತ್ಯದ ಗೌರ್ನರ್ ಚೌಧರಿ ಮೊಹಮ್ಮದ್ ಸರ್ವರ್,
ಲಾಹೋರ್(ಜೂ.16): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಪ್ರಮಾಣ ಪತ್ರ ಸಿಗದಬೇಕಾದರೆ ವಿದ್ಯಾರ್ಥಿಗಳು ಖುರಾನ್ ಪಠಣ ಹಾಗೂ ಉರ್ದು ತರ್ಜುಮೆ ಕಡ್ಡಾಯವಾಗಿ ಬಲ್ಲವರಾಗಿರಬೇಕು ಎಂದು ನಿಯಮ ರೂಪಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಪಂಜಾಬ್ ಪ್ರಾಂತ್ಯದ ಗೌರ್ನರ್ ಚೌಧರಿ ಮೊಹಮ್ಮದ್ ಸರ್ವರ್, ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪಡೆಯಬೇಕಾದರೆ ಎಲ್ಲಾ ವಿದ್ಯಾರ್ಥಿಗಳು (ಮುಸ್ಲೀಮೇತರ ವಿದ್ಯಾರ್ಥಿಗಳನ್ನು ಹೊರತು ಪಡಿಸಿ) ಕಡ್ಡಾಯವಾಗಿ ಖುರಾನ್ ಪಠಣ ಹಾಗೂ ಉರ್ದು ತರ್ಜುಮೆ ಕಲಿತಿರಬೇಕು ಎಂದಿದ್ದಾರೆ.
ಪ್ರಾಧ್ಯಾಪಕರೇ ಇದನ್ನು ಕಲಿಸಲಿದ್ದು, ಈಗಾಗಲೇ ಇರುವ ಇಸ್ಲಾಮಿಕ್ ಪಠ್ಯಪುಸ್ತಕದಿಂದ ಇದು ಹೊರತಾಗಿರಲಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.
