ಪಾಕಿಸ್ತಾನ(ಅ.27):  ಫ್ರಾನ್ಸ್ ಅಧ್ಯಕ್ಷರ ಧರ್ಮನಿಂದನೆ ವಿರುದ್ಧ ಪಾಕಿಸ್ತಾನ  ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆಯ ಗಂಭೀರತೆಯನ್ನು ವಿಶ್ವಕ್ಕೆ ಸಾರಲು ಹೊರಟ ಪಾಕಿಸ್ತಾನ ನಗೆಪಾಟಲಿಗೀಡಾಗಿದೆ. ಧರ್ಮನಿಂದನೆಯ ವಿರುದ್ಧ ಪ್ರತಿಭಟನೆಯ ಭಾಗವಾಗಿ ಪಾಕಿಸ್ತಾನ ರಾಷ್ಟೀಯ ಅಸೆಂಬ್ಲಿ ಸರ್ವಾನುಮತದಿಂದ, ಫ್ರಾನ್ಸ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ವಾಪಸ್ ಕರೆಸಿಕೊಳ್ಳಲು ನಿರ್ಣಯ ಮಾಡಲಾಗಿದೆ. ಆದರೆ ಫ್ರಾನ್ಸ್‌ನಲ್ಲಿ ಪಾಕಿಸ್ತಾನ ರಾಯಭಾರಿಯೇ ಇಲ್ಲ ಅನ್ನೋ ವಿಚಾರ ಅಸೆಂಬ್ಲಿಯ ಒಬ್ಬಿರಿಗೂ ತಿಳಿದೇ ಇಲ್ಲ. 

ಉಗ್ರರ ಪೋಷಣೆ ನಿಲ್ಲಿಸಲು ಪಾಕ್ ವಿಫಲ; ಗ್ರೇ ಪಟ್ಟಿಯಲ್ಲಿ ಪಾಕಿಸ್ತಾನ ವಿಲ ವಿಲ!

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಸದ್ಯ ಯಾವುದೇ ಅಧಿಕಾರಿ ಇಲ್ಲ. 3 ತಿಂಗಳ ಹಿಂದೆ ಫ್ರಾನ್ಸ್‌ನಲ್ಲಿದ್ದ ಪಾಕ್ ರಾಯಭಾರಿ ಮೊಯಿನ್ ಉಲ್ ಹಕ್ ಅವರನ್ನು ಚೀನಾಗೆ ವರ್ಗಾವಣೆ ಮಾಡಲಾಗಿತ್ತು.  ಬಳಿಕ ಫ್ರಾನ್ಸ್‌ಗೆ ಯಾವುದೇ ರಾಯಭಾರಿ ನೇಮಕ ಮಾಡುವಲ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಹಿಂದೇಟು ಹಾಕಿತ್ತು. ಆದರೆ ಇದ್ಯಾವುದರ ಪರಿವೇ ಇಲ್ಲದೆ ಅಸೆಂಬ್ಲಿ ಗಂಭೀರ ಚರ್ಚೆ, ಕಾಲಹರಣ ಮಾಡಿ ಸರ್ಕಾರಕ್ಕೆ ರಾಯಭಾರಿ ವಾಪಸ್ ಕರೆಸಿಕೊಳ್ಳಲು ಆಗ್ರಹಿಸಿದೆ.

ಪಾಕ್‌ ಸೇನೆಯಿಂದ ಹೈಡ್ರಾಮಾ:ಸಿಡಿದೆದ್ದ ಪೊಲೀಸರು!

ವಿಶೇಷ ಅಂದರೆ ಅಸೆಂಬ್ಲಿಯಲ್ಲಿ ನಡೆದ ಚರ್ಚೆ ಹಾಗೂ ಸರ್ವಾನುಮತದ ನಿರ್ಣಯದಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಶಿ ಕೂಡ ಹಾಜರಿದ್ದರು. ಫ್ರಾನ್ಸ್ ರಾಯಭಾರಿ ಹುದ್ದೆ ಖಾಲಿ ಇರುವ ಕುರಿತ ಮಾಹಿತಿ ಇದ್ದರೂ, ಅಸೆಂಬ್ಲಿ ಚರ್ಚೆಯಲ್ಲಿ ಮಾಹಿತಿ ಬಹಿರಂಗ ಪಡಿಸಲಿಲ್ಲ. ಫ್ರಾನ್ಸ್‌ನಲ್ಲಿನ ರಾಜತಾಂತ್ರಿಕ ಕಾರ್ಯಗಳನ್ನು ರಾಯಭಾರಿ ಕಚೇರಿ ಉಪಮುಖ್ಯಸ್ಥ ಮೊಹಮ್ಮದ್ ಅಮ್ಜದ್ ಅಜೀಜ್ ನೋಡಿಕೊಳ್ಳುತ್ತಿದ್ದಾರೆ ಎಂದು ಪಾಕ್ ಮಾಧ್ಯಮಕ್ಕೆ ಪಾಕ್ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ.