ನವದೆಹಲಿ(ಆ.21): ಭಾರತದ ಜತೆಗೆ ಈವರೆಗೆ ನಡೆದಿರುವ ನಾಲ್ಕು ಯುದ್ಧಗಳ ಪೈಕಿ ಒಂದನ್ನೂ ಗೆಲ್ಲದಿದ್ದರೂ ಪಾಕಿಸ್ತಾನದ ಯುದ್ಧೋನ್ಮಾದ ಮಾತ್ರ ಕಡಿಮೆಯಾಗಿಲ್ಲ. ಒಂದು ವೇಳೆ, ಭಾರತವೇನಾದರೂ ದಾಳಿ ಮಾಡಿದರೆ ಅಣು ಯುದ್ಧ ಗ್ಯಾರಂಟಿ ಎಂದು ಪಾಕಿಸ್ತಾನ ಮತ್ತೆ ಗೊಡ್ಡು ಬೆದರಿಕೆ ಒಡ್ಡಿದೆ.

ಪಾಕ್-ಚೀನಾ ಕಣ್ತಪ್ಪಿಸಿ ಲಡಾಖ್‌ಗೆ ಭಾರತದಿಂದ ರಹಸ್ಯ ರಸ್ತೆ ಮಾರ್ಗ

‘ಪಾಕಿಸ್ತಾನದ ಮೇಲೆ ಭಾರತ ಏನಾದರೂ ದಾಳಿ ನಡೆಸಿದರೆ ಸಾಂಪ್ರದಾಯಿಕ ಯುದ್ಧಕ್ಕೆ ಅವಕಾಶವೇ ಇಲ್ಲ. ಏನಿದ್ದರೂ ರಕ್ತಸಿಕ್ತ ಹಾಗೂ ಅಣ್ವಸ್ತ್ರ ಯುದ್ಧವೇ. ಅಣ್ವಸ್ತ್ರ ಯುದ್ಧ ಖಚಿತ. ನಮ್ಮಲ್ಲಿ ಸಣ್ಣ ಹಾಗೂ ನಿಖರವಾದ ಅತ್ಯಂತ ಲೆಕ್ಕಾಚಾರದ ಶಸ್ತಾ್ರಸ್ತ್ರಗಳು ಇವೆ. ಅವು ಮುಸ್ಲಿಮರ ಜೀವ ಉಳಿಸಲಿವೆ. ಭಾರತದ ಮೇಲಷ್ಟೇ ದಾಳಿ ಮಾಡಲಿವೆ. ಅಸ್ಸಾಂವರೆಗೂ ಪಾಕಿಸ್ತಾನ ದಾಳಿ ಮಾಡಬಲ್ಲದು. ಹೀಗಾಗಿ ಏನಾದರೂ ಸಂಭವಿಸಿದರೆ ಅದು ಅಂತ್ಯವಾಗಿರುತ್ತದೆ ಎಂಬುದು ಭಾರತಕ್ಕೂ ಗೊತ್ತಿದೆ’ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್‌ ರಶೀದ್‌ ಅವರು ಟೀವಿ ಚಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕ್ ದೋಸ್ತಿ ದೇಶಕ್ಕೆ ಅಮೀರ್ ಭೇಟಿ, ಸ್ವಾಮಿ ಕೊಟ್ಟ ಭರ್ಜರಿ ಏಟು!

ಪಾಕಿಸ್ತಾನ ಅಣು ಯುದ್ಧದ ಬೆದರಿಕೆಯೊಡ್ಡುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಹಿಂಪಡೆದಾಗ, ಆ ಸಂದರ್ಭದಲ್ಲಿ ತನ್ನ ನೆರವಿಗೆ ಜಾಗತಿಕ ಸಮುದಾಯ ನಿಲ್ಲದೇ ಇದ್ದಾಗ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರೇ ಅಣು ಯುದ್ಧ ಆಗುವ ಅಪಾಯವಿದೆ ಎಂದು ಬಿಂಬಿಸಲು ಯತ್ನಿಸಿ ವಿಫಲರಾಗಿದ್ದರು.