ಇಸ್ಲಮಾಬಾದ್(ಏ.20): ಕೊರೋನಾ ಅಟ್ಟಹಾಸ ಇಡೀ ದೇಶವನ್ನೇ ಆವರಿಸುತ್ತದೆ. ಈ ಹೊಸ ಬಗೆಯ ವೈರಸ್ ತಡೆಯುವ ನಿಟ್ಟಿನಲ್ಲಿ, ಆರೋಗ್ಯ ಅಧಿಕಾರಿಗಳು ಜನರ ಬಳಿ ಸಾಮಾಜಿಕ ಅಂತರ ಕಾಪಾಡಿ, ಕೈಗಳನ್ನು ಚೆನ್ನಾಗಿ ತೆಗೆದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೀಗ ಇವೆಲ್ಲದರ ನಡುವೆ ಪಾಕಿಸ್ತಾನದ ಸಚಿವೆಯೊಬ್ಬರು ಕೊರೋನಾ ತಡೆಯಲು ವಿಚಿತ್ರ ಐಡಿಯಾ ನೀಡಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ಪತ್ರಕರ್ತೆ ನಾಯಲಾ ಇನಾಯತ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ, ಇದು ಇಮ್ರಾನ್ ಸರ್ಕಾರದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಸಚಿವೆಯಾಗಿರುವ ಡಾ. ಫಿರ್ದೌಸ್ ಆಶಿಕ್ ಅವಾನ್ ವಿಡಿಯೋ ಇದಾಗಿದ್ದು, ಇದರಲ್ಲಿ ವಿಚಿತ್ರ ಸಲಹೆ ನೀಡಲಾಗಿದೆ. ಈ ವಿಡಿಯೋ ಟ್ವೀಟ್ ಮಾಡಿರುವ ಇನಾಯತ್ 'ವೈರಸ್ ಕೆಳಗಿಂದಲೂ ಅಟ್ಯಾಕ್ ಮಾಡುತ್ತದೆ ಎಂದು ಫಿರ್ದೌಸ್ ಹೇಳಿದ್ದಾರೆ' ಎಂಬ ತಲೆಬರಹ ನೀಡಿದ್ದಾರೆ.

ಸದ್ಯ ಸಚಿವೆಯ ಈ ವಿಚಿತ್ರ ಸಲಹೆ ಭಾರೀ ಟ್ರೋಲ್ ಆಗಿದ್ದು, ಜನರು ತಮಾಷೆ ಮಾಡಲಾರಂಭಿಸಿದ್ದಾರೆ.  ಅಲ್ಲದೇ ಈ ಸಲಹೆ ಸರಿಯಲ್ಲ, ವಿಶ್ವಸಂಸ್ಥೆ ಕೂಡಾ ಇಂತಹ ಸೂಚನೆ ನೀಡಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?

ಈ ವಿಡಿಯೋದಲ್ಲಿ ಕೊರೋನಾ ತಡೆಯಲು ಸಲೆ ನೀಡಿರುವ ಸಚಿವೆ ಫಿರ್ದೌಸ್ 'ನಿಮ್ಮ ದೇಹವಾಗಿರಲಿ ಅಥವಾ ಕಾಲುಗಳಾಗಿರಲಿ ಎಲ್ಲವನ್ನೂ ಕಾಪಾಡಿಕೊಳ್ಳಿ. ಕೇಲ ಮುಖ ಮುಚ್ಚಿಕೊಂಡರೆ ವೈರಸ್ ಅಟ್ಯಾಕ್ ಆಗುವುದಿಲ್ಲ ಎಂದಲ್ಲ, ಇದು ಕೆಳಗಿಂದ ಬರುತ್ತದೆ. ಹೀಗಾಗಿ ಎಚ್ಚರದಿಂದಿರಿ. ಎಲ್ಲಾ ವಿಚಾರದ ಕುರಿತು ಗಮನವಹಿಸಿ. ಇದು ಕೂಡಾ ಒಂದು ವೈದ್ಯಕೀಯ ವಿಜ್ಞಾನ ಎಂದಿದ್ದಾರೆ.